Headlines

TCS Corporate Jihad ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು | Tcs Corporate Jihad Row Shocking Allegations Of Workplace Harassment Emerge

ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು, ಟಿಸಿಎಸ್ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷರ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಿರುವುದು ಬಯಲಾಗಿದೆ.

ನಾಸಿಕ್ (ಏ.17) ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಕಂಪನಿಯಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಜಿಹಾದ್ ಕುರಿತು ನಾಸಿಕ್ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿದ್ದಾರೆ. ಈ ಸಂಬಂಧ ಕಂಪನಿ ಹೆಚ್ಆರ್ ನಿದಾ ಖಾನ್ ಸೇರಿದಂತೆ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮಹಿಳಾ ಉದ್ಯೋಗಿಗಳ ಅತ್ಯಾ**ರ, ಲವ್ ಜಿಹಾದ್ ಪ್ರಕರಣ ತನಿಖೆ ತೀವ್ರಗೊಂಡಂತೆ ಇದೀಗ ಕೆಲ ಸ್ಫೋಟಕ ಮಾಹಿತಿ ಬಯಲಾಗಿದೆ. ಪುರುಷ ಉದ್ಯೋಗಳ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಲಾಗಿದೆ. ಕೆಲ ಉದ್ಯೋಗಿಗಳ ಹೆಂಡತಿಯನ್ನು ತಮ್ಮ ಬಳಿ ಕಳುಹಿಸು ಎಂದು ಅಲ್ಪಸಂಖ್ಯಾತ ಸಮುದಾಯದ ಟೀಂ ಲೀಡರ್ಸ್ ಹೇಳಿರುವುದು ಮಾತ್ರವಲ್ಲ, ಕಳುಹಿಸದೇ ಇದ್ದ ಉದ್ಯೋಗಿಗಳಿಗೆ ಕಲ್ಮಾ ಪಠಿಸುವಂತೆ, ನಮಾಜ್ ಮಾಡುವಂತೆ ಬೆದರಿಸಿದ ಘಟನೆಯೂ ನಡೆದಿದೆ.

ಕಚೇರಿಯಲ್ಲಿ ಜಿಹಾದ್

ಟಿಸಿಎಸ್‌ ಕಚೇರಿಯಲ್ಲಿ ಜಿಹಾದ್‌ ನಡೆಸುತ್ತಿದ್ದ ಆರೋಪಿಗಳು ಕೇವಲ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ. ಪುರುಷರಿಗೂ ಅವರ ಪತ್ನಿಯನ್ನು ತಮ್ಮ ಬಳಿ ಕಳಿಸುವಂತೆ ಕಿರುಕುಳ ನೀಡುತ್ತಿದ್ದರು. ಒಪ್ಪದಿದ್ದಾಗ ಮುಸ್ಲಿಮರ ಟೋಪಿ ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್‌ ಮಾಡುವಂತೆ ಪೀಡಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಈ ಬಗ್ಗೆ ಉದ್ಯೋಗಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ‘ನಿನಗೆ ಮಕ್ಕಳಾಗಿಲ್ಲ. ಹೀಗಾಗಿ ನಿನಗೆ ಮಗು ಬೇಕೆಂದರೆ, ಹೆಂಡತಿಯನ್ನು ನಮ್ಮ ಬಳಿ ಕಳಿಸು ಎಂದು ಟೀಂ ಮುಖ್ಯಸ್ಥ ತೌಸಿಫ್‌ ಅಖ್ತರ್‌, ಡ್ಯಾನಿಷ್‌ ಶೇಖ್‌ ಹಾಗೂ ಇತರರು ಅವಾಚ್ಯವಾಗಿ ಮಾತಾಡುತ್ತಿದ್ದರು. ಒಪ್ಪದೇ ಇದ್ದಾಗ ಮುಖ್ಯ ಕಚೇರಿಗೆ ನನ್ನ ಬಗ್ಗೆ ಸುಳ್ಳು ವರದಿ ಕಳಿಸುತ್ತಿದ್ದರು. ಮುಸ್ಲಿಂ ಟೋಪಿ ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್‌ ಮಾಡುವಂತೆ ಪೀಡಿಸುತ್ತಿದ್ದರು. ಒಮ್ಮೆಯಂತೂ ಸಿಟ್ಟಿಗೆದ್ದ ಡ್ಯಾನಿಷ್‌ ನನ್ನ ಮೇಲೆ ಫ್ಯಾನ್‌ ಎಸೆದು, ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ’ ಎಂದು ಅಳಲು ತೋಡಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *