ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ ವಿಸ್ತರಣೆ, ಎಷ್ಟು ವರ್ಷ?

ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಸೇವಾವಧಿ ವಿಸ್ತರಣೆ, ಎಷ್ಟು ವರ್ಷ?


ಬೆಂಗಳೂರು, (ಏಪ್ರಿಲ್ 16): ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ(ಡಿಜಿ-ಐಜಿಪಿ) ಎಂ.ಎ.ಸಲೀಂ (ಡಿಜಿ ಮತ್ತು ಐಜಿಪಿ ಡಾ. ಎಂ.ಎ ಸಲೀಂ) ಸೇವಾವಧಿಯನ್ನು ವಿಸ್ತರಿಸಲಾಗಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಎ.ಸಲೀಂ ಅವರ ಸೇವಾವಧಿಯನ್ನು 2027ರ ಆ.29ರವರೆಗೆ ವಿಸ್ತರಣೆ ರಾಜ್ಯ ಸರ್ಕಾರ ಇಂದು ಏಪ್ರಿಲ್ 16) ಆದೇಶ ಹೊರಡಿಸಿದೆ. 1993 ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು, ಈ ವರ್ಷದ ಜೂನ್‌ನಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ, 22.09.2006ರ ಅನುರೂಪ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ.



Source link

Leave a Reply

Your email address will not be published. Required fields are marked *