ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!

ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!


ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!
ಚಿತ್ರ ಕ್ರೆಡಿಟ್ ಮೂಲ: ಈಶ್ವರ್ ಖಂಡ್ರೆ ಫೇಸ್ಬುಕ್ ಖಾತೆ

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ನಾಲ್ಕು ಚೀತಾಗಳನ್ನು (ಚಿರತೆ) ಸ್ವಾಗತಿಸಿದ್ದಾರೆ. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ಸರಕು ಸಾಗಣೆ ಸ್ಥಳಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾದ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡರು.

ಚೀತಾಗಳಿಗೆ ಹಾನಿಯಾಗದಂತೆ ವಿಶೇಷ ಕಾಳಜಿ

ಚೀತಾಗಳಿಗೆ ಹವಾಮಾನ ಮತ್ತು ಪರಿಸರ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಕ್ವಾರಂಟೈನ್ ವ್ಯವಸ್ಥೆ, 30 ದಿನಗಳ ನಿಯೋಜಿತ ಆಹಾರ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೀವ ವೈವಿಧ್ಯ ಉದ್ಯಾನಕ್ಕೆ ಸಾಗಿಸುವ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ.

ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಚೀತಾಗಳು ಸಂಪೂರ್ಣವಾಗಿ ಈಗ ಅಳಿದು ಹೋಗಿವೆ. ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಮ್ಮ ಫೆಸ್ಬುಕ್ ಖಾತೆಯಲ್ಲಿ ಸಚಿವರು ಪೋಸ್ಟ್ ಮಾಡಿದ್ದಾರೆ. ಚೀತಾಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಅತ್ಯಂತ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಸೂಚಿಸಿದ್ದಾರೆ.

‘ಪ್ರಾಜೆಕ್ಟ್ ಚೀತಾ’

ಭಾರತಕ್ಕೆ ಆಫ್ರಿಕನ್ ಚೀತಾಗಳನ್ನು ತರುವುದು ಇದೆ ಮೊದಲಲ್ಲ. 2022ರಲ್ಲಿ ಕೇಂದ್ರ ಸರ್ಕಾರದ ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ಪಾರ್ಕ್‌ಗೆ ತರಲಾಯಿತು. ಆದರೆ, ರೇಡಿಯೋ ಕಾಲರ್‌ಗಳಿಂದ ಚರ್ಮದ ಸೋಂಕು (ಸೆಪ್ಟಿಸೆಮಿಯಾ), ತೀವ್ರ ತಾಪಮಾನ ಮತ್ತು ಹವಾಮಾನ ವೈಪರೀತ್ಯ ಹಾಗೂ ಪರಸ್ಪರ ಕಾಳಗಗಳಿಂದ ಮರಿಗಳೂ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಚೀತಾಗಳು ಕಾಣಿಸಿಕೊಂಡಿದ್ದವು. ಈ ತೊಂದರೆಗಳಿಂದ ಪಾಠ ಕಲಿತಿರುವ ಕರ್ನಾಟಕ ಅರಣ್ಯ ಇಲಾಖೆ, ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *