ದಿನ ಭವಿಷ್ಯ: ಇಂದು ಈ ರಾಶಿಯವರ ಮನೋಭಾವ ಎಲ್ಲದಕ್ಕೂ ನಕಾರಾತ್ಮಕವಾಗಿ ಇರಲಿದೆ

ದಿನ ಭವಿಷ್ಯ: ಇಂದು ಈ ರಾಶಿಯವರ ಮನೋಭಾವ ಎಲ್ಲದಕ್ಕೂ ನಕಾರಾತ್ಮಕವಾಗಿ ಇರಲಿದೆ


ಮೇಷ ರಾಶಿ :

ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಒಳ್ಳೆಯ ವ್ಯಕ್ತಿಗಳ ಪರಿಚಯದಿಂದ ಲಾಭ ಸಿಗಬಹುದು. ಗೃಹದಲ್ಲಿ ಸಂಭ್ರಮ. ಸ್ತ್ರೀಯರ ಮೂಲಕ ಸಹಾಯವಾಗುತ್ತದೆ. ಕುಟುಂಬದಲ್ಲಿ ಹೆಚ್ಚು ನೆಮ್ಮದಿ ಅನುಭವಿಸುತ್ತೀರಿ. ಶ್ರದ್ಧಾ, ನಂಬಿಕೆಯಿಂದ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ. ವಾಹನ ಚಾಲನೆಯಿಂದ ಆಯಾಸವಾದೀತು. ನಿಮ್ಮದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದು ಖಾಲಿಯಾಗುವುದು.

ವೃಷಭ ರಾಶಿ:

ಸೋಮಾರಿತನದಿಂದ ಯಾವುದೇ ಅವಕಾಶವನ್ನು ತಪ್ಪುವಂತೆ ಮಾಡಿಕೊಳ್ಳಬೇಡಿ. ನಿಮ್ಮ ಶ್ರಮಕ್ಕೆ ಖಂಡಿತ ನೀವು ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವಿರುವುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ಉಪಕಾರದ ಕೃತಜ್ಞತೆ ಇರಲಿ. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಿದೆ. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ.

ಮಿಥುನ ರಾಶಿ:

ಅಯಾಸವಿದ್ದರೂ ಇತರರ ಒತ್ತಾಯಕ್ಕೆ ವಾಯುವಿಹಾರಕ್ಕೆಂದು ಹೋಗುವಿರಿ. ಸಾಮಾಜಿಕವಾಗಿ ನಿಮಗೆ ಗೌರವ ಸಿಗುತ್ತದೆ. ಆರೋಗ್ಯ ಉತ್ತಮವಾಗಿದೆ. ಪ್ರಾಯಾಣಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಿತ್ರರಿಂದ ಸಂತೋಷದ ಸುದ್ದಿ ಕೇಳಬಹುದು. ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಬೇರೆಯವರು ತಿಳಿಸಬೇಕಾಗುವುದು.

ಕರ್ಕಾಟಕ ರಾಶಿ:

ನಿಮ್ಮ ಸೋಮಾರಿತನದಿಂದ ಕೆಲಸಗಳು ಸ್ಥಗಿತಗೊಳ್ಳಬಹುದು. ಸೋಮಾರಿತನದಿಂದ ನಿಮ್ಮ ಸಮಯ ವ್ಯರ್ಥವಾಗಬಾರದು. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ವಹಿಸುವ ಅವಶ್ಯಕತೆ ಇದೆ. ಹಣಕಾಸು ಸ್ಥಿತಿ ಸ್ಥಿರವಾಗಿದೆ. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇತರರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸ ಕಾರ್ಯವನ್ನು ಹಾಳುಮಾಡಬಹುದು.

ಸಿಂಹ ರಾಶಿ:

ಈ ದಿನ ನಿಮಗೆ ಬದಲಾವಣೆಗಳ ಸಮಯ, ಹೊಸ ಜನರ ಪರಿಚಯದಿಂದ ಹೊಸ ವಿಚಾರಗಳು ಬರುತ್ತವೆ. ಈ ವೇಳೆ ಕುಟುಂಬದಲ್ಲಿ ಗೊಂದಲ ಉಂಟಾಗಿ ದೂರ ಇಡಲು ಯತ್ನಿಸಿದರು. ದುರಭ್ಯಾಸದಿಂದ ಎಲ್ಲ ಬಳಿಯಿಂದ ನಿಂದನೆ. ಇಂದು ನಿಮಗೆ ದಾನ ಮಾಡುವ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿ ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ ನಂಬಿಕೆಯು ಕಡಿಮೆಯಾಯಿತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ.

ಕನ್ಯಾ ರಾಶಿ:

ಉತ್ಸಾಹ, ತಾಳ್ಮೆ ನಿಮಗೆ ಈ ದಿನ ಹೊಸ ಶಕ್ತಿ ನೀಡಲಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವ ಸಾಧ್ಯತೆಯಿದೆ. ಆರ್ಥಿಕ ಲಾಭ ಸಂಭವಿಸಬಹುದು. ಖರೀದಿ ಅಥವಾ ಅಲಂಕಾರಿಕ ವಸ್ತು ಖರೀದಿಸುವ ಸಾಧ್ಯತೆಯಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು.

ತುಲಾ ರಾಶಿ:

ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಆಸ್ತಿ ಸಂಬಂಧಿ ಸಮಸ್ಯೆ ಎದುರಾಗಬಹುದು. ಮೋಸ ಹೋಗಬಹುದಾದ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ಅಪರಿಚಿತರಿಂದ ದೂರವಿರಿ. ಹೊಸ ಕಾರ್ಯ ಆರಂಭಿಸಲು ಇದು ಯೋಗ್ಯ ಕಾಲವಲ್ಲ. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು.

ವೃಶ್ಚಿಕ ರಾಶಿ:

ಕಲಾವಿದರಿಗೆ ಗಲಿಬಿಲಿಯ ಸನ್ನಿವೇಶವು ಬರಲಿದೆ. ಕೋಪ ನಿಯಂತ್ರಣದಲ್ಲಿ ಇಡಬೇಕು. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಸಾಧ್ಯ. ಎಚ್ಚರಿಕೆಯಿಂದ ನಿಮ್ಮ ಗುರಿಯಿಂದ ದೂರವಿರಬಹುದಾಗಿದೆ. ಅತಿಯಾದ ಆಲೋಚನೆ ತಪ್ಪಿಸಿ ದೃಢ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿರಿಯರ ಸಲಹೆ ನಿಮಗೆ ಒಳಿತಾಗಬಹುದು. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗವಹಿಸುವವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು.

ಧನು ರಾಶಿ:

ಮನೆಗೆ ವಿಚಾರಗಳಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಸಮಯ. ತುರ್ತಿಲ್ಲದ ಕಾರ್ಯಗಳನ್ನು ಮುಂದೂಡಬಹುದು. ಮನೆಯ ಸಮಸ್ಯೆಗಳು ಹೆಚ್ಚಾದಂತೆ ತೋರುವುದು. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಇಂದು ಶುಭದಿನ. ಆತ್ಮಪ್ರಶಂಸೆಗೆ ಸರಿಯಾಗಿ ಕಾರಣವಿರಲಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡಿ. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು.

ಮಕರ ರಾಶಿ:

ಕುಟುಂಬದಲ್ಲಿ ಇಂದು ಸಂತಸದ ಸಮಯ ಇರಲಿದೆ. ನಿರ್ಣಯ ತೆಗೆದುಕೊಳ್ಳುವ ಮೊದಲು ಎಲ್ಲರ ಅಂಶಗಳನ್ನು ಪರಿಗಣಿಸಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ನಿಮ್ಮ ಕೆಲಸದಿಂದ ಮನೆಯ ಹಿರಿಯರು ಕೋಪಗೊಳ್ಳುವರು. ತಾಳ್ಮೆ ಹಾಗೂ ಏಕಾಗ್ರತೆಯಿಂದ ದಿನವನ್ನು ಮುನ್ನಡೆಸುವಿರಿ. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ನಿಮ್ಮ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವಾಗುತ್ತದೆ. ಲಾಭದ ಮುಂದೆ ಆಯಾಸವು ನಗಣ್ಯ ಪ್ರಶಸ್ತಿ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ.

ಕುಂಭ ರಾಶಿ:

ಇಂದು ಮನೆಗೆ ದೂರದ ಬಂಧಗಳು ಅನಿರೀಕ್ಷಿತ ಭೇಟಿ ನೀಡಬಹುದು, ಈ ವೇಳೆ ಖರ್ಚು ಕೂಡ ಅಧಿಕವಾಗಿದೆ. ಹಣದ ವ್ಯವಹಾರಗಳಲ್ಲಿ ಇತರರ ಸಲಹೆಯನ್ನು ತೆಗೆದುಕೊಳ್ಳಲಾಗಿದೆ. ಮನೋರಂಜನೆಯ ಸ್ನೇಹಿತರ ಜೊತೆ ಸಮಯ ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು.

ಮೀನ ರಾಶಿ:

ಹಣವನ್ನು ಯತ್ನದಲ್ಲಿ ಉಳಿಸಲು. ಬಹುಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ತಿಯಾಗುವ ಸಾಧ್ಯತೆಯಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಕುಟುಂಬದಲ್ಲಿ ಹರ್ಷಮಯ ವಾತಾವರಣ. ಒಂದು ಶುಭ ಸಂದೇಶ ನಿಮಗೆ ತಲುಪಬಹುದು. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಬಹುದು. ಮನಸ್ಸು ಅಮೂರ್ತವಾದ ಆನಂದದಲ್ಲಿ ಇರಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಸಂತ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯ, ನಿತ್ಯನಕ್ಷತ್ರ : ಭರಣೀ, ಯೋಗ :ೇಂದ್ರ, ಕರಣ : ಚತುಷ್ಪಾತ್, ಸೂರ್ಯ –10 am, 6. 37 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:51 – 12:24, ಯಮಗಂಡ ಕಾಲ 15:30 – 17:04, ಗುಳಿಕ ಕಾಲ 07:44 – 09:18

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *