Why do fast bowlers cut their shoes: ಕ್ರಿಕೆಟ್ ಲೋಕದಲ್ಲಿ ವೇಗದ ಬೌಲರ್‌ಗಳು ತಮ್ಮ ಶೂಗಳ ಮುಂಭಾಗವನ್ನು ಏಕೆ ಕತ್ತರಿಸುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು, ಕಾರಣವಿದೆ. ಫಾಸ್ಟ್ ಬೌಲರ್‌ಗಳು ತಮ್ಮ ಬೌಲಿಂಗ್ ಶೂಗಳ ಮುಂಭಾಗದ (ಬೆರಳಿನ ಭಾಗ) ಕತ್ತರಿಸುತ್ತಾರೆ. ಇದಕ್ಕೆ ಕಾರಣ ಇದೆ.

ಬೌಲಿಂಗ್ ಮಾಡುವಾಗ ಮುಂಗಾಲು ನೆಲಕ್ಕೆ ಅಪ್ಪಳಿಸಿದಾಗ, ಹೆಬ್ಬೆರಳು ಸಹಜವಾಗಿಯೇ ಶೂನ ಒಳಗೆ ಮುಂದಕ್ಕೆ ನೂಕಲ್ಪಡುತ್ತದೆ. ಅತಿ ವೇಗದಲ್ಲಿ ಓಡಿ ಬಂದು ಪದೇ ಪದೇ ಹೀಗೆ ಮಾಡಿದಾಗ, ಬೆರಳು ಶೂನ ಮುಂಭಾಗಕ್ಕೆ ಹೋಗಿ ಬಡಿಯುತ್ತಲೇ ಇರುತ್ತದೆ.

ಒಂದಿಷ್ಟು ಟೈಮ್ ಆದ್ಮೇಲೆ ಆ ಒತ್ತಡವು ಹೆಚ್ಚಾಗಿ ವಿಪರೀತ ನೋವು ಆಗುವುದು, ಉಗುರು ಕಟ್ ಆಗುವುದು. ಕೆಲವು ಸಂದರ್ಭಗಳಲ್ಲಿ ಸೋಂಕಿ ಆಗಬಹುದು.

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೌಲರ್‌ಗಳು ಶೂನ ಮುಂಭಾಗವನ್ನು ಕತ್ತರಿಸುತ್ತಾರೆ. ಇದು ಹೆಬ್ಬೆರಳು ಆರಾಮಾಗಿ ಚಲಿಸಲು ಜಾಗ ಕೊಡುವುದು. ಇದರಿಂದ ಪದೇ ಪದೇ ಕಾಲಿಗೆ ಸಮಸ್ಯೆ ಆಗೋದಿಲ್ಲ. ಮುಕ್ತವಾಗಿ ಚಲಿಸಲು ಜಾಗ ಸಿಗುವುದು. ಕಾಲು ನೆಲಕ್ಕೆ ತಾಕುವ ಪ್ರಕ್ರಿಯೆ ಕೂಡ ಆರಾಮದಾಯಕ ಆಗಿರುವುದು.

ಇದು ನೋಡಲು ವಿಚಿತ್ರವಾಗಿ ಕಂಡರೂ, ಕ್ರಿಕೆಟಿಗರು ಎದುರಿಸುವ ಒಂದು ಗಂಭೀರ ಸಮಸ್ಯೆಗೆ ಇದೊಂದು ನಿಜಕ್ಕೂ ಜಾಣ್ಮೆಯ ಪರಿಹಾರವಾಗಿದೆ.

Source link
ಕ್ರಿಕೆಟ್ ಆಡುವಾಗ ಫಾಸ್ಟ್ ಬೌಲರ್‌ಗಳು ಯಾಕೆ ಬ್ರ್ಯಾಂಡ್ ಶೂ ಮುಂಭಾಗವನ್ನೂ ಯಾಕೆ ತೂತು ಮಾಡ್ತಾರೆ?