Headlines

ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡ ಸಂಧು ಅವರಿಗೆ ಟ್ರಂಪ್ ಅಭಿನಂದನೆ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡ ಸಂಧು ಅವರಿಗೆ ಟ್ರಂಪ್ ಅಭಿನಂದನೆ


ನವದೆಹಲಿ, ಏಪ್ರಿಲ್ 17: ದೆಹಲಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಅನುಭವಿ ರಾಜತಾಂತ್ರಿಕ ತರಂಜಿತ್ ಸಿಂಗ್ ಸಂಧು ಅವರಿಗೆ ಜಾಗತಿಕ ಮಟ್ಟದ ಪ್ರಶಂಸೆ ಹರಿದುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(ಡೊನಾಲ್ಡ್ ಟ್ರಂಪ್) ಅವರು ಶುಕ್ರವಾರ ಸಂಧು ಅವರನ್ನು ಅಭಿನಂದಿಸಿದರು, ದೆಹಲಿಯ ಪ್ರಗತಿಯಲ್ಲಿ ಅವರ ಪಾತ್ರ ನಿರ್ಣಾಯಕ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಮೆಚ್ಚುಗೆ
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಸಂಧು ಅವರ ಕುರಿತು ಬರೆದುಕೊಂಡಿರುವ ಟ್ರಂಪ್, ದೆಹಲಿಯ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿರುವ ತರಂಜಿತ್ ಸಂಧು ಅವರಿಗೆ ಅಭಿನಂದನೆಗಳು, ಒಬ್ಬ ಅನುಭವಿ ರಾಜತಾಂತ್ರಿಕರಾಗಿ ಅವರು ಯಾವಾಗಲೂ ಅಮೆರಿಕ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿದ್ದಾರೆ. ಅವರ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಹರಸಿದ್ದಾರೆ.

ರಾಜತಾಂತ್ರಿಕ ಚತುರ ಸಂಧು
ತರಂಜಿತ್ ಸಿಂಗ್ ಸಂಧು ಅವರು ಕೇವಲ ಅಧಿಕಾರಿಯಲ್ಲ, ಬದಲಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವನಿಯಾಗಿದ್ದಾರೆ.

ಅಮೆರಿಕದಲ್ಲಿ ರಾಯಭಾರಿ: 2020 ರಿಂದ 2024ರವರೆಗೆ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಶ್ವೇತಭವನದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಭಾರತೀಯ ವಿದೇಶಾಂಗ ಸೇವೆಯಿಂದ (IFS) ನಿವೃತ್ತರಾದ ನಂತರ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದರು.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ

2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಸೇರಿದ ಸಂಧು ಅವರನ್ನು ಅಮೃತಸರ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು. ಆದರೆ, ಆ ಚುನಾವಣೆಯಲ್ಲಿ ಅವರಿಗೆ ಜಯ ಸಿಗಲಿಲ್ಲ. ಆದರೂ ಅವರ ಅನುಭವ ಮತ್ತು ಆಡಳಿತಾತ್ಮಕ ಕೌಶಲ್ಯವನ್ನು ಗುರುತಿಸಿದ ಕೇಂದ್ರ ಸರ್ಕಾರ, ಮಾರ್ಚ್ 5 ರಂದು ತನ್ನ ದೇಶದ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ಆಗಿ ದೆಹಲಿಯನ್ನು ನೇಮಿಸಿತು.

ದೆಹಲಿಯ ಪ್ರಗತಿಗೆ ಹೊಸ ಭರವಸೆ
ಒಬ್ಬ ಅನುಭವಿ ರಾಜತಾಂತ್ರಿಕ ದೆಹಲಿಯ ಎಲ್‌ಜಿಯಾಗಿ ನೇಮಕಗೊಂಡಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಆಡಳಿತಾತ್ಮಕ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ನಗರವನ್ನು ಜಾಗತಿಕ ಮಟ್ಟದ ಸುಸಜ್ಜಿತ ರಾಜಧಾನಿಯನ್ನಾಗಿ ಮಾಡುವಲ್ಲಿ ಸಂಧು ಅವರ ಅಂತರರಾಷ್ಟ್ರೀಯ ಅನುಭವ ಸಹಕಾರಿಯಾಗಲಿದೆ ಎಂಬುದು ದೆಹಲಿಯ ಅಭಿಪ್ರಾಯ.

ಒಬ್ಬ ಭಾರತೀಯ ಅಧಿಕಾರಿಯ ನೇಮಕಕ್ಕೆ ಅಮೆರಿಕ ಅಧ್ಯಕ್ಷರು ಬಹಿರಂಗವಾಗಿ ಅಭಿನಂದನೆ ಸಲ್ಲಿಸಿರುವುದು ಸಂಧು ಅವರ ವ್ಯಕ್ತಿತ್ವ ಮತ್ತು ಅವರ ಕೆಲಸದ ಪ್ರಭಾವವನ್ನು ಎತ್ತಿ ತೋರಿಸಿದೆ. ದೆಹಲಿಯ ಅಭಿವೃದ್ಧಿಯ ಹಾದಿಯಲ್ಲಿ ಸಂಧು ಯಾವ ರೀತಿ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬುದು ಈಗ ಎಲ್ಲರ ಕುತೂಹಲವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 9:30 am, ಶುಕ್ರವಾರ, 17 ಏಪ್ರಿಲ್ 26





Source link

Leave a Reply

Your email address will not be published. Required fields are marked *