Headlines

ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌! | Cameroon Green Hit Six On Tata Sierra Car 5 Lakh Donation Ipl 2026 San

ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌! | Cameroon Green Hit Six On Tata Sierra Car 5 Lakh Donation Ipl 2026 San



ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌! | Cameroon Green Hit Six On Tata Sierra Car 5 Lakh Donation Ipl 2026 San

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಕ್ಯಾಮರೂನ್ ಗ್ರೀನ್ ಬಾರಿಸಿದ ಸಿಕ್ಸರ್, ಮೈದಾನದಲ್ಲಿದ್ದ ‘ಟಾಟಾ ಸಿಯೆರಾ’ ಕಾರಿಗೆ ಬಡಿಯಿತು. ಈ ಕಾರಣದಿಂದಾಗಿ, ಟಾಟಾ ಸಂಸ್ಥೆಯು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಲಿದೆ.

ಅಹಮದಾಬಾದ್‌ (ಏ.18): ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲು ಕಂಡಿರಬಹುದು. ಆದರೆ, ಕೆಕೆಆರ್ ತಂಡದ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ಸಮಾಧಾನ ತಂದಿದೆ. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಗ್ರೀನ್, ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದರು. ಆದರೆ, ಈ ಪಂದ್ಯದ ನಡುವೆ ಅವರು ಬಾರಿಸಿದ ಒಂದು ಸಿಕ್ಸರ್ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಆ ಒಂದು ಸಿಕ್ಸರ್‌ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ!

ಪಂದ್ಯದ 13ನೇ ಓವರ್‌ನ ಮೂರನೇ ಎಸೆತದಲ್ಲಿ ಈ ಕುತೂಹಲಕಾರಿ ಘಟನೆ ನಡೆಯಿತು. ಅಶೋಕ್ ಶರ್ಮಾ ಎಸೆದ ಚೆಂಡನ್ನು ಕ್ಯಾಮರೂನ್ ಗ್ರೀನ್ ಲೆಗ್ ಸೈಡ್‌ ಕಡೆಗೆ ಬಲವಾಗಿ ಸಿಕ್ಸರ್‌ಗೆ ಅಟ್ಟಿದರು. ಆ ಚೆಂಡು ನೇರವಾಗಿ ಹೋಗಿ ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿದ್ದ ‘ಟಾಟಾ ಸಿಯೆರಾ’ (Tata Sierra) ಕಾರಿನ ಮೇಲೆ ಬಿದ್ದಿತು.

ಟಾಟಾ ಮೋಟಾರ್ಸ್ ಸಂಸ್ಥೆಯು ಈ ಬಾರಿ ಐಪಿಎಲ್‌ನಲ್ಲಿ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಪಂದ್ಯದ ವೇಳೆ ಯಾವುದಾದರೂ ಆಟಗಾರ ಬಾರಿಸಿದ ಚೆಂಡು ಮೈದಾನದಲ್ಲಿರುವ ಕಾರಿಗೆ ನೇರವಾಗಿ ಬಡಿದರೆ, ಗ್ರಾಮೀಣ ಮಟ್ಟದ ಕ್ರಿಕೆಟ್‌ನ ಅಭಿವೃದ್ಧಿಗಾಗಿ (Grassroots Cricket) ಟಾಟಾ ಸಂಸ್ಥೆಯು 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದೆ. ಹೀಗಾಗಿ, ಗ್ರೀನ್ ಬಾರಿಸಿದ ಆ ಒಂದು ಸಿಕ್ಸರ್‌ನಿಂದಾಗಿ ಈಗ 5 ಲಕ್ಷ ರೂಪಾಯಿ ಕ್ರಿಕೆಟ್ ಅಭಿವೃದ್ಧಿ ನಿಧಿಗೆ ಸೇರಲಿದೆ.

ತಂಡದ ರಕ್ಷಕನಾದ ಗ್ರೀನ್

ಟಾಪ್ ಆರ್ಡರ್ ಬ್ಯಾಟರ್‌ಗಳು ಪೆವಿಲಿಯನ್ ಸೇರಿ ಕೆಕೆಆರ್ ಸಂಕಷ್ಟದಲ್ಲಿದ್ದಾಗ ಕ್ಯಾಮರೂನ್ ಗ್ರೀನ್ ಆಸರೆಯಾದರು. ತಂಡದ ಮೊತ್ತ ಕೇವಲ 32 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಗ್ರೀನ್, 55 ಎಸೆತಗಳಲ್ಲಿ ಭರ್ಜರಿ 79 ರನ್ ಸಿಡಿಸಿದರು. ಈ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ‘ಗೋಲ್ಡನ್ ಡಕ್’ (ಸೊನ್ನೆ) ಔಟ್ ಆಗಿ ನಿರಾಸೆ ಮೂಡಿಸಿದರೆ, ಟಿಮ್ ಸೀಫರ್ಟ್ 19 ರನ್ ಹಾಗೂ ಅಂಕೀಶ್ ರಘುವಂಶಿ 8 ರನ್ ಗಳಿಸಿದರು.

ನಾಲ್ಕನೇ ವಿಕೆಟ್‌ಗೆ ರೋವ್‌ಮನ್ ಪವೆಲ್ ಅವರೊಂದಿಗೆ 55 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಗ್ರೀನ್, ತಂಡದ ಮೊತ್ತವನ್ನು 180ಕ್ಕೆ ತಲುಪಿಸಿದರು. ಆದರೆ, ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್, ನಾಯಕ ಶುಭಮನ್ ಗಿಲ್ ಅವರ ಅಜೇಯ 86 ರನ್‌ಗಳ ನೆರವಿನಿಂದ 19.4 ಓವರ್‌ಗಳಲ್ಲಿ ಜಯ ಸಾಧಿಸಿತು.



Source link

Leave a Reply

Your email address will not be published. Required fields are marked *