Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್ ದಿವಾನ್ ದಿವಾಳಿಯಾದ್ರೆ, ಗೌತಮ್ ದಿವಾನ್ ಹೊಸ ಸಾಮ್ರಾಜ್ಯ ಕಟ್ಟಿದರೆ ಈ ಸೀರಿಯಲ್ ಅಂತ್ಯಕ್ಕೆ ಬಂದಂತೆ. ಗೌತಮ್ ಮಗಳ ಹುಡುಕಾಟವನ್ನು ಕೂಡ ಮಾಡಬೇಕಿತ್ತು. ಈ ಬಗ್ಗೆ ರಾಜೇಶ್ ನಟರಂಗ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಈಗ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಇನ್ನೊಂದು ಕಡೆ ಅವನು ಕಟ್ಟಿದ ಸಾಮ್ರಾಜ್ಯವನ್ನು ಜಯದೇವ್ ದಿವಾನ್ ಕಿತ್ತುಕೊಂಡು ಕಳ್ಳಾಟ ಆಡೋಕೆ ಹೋಗಿ ಸಮಾಧಿ ಆಗೋ ಎಲ್ಲ ಲಕ್ಷಣ ಕಾಣುತ್ತಿದೆ. ಇದನ್ನೆಲ್ಲ ನೋಡಿದರೆ ಸೀರಿಯಲ್ ಎಂಡ್ ಆಗಲಿದೆಯಾ ಎಂಬ ಡೌಟ್ ಬರುವುದು.

ಈಗಾಗಲೇ ಆರ್ಥಿಕವಾಗಿ ಸಿಕ್ಕಾಪಟ್ಟೆ ನಷ್ಟ ಕಂಡಿರುವ ಜಯದೇವ್, ತನ್ನ ತಾಯಿ ಶಕುಂತಲಾಳನ್ನು ಕೂಡ ಮನೆಯಿಂದ ಹೊರಗಡೆ ಹಾಕಿದ್ದಾನೆ ಎನ್ನಲಾದ ಪ್ರೋಮೋ ಕೂಡ ಔಟ್ ಆಗಿದೆ. ಹೀಗಾಗಿ ಜಯದೇವ್ಗೆ ಸಪೋರ್ಟ್ ಅಂತ ಮಾಡೋರು ಯಾರೂ ಇಲ್ಲ. ಇನ್ನು ದಿಯಾ ಕೂಡ ಯಾವಾಗ ಬೇಕಿದ್ರೂ ಜಯದೇವ್ ಮನೆಯಿಂದ ಹೊರಡಲೂಬಹುದು.

ಅಮೃತಧಾರೆ ಧಾರಾವಾಹಿ ಬಗ್ಗೆ ಜನರಿಗೆ ಇಷ್ಟವಾಗಿದೆ. ಯಾರೋ ಅದೃಷ್ಟ ಮಾಡಿದ್ದಾರೋ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ. ಜನರು ಇಷ್ಟಪಟ್ಟಿರೋದು ಖುಷಿ ಕೊಟ್ಟಿದೆ. ನಾವು ಕೆಲಸವನ್ನು ಮಾಡ್ತಿದ್ದೀವಿ, ಇಲ್ಲಿ ಎಲ್ಲರ ಶ್ರಮವಿದೆ ಎಂದು ರಾಜೇಶ್ ನಟರಂಗ ಹೇಳಿದ್ದಾರೆ.

ಗೌತಮ್ ದಿವಾನ್ ಹಾಗೂ ಜಯದೇವ್ ಜಟಾಪಟಿ ಸದ್ಯದಲ್ಲೇ ಆಗುತ್ತಿದೆ. ಸೀರಿಯಲ್ ಹಾಗೂ ಜಟಾಪಟಿ ಎಂಡ್ ಆಗತ್ತೆ, ಅದು ಯಾವಾಗ ಅಂತ ಗೊತ್ತಿಲ್ಲ. ಸೀರಿಯಲ್ ಎಪಿಸೋಡ್ ಎಲ್ಲಿಯವರೆಗೆ ಮುಂದುವರೆಸಬೇಕು ಎನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಇದನ್ನು ನಮ್ಮ ಜೊತೆ ಚರ್ಚೆ ಮಾಡೋದಿಲ್ಲ ಎಂದು ರಾಜೇಶ್ ನಟರಂಗ ಹೇಳಿದ್ದಾರೆ.

Source link
No 1 ಆಗಿ ಮೆರೆದಿದ್ದ ಜನಪ್ರಿಯ ಧಾರಾವಾಹಿ ಅಂತ್ಯ ಆಗ್ತಿದ್ಯಾ? ಹೀರೋ ಕ್ಲಾರಿಟಿ ಕೊಟ್ರು!