Raichur: ಸಹಾಯಧನ ಬಿಡುಗಡೆಗೆ 15 ಸಾವಿರ ಲಂಚ ಪಡೆದಿದ್ದ PDOಗೆ ಏಳು ವರ್ಷ ಜೈಲು ಶಿಕ್ಷೆ | Raichur 7 Years In Prison For Panchayat Development Officer Who Took Rs 15000 Bribe For Release Of Subsidy Money Mrq

Raichur: ಸಹಾಯಧನ ಬಿಡುಗಡೆಗೆ 15 ಸಾವಿರ ಲಂಚ ಪಡೆದಿದ್ದ PDOಗೆ ಏಳು ವರ್ಷ ಜೈಲು ಶಿಕ್ಷೆ | Raichur 7 Years In Prison For Panchayat Development Officer Who Took Rs 15000 Bribe For Release Of Subsidy Money Mrq



Raichur: ಸಹಾಯಧನ ಬಿಡುಗಡೆಗೆ 15 ಸಾವಿರ ಲಂಚ ಪಡೆದಿದ್ದ PDOಗೆ ಏಳು ವರ್ಷ ಜೈಲು ಶಿಕ್ಷೆ | Raichur 7 Years In Prison For Panchayat Development Officer Who Took Rs 15000 Bribe For Release Of Subsidy Money Mrq

ದನದ ಶೆಡ್ ನಿರ್ಮಾಣದ ಸಹಾಯಧನ ಬಿಡುಗಡೆ ಮಾಡಲು ₹15,000 ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗೊರೇಬಾಳ ಗ್ರಾಪಂ ಪಿಡಿಒಗೆ ನ್ಯಾಯಾಲಯವು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ರಾಯಚೂರು: ದನದ ಶೆಡ್ ನಿರ್ಮಿಸಲು ಸರ್ಕಾರದ ಸಹಾಯಧನ ಒದಗಿಸಲು ಲಂಚ ಪಡೆದ ಆರೋಪ ಸಾಬೀತು ಆಗಿದ್ದರಿಂದ 3ನೇ ಅಧಿಕ ಮತ್ತು ಸತ್ರ ನ್ಯಾಯಾಲಯ ಪಿಡಿಒಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಲಿಂಗಸಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ಲೋಕಪ್ಪ ಇವರು ದನದ ಶೆಡ್ ನಿರ್ಮಿಸಿದ್ದು, ಅದಕ್ಕೆ ಸಹಾಯಧನವಾಗಿ ಸರಕಾರದಿಂದ ಹಣ ಬಂದಿದ್ದು ಸದರಿ ಗೋರೆಬಾಳ ಗ್ರಾಪಂ ಪಿಡಿಒ ಮಹ್ಮದ್‌ ಖಾಜಾ ಇವರು ಸಹಾಯ ಧನದ ಹಣದ ಬಿಡುಗಡೆಗಾಗಿ 15 ಸಾವಿರ ರು. ಲಂಚದ ಬೇಡಿಕೆ ಇಟ್ಟಿದ್ದರು. ರಾಯಚೂರಿನ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠಾಸೀನ ಲಿಂಗಸುಗೂರ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಏಳು ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದ್ದಾರೆ. 

2017ರಲ್ಲಿ ಎಸಿಬಿಯಿಂದ ಬಂಧನ

ಕಳೆದ 2017 ನ.22 ರಂದು ಫಿಯಾರ್ದಿ ನೀಡಿದ ದೂರಿನ ಮೇಲೆ 15 ಸಾವಿರ ರು. ಲಂಚ ಪಡೆಯುವ ಸಮಯದಲ್ಲಿ ಎಸಿಬಿ ಪೊಲೀಸರಾದ ಶ್ರೀಧರ ದೊಡ್ಡಿ ಟ್ರಾಪ್ ಮಾಡಿ ಲಂಚದ ಸಮೇತ ಆರೋಪಿಯನ್ನು ಬಂದಿಸಿದ್ದು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ರಾಯಚೂರಿನ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೀಠಾಸಿನ ಲಿಂಗಸುಗೂರ ನ್ಯಾಯಾಧೀಶರು ಆರೋಪಿ ಗೆ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988 ರ ಕಲಂ 7 ರಡಿಯಲ್ಲಿ 25 ಸಾವಿರ ರು. ದಂಡ ಹಾಗೂ 3 ವರ್ಷ ಶಿಕ್ಷೆ ಹಾಗೂ ಕಲಂ 13 (1) (ಡಿ) ಸಹಿತ 13 (2) ಅಡಿ ಯಲ್ಲಿ 4 ವರ್ಷ ಜೈಲು ಶಿಕ್ಷೆ 50 ಸಾವಿರ ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ: ಶ್ರೀರಂಗಪಟ್ಟಣದ 21 ಗ್ರಾಮ ಪಂಚಾಯ್ತಿಗಳಿಂದ 2,83,34,944 ರೂ ಗುಳುಂ; ವ್ಯಾಪಕ ಅಕ್ರಮ

ಸುಳ್ಳು ಸಾಕ್ಷಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲು

ಸರ್ಕಾರಿ ಅಭಿಯೋಜಕ ಕೆ.ಬಸವರಾಜ ಹೊಸಹಳ್ಳಿ ಅವರು ಈ ಪ್ರಕರಣದಲ್ಲಿ ಲೋಕಾಯುಕ್ತರ ಪರವಾಗಿ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಪಿರ್ಯಾದಿದಾರನು ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ್ದು, ಸರ್ಕಾರಿ ಅಭಿಯೋಜಕರು ಪಿರ್ಯಾದಿಯ ಮೇಲೆ ಪ್ರತಿಕೂಲ ಸಾಕ್ಷಿ ನೀಡಿದ್ದಕ್ಕಾಗಿ ಕ್ರಮ ಕೈಕೊಳ್ಳುವಂತೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯದ ಶಿರಸ್ತೇದಾರರಿಗೆ ಪಿರ್ಯಾದುದಾರನಾದ ಚೇತನ ಲೋಕಪ್ಪ ಗೊರೇಬಾಳ ತಾಂಡಾ ಇವರ ಮೇಲೆ ನ್ಯಾಯಾಲಯಕ್ಕೆ ಸುಳ್ಳು ಸಾಕ್ಷಿ ನೀಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ಸಹ ನೀಡಿದೆ.

ಇದನ್ನು ಓದಿ: ಮಧುಗಿರಿ ತಾ.ಪಂ.ನಲ್ಲಿ ₹4.27 ಕೋಟಿ ಲೂಟಿ: ಕಾಂಗ್ರೆಸ್ ಮುಖಂಡ, ಎಸ್‌ಡಿಎ ಸೇರಿ 6 ಜನರ ವಿರುದ್ಧ FIR ದಾಖಲು!

Scroll to load tweet…



Source link

Leave a Reply

Your email address will not be published. Required fields are marked *