‘ಭೂತ್ ಬಂಗ್ಲ’ ಚಿತ್ರಕ್ಕೆ ಹೀನಾಯ ಗಳಿಕೆ; ಅಕ್ಷಯ್ ಯಾವುದೇ ಸಿನಿಮಾ ಮಾಡಿದರೂ ಫಲಿತಾಂಶ ಒಂದೇ

‘ಭೂತ್ ಬಂಗ್ಲ’ ಚಿತ್ರಕ್ಕೆ ಹೀನಾಯ ಗಳಿಕೆ; ಅಕ್ಷಯ್ ಯಾವುದೇ ಸಿನಿಮಾ ಮಾಡಿದರೂ ಫಲಿತಾಂಶ ಒಂದೇ


ಅಕ್ಷಯ್ ಕುಮಾರ್ (ಅಕ್ಷಯ್ ಕುಮಾರ್) ನಟನೆಯ ‘ಭೂತ್ ಬಾಂಗ್ಲಾ’ ಸಿನಿಮಾ ಏಪ್ರಿಲ್ 17 ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಎಂದು ತಂಡ ಹೇಳಿತ್ತು. ಆದರೆ, ಹಾಸ್ಯ ಗಮನ ಸೆಳೆಯಲು ವಿಫಲವಾಗಿದೆ ಎಂಬ ಮಾತು ವ್ಯಕ್ತವಾಗಿದೆ. ಈ ಮೊದಲ ದಿನದ ಗಳಿಕೆ ಲೆಕ್ಕ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 12 ಕೋಟಿ ರೂಪಾಯಿ ಮಾತ್ರ. ಬಜೆಟ್ 120 ಕೋಟಿ ರೂಪಾಯಿ ಆಗಿರುವ ಸಿನಿಮಾಗೆ ದೊಡ್ಡ ಓಪನಿಂಗ್ ಚಿತ್ರದ ಅಗತ್ಯವಿತ್ತು.

ಅಕ್ಷಯ್ ಕುಮಾರ್ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಇತ್ತೀಚೆಗೆ ಎಡವಿದ್ದಾರೆ. ಅವರು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬರುತ್ತಿಲ್ಲ. ಇದು ಅವರ ಹಾಗೂ ಅವರ ಅಭಿಮಾನಿಗಳಿಗೂ ಸಾಕಷ್ಟು ಬೇಸರ ಮೂಡಿಸಿದೆ. ಅವರು ಗಂಭೀರ ಸಿನಿಮಾಗಳನ್ನೇ ಮಾಡುತ್ತಿದ್ದರು. ಆದರೆ, ಈಗ ಮತ್ತೆ ಹಾಸ್ಯದ ಕಡೆ ಮುಖ ಮಾಡಿದ್ದಾರೆ. ‘ಭೂತ್ ಬಂಗ್ಲ’ ಸಿನಿಮಾ ಕಾಮಿಡಿ ಹಾರರ್ ಚಿತ್ರವಾಗಿದೆ. ಆದಾಗ್ಯೂ ಸಿನಿಮಾ ಕೈ ಹಿಡಿಯುವ ಸೂಚನೆ ಇಲ್ಲ.

‘ಭೂತ್ ಬಂಗ್ಲಾ’ ನೋಡಿದ ಅನೇಕ ವಿಮರ್ಶಕರು ಸಿನಿಮಾ ಟೀಕೆ ಮಾಡಿದ್ದಾರೆ. ಹಾಸ್ಯ ಕೆಲಸ ಮಾಡಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆ ಇದ್ದ ಅಕ್ಷಯ್ ಅಭಿಮಾನಿಗಳು ಮೊದಲ ದಿನ ಸಿನಿಮಾ ನೋಡಿದ್ದಾರೆ. ಹೀಗಾಗಿ 12 ಕೋಟಿ ರೂಪಾಯಿ ಆಗಿದೆ.

ಶನಿವಾರ ಹಾಗೂ ಭಾನುವಾರ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುವ ನೀರಿಕ್ಷೆ ಇದೆ. ಆದರೆ, ಭಾನುವಾರ ಸಂಜೆ ವೇಳೆಗೆ ಚಿತ್ರದ ಸರಿಯಾದ ವಿಮರ್ಶೆ ಸಿಕ್ಕಿದೆ. ಆ ಬಳಿಕ ಸಿನಿಮಾದ ಕಲೆಕ್ಷನ್ ಏನಾಗುತ್ತದೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

‘ಭೂತ್ ಬಂಗ್ಲ’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಚಿತ್ರ ಲಾಭ ಕಾಣಬೇಕು ಎಂದರೆ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವುದು ಅನಿವಾರ್ಯವಾಗಿದೆ. ಆದರೆ, ಸಿನಿಮಾದ ವೇಗ ನೋಡಿದರೆ ಚಿತ್ರ 100 ಕೋಟಿ ರೂಪಾಯಿ ತಲುಪಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *