Headlines

National Highway 52 accident: ಅಂಕೋಲಾ: ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ | Chemical Tanker Explodes On National Highway 52 Near Ankola Driver Missing

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿ ಉರಿದಿದೆ. ಘಟನೆಯ ನಂತರ ಚಾಲಕ ನಾಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹೆದ್ದಾರಿ 52ರಲ್ಲಿ ರಾಸಾಯನಿಕ ಟ್ಯಾಂಕರ್ ಸ್ಫೋಟ, ಚಾಲಕ ನಾಪತ್ತೆ

ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲೇ ಟ್ಯಾಂಕರ್‌ವೊಂದು ಸ್ಫೋಟವಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಘಟನೆ ನಡೆದಿದ್ದು, ರಾಸಾಯನಿಕ ತುಂಬಿದ ಟ್ಯಾಂಕರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದಿದೆ.

ಹೆದ್ದಾರಿಯಲ್ಲೇ ಧಗಧಗನೇ ಹೊತ್ತಿ ಉರಿದ ಟ್ಯಾಂಕರ್

ಘಟನೆಯ ಬಳಿಕ ಟ್ಯಾಂಕರ್ ಚಾಲಕನ ಸುಳಿವು ಯಾರಿಗೂ ಸಿಕ್ಕಿಲ್ಲ, ಹೀಗಾಗಿ ಚಾಲಕ ಈ ಬೆಂಕಿಗೆ ಸಿಲುಕಿರಬಹುದೇ ಎಂಬ ಅನುಮಾನ ಮೂಡಿದೆ. ಟ್ಯಾಂಕರ್ ಧಗಧಗನೇ ಹೊತ್ತಿ ಉರಿಯುತ್ತಿರುವ ಹಿನ್ನೆಲೆ ಟ್ಯಾಂಕರ್‌ನ ಹತ್ತಿರ ಯಾರಿಗೂ ಹೋಗಲಾಗದಂತಹ ಸ್ಥಿತಿ ಇದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಬಳಿ ಈ ಘಟನೆ ನಡೆದಿದೆ.

ಹುಬ್ಬಳ್ಳಿ-ಅಂಕೋಲಾ ಸಂಚಾರ ಸಂಪೂರ್ಣ ಸ್ಥಗಿತ.

ಘಟನೆಯ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಅಂಕೋಲಾದಿಂದ ಹುಬ್ಬಳ್ಳಿ ಸಂಪರ್ಕಿಸುವ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಂಕಿಯಿಂದಾಗಿ ಟ್ಯಾಂಕರ್ ಧಗಧಗಿಸಿ ಹೊತ್ತಿ ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಿಗೆ ಆಕಾಶಕ್ಕೆ ಚಾಚಿದೆ ದಟ್ಟ ಹೊಗೆ ಅಲ್ಲಿ ಮೇಲೆರುತ್ತಿದೆ. ಸ್ಥಳಕ್ಕೆ ಅಂಕೋಲಾ ಪೋಲಿಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೇವಲ ಒಂದು ದಿನದ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

Source link

Leave a Reply

Your email address will not be published. Required fields are marked *