Headlines

TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ

TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ

TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?

ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು ಉದ್ಯೋಗಕ್ಕೆ ಬಿಡಲು ಹೆದರುವ ಸ್ಥಿತಿ ನಿರ್ಮಾಣ ಆಗಿರುವ ಆತಂಕಕಾರಿ ಘಟನೆ ನಡೆಯುತ್ತಿದೆ. ಎಜುಕೇಟೆಡ್​ ಎನ್ನಿಸಿಕೊಂಡಿರುವ ಹೆಣ್ಣುಮಕ್ಕಳ ಬ್ರೈನ್​ವಾಷ್​ ಮಾಡಿ ಲವ್​ಜಿಹಾದ್​ಗೆ ಬಳಸಿಕೊಂಡು, ಅವರ ಬಾಳನ್ನು ನರಕ ಮಾಡುತ್ತಿರುವ TCS ಕಾರ್ಪೋರೇಟ್ ಕಂಪೆನಿ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ದೇಶ ಬೆಚ್ಚಿಬಿದ್ದಿದೆ. ಇದರ ರೂವಾರಿಯೇ ನಿದಾ ಖಾನ್​.

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿರುವ ಅತೀ ದೊಡ್ಡ ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಈಗಾಗಲೇ 6 ಟೀಮ್ ಲೀಡರ್ಸ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (HR) ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.

ಇದರ ಬೆನ್ನಲ್ಲೇ ಇದೀಗ ಶಾಕಿಂಗ್​ ಎನ್ನುವಂಥ ಘಟನೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ದೆಹಲಿಯಲ್ಲಿ ಕಳೆದ ವರ್ಷ ನಡೆದಿರುವ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಈಕೆಯ ಕೈವಾಡ ಇದೆ ಎನ್ನುವ ಆತಂಕಕಾರಿ ವರದಿ ಇದೀಗ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಇದಾಗಲೇ ಬಂಧಿಸಲ್ಪಟ್ಟ ಡಾ. ಶಾಹೀನ್ ಶಾಹಿದ್ ಜೊತೆ ನಿದಾ ಖಾನ್​ಗೆ ಲಿಂಕ್​ ಇದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ!

ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿದಾ ಖಾನ್​ ಮತ್ತು ಶಾಹೀನ್​ ಶಾಹಿದ್​ ಸಂಪರ್ಕದಲ್ಲಿ ಇರುವುದು ತಿಳಿದುಬಂದಿದ್ದರೂ, ಬಾಂಬ್​ಬ್ಲಾಸ್​​ ಕೇಸ್​ ಬಗ್ಗೆ ಇನ್ನಷ್ಟೇ ಆಳವಾದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗ ಆರಂಭಿಕ ತನಿಖೆಯಿಂದ ಹಾಗೂ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಿದಾಗ, ನಿದಾ ಖಾನ್ ದೆಹಲಿಯಲ್ಲಿ ಡಾ. ಶಾಹೀನ್ ಶಾಹಿದ್ ಳನ್ನು ಭೇಟಿಯಾಗಿರುವುದು ಖಚಿತವಾಗಿದೆ.

ಕೆಂಪು ಕೋಟೆ ಸ್ಫೋಟ ಪ್ರಕರಣವು ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಒಳಗೊಂಡಿದ್ದರೆ, ನಾಸಿಕ್​ ಪ್ರಕರಣ, ಕೆಲಸದ ಸ್ಥಳದಲ್ಲಿ ಕಿರುಕುಳ, ಬಲವಂತ ಮತ್ತು ಉದ್ಯೋಗಿ ದೂರುಗಳ ಮೇಲೆ ಕ್ರಮ ಕೈಗೊಳ್ಳದಿರುವ ಆರೋಪದ ಮೇಲೆ ಕೇಂದ್ರೀಕೃತವಾಗಿದೆ. ಆದ್ದರಿಂದ ನಿದಾ ಖಾನ್ ಮತ್ತು ಡಾ. ಶಾಹೀನ್ ಶಾಹಿದ್ ನಡುವೆ ಯಾವುದೇ ನೇರ ಸಂಬಂಧದ ಅಧಿಕೃತ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.

ಲೈ0ಗಿಕ ಕಿರುಕುಳ, ಪ್ರೀತಿ ಹಾಗೂ ಮೋಸ, ಅತ್ಯಾ**ರ, ಮತಾಂತರ ಸೇರಿದಂತೆ 6ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದಿನ ಪ್ರಮುಖ ಆರೋಪಿಗಳ ಪೈಕಿ ಹೆಚ್ಆರ್ ನಿದಾ ಖಾನ್ ಕೂಡ ಒಬ್ಬರು. ಟಿಸಿಎಸ್ ಕಂಪನಿಯಲ್ಲಿ ತಮ್ಮ ಸಮುದಾಯದವರಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶ ನೀಡುತ್ತಿದ್ದ ನಿಧಾ ಖಾನ್ ಬಳಿಕ ಲವ್ ಜಿಹಾದ್‌ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

Source link

Leave a Reply

Your email address will not be published. Required fields are marked *