Headlines

World Heritage Day 2026: ಭಾರತದಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

World Heritage Day 2026: ಭಾರತದಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?


ಭಾರತ ಸೇರಿದಂತೆ ವಿಶ್ವದ ಹಲವೆಡೆ ಐತಿಹಾಸಿಕ, ಸಾಂಸ್ಕೃತಿಕ, ನೈಸರ್ಗಿಕ ಹಾಗೂ ನೈಸರ್ಗಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಲವಾರು ತಾಣಗಳಿವೆ (ಪಾರಂಪರಿಕ ತಾಣಗಳು) ಈ ತಾಣಗಳು ಮಾನವ ನಾಗರಿಕತೆಯ ಸಾಧನೆಗಳು ಮತ್ತು ಪ್ರಕೃತಿಯ ಅದ್ಭುತ ಸೃಷ್ಟಿಗಳನ್ನು ಸಂಕೇತಿಸುತ್ತವೆ. ಅಷ್ಟೇ ಅಲ್ಲದೆ ಈ ಕಟ್ಟಡಗಳು, ಸ್ಮಾರಕಗಳು ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಪ್ರಮುಖ ಭಾಗವಾಗಿದೆ. ಈ ಅಮೂಲ್ಯವಾದ ಐತಿಹಾಸಿಕ ಪ್ರತಿ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸುವುದಿಲ್ಲ. ಈ ವಿಶೇಷ ದಿನದ ಸಂದರ್ಭದಲ್ಲಿ ಯುನೆಸ್ಕೋ ಗುರುತಿಸಿರುವ ಪಾರಂಪರಿಕ ತಾಣಗಳು ಎಷ್ಟಿವೆ ಎಂಬುದನ್ನು ನೋಡೋಣ.

ವಿಶ್ವ ಪರಂಪರೆಯ ದಿನದ ಇತಿಹಾಸವೇನು?

ಪ್ರಪಂಚದಾದ್ಯಂತದ ಪ್ರಸಿದ್ಧ ಕಟ್ಟಡಗಳು ಮತ್ತು ನೈಸರ್ಗಿಕ ತಾಣಗಳನ್ನು ಸಂರಕ್ಷಿಸುವ ಉದ್ದೇಶದಿಂದ 1982 ರಲ್ಲಿ, ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿ (ICOMOS) ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆಯ ದಿನವನ್ನು ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಲಾಯಿತು. ಅದರ ಮುಂದಿನ ವರ್ಷ, ಅಂದರೆ 1983 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು. ಈ ದಿನದಂದು, ಟುನೀಶಿಯಾದಲ್ಲಿ ಮೊದಲ ಬಾರಿಗೆ ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಯಿತು. ಆ ನಂತರದಲ್ಲಿ ವಿಶ್ವ ಪರಂಪರೆಯ ದಿನವನ್ನು ಅಧಿಕೃತವಾಗಿ ಗುರುತಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರುತ್ತಿದೆ.

ವಿಶ್ವ ಪರಂಪರೆಯ ದಿನದ ಮಹತ್ವವೇನು?

  • ನೈಸರ್ಗಿಕ ಭೂದೃಶ್ಯಗಳು, ಪ್ರಾಚೀನ, ಸಾಂಸ್ಕೃತಿಕ ಸ್ಮಾರಕಗಳು, ಪ್ರಾಚೀನ ಅವಶೇಷಗಳ ರಕ್ಷಣೆ ಮತ್ತು ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಪರಂಪರೆಯ ದಿನವನ್ನು ಆಚರಿಸುವುದಿಲ್ಲ.
  • ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯ ಎತ್ತಿ ಹಿಡಿಯುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಈ ಸ್ಮಾರಕಗಳನ್ನು ರಕ್ಷಿಸಬೇಕೆಂಬುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.
  • ಈ ದಿನ ಪುರಾತತ್ವ ಸ್ಥಾಪಿತರು, ಇತಿಹಾಸಕಾರರು, ವಾಸ್ತುಶಿಲ್ಪಗಳು, ಸಂಸ್ಥೆಗಳು ಹಾಗೂ ಕಲಾವಿದರು ಸೇರಿದಂತೆ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿಸಲು ಕೊಡುಗೆ ನೀಡುವ ಜನರನ್ನು ಗುರುತಿಸಿ ಗೌರವಿಸಲಾಗುತ್ತದೆ.

ಇದನ್ನೂ ಓದಿ: ಏಪ್ರಿಲ್ 15 ರಾಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ?

ವಿಶ್ವ ಪರಂಪರೆಯ ತಾಣ ಎಂದರೇನು?

ವಿಶ್ವ ಪರಂಪರೆಯ ತಾಣಗಳು ಸಾಂಸ್ಕೃತಿಕ ಮತ್ತು ನೈಸರ್ಗಿಕ ಮಹತ್ವವನ್ನು ಹೊಂದಿರುವ ತಾಣ. ಅವು ಐತಿಹಾಸಿಕವಾಗಿ ಮತ್ತು ಪರಿಸರೀಯವಾಗಿಯೂ ಮಹತ್ವದ್ದಾಗಿವೆ. ಅಂತಹ ತಾಣಗಳನ್ನು ವಿಶ್ವಸಂಸ್ಥೆಯ ಸಂಸ್ಥೆ UNESCO ಅಧಿಕೃತವಾಗಿ ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸಲಾಗಿದೆ.

ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳು ಯಾವುವು?

ಪ್ರಪಂಚದಾದ್ಯಂತ ಒಟ್ಟು 1,052 ವಿಶ್ವ ಪರಂಪರೆಯ ತಾಣಗಳಿವೆ. ಅದರಲ್ಲಿ ಭಾರತವು ಪ್ರಸ್ತುತ ಒಟ್ಟು 44 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ. ಹಾಗೆ ಎಂದರೆ,

  • ಆಗ್ರಾ ಕೋಟೆ
  • ಅಜಂತಾ ಗುಹೆಗಳು
  • ಎಲ್ಲೋರಾ ಗುಹೆಗಳು
  • ನಳಂದ ಮಹಾವಿಹಾರ (ನಳಂದ ವಿಶ್ವವಿದ್ಯಾಲಯ)
  • ಸಾಂಚಿ ಬೌದ್ಧ ಸ್ಮಾರಕ
  • ಚಂಪಾನೇರ್-ಪಾವಗಢ್ ಪುರಾತತ್ವ ಉದ್ಯಾನವನ
  • ಛತ್ರಪತಿ ಶಿವಾಜಿ ಟರ್ಮಿನಸ್
  • ಗೋವಾದ ಚರ್ಚೆಗಳು ಮತ್ತು ಕಾನ್ವೆಂಟ್‌ಗಳು
  • ಎಲಿಫೆಂಟಾ ಗುಹೆಗಳು
  • ಫತೇಪುರ್ ಸಿಕ್ರಿ
  • ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್
  • ಹಂಪಿಯಲ್ಲಿರುವ ಸ್ಮಾರಕಗಳು
  • ಮಹಾಬಲಿಪುರಂನಲ್ಲಿರುವ ಸ್ಮಾರಕಗಳು
  • ಪಟ್ಟದಕಲ್ಲು
  • ರಾಜಸ್ಥಾನದ ಬೆಟ್ಟದ ಕೋಟೆ
  • ಕುತುಬ್ ಮಿನಾರ್
  • ರಾಣಿ-ಕಿ-ವಾವ್ ಪಟಾನ್, ಗುಜರಾತ್ (2014)
  • ಕೆಂಪು ಕೋಟೆ
  • ಭಿಂಬೆಟ್ಕಾದ ರಾಕ್ ಶೆಲ್ಟರ್ಸ್
  • ಸೂರ್ಯ ದೇವಾಲಯ, ಕೋನಾರ್ಕ್
  • ತಾಜ್ ಮಹಲ್
  • ಜಂತರ್ ಮಂತರ್, ಜೈಪುರ
  • ಕಾಜಿರಂಗ ರಾಷ್ಟ್ರೀಯ ಉದ್ಯಾನ
  • ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ
  • ಮಾನಸ ವನ್ಯಜೀವಿ ಅಭಯಾರಣ್ಯ
  • ಖಜುರಾಹೊದಲ್ಲಿರುವ ಸ್ಮಾರಕಗಳು
  • ಪಶ್ಚಿಮಘಟ್ಟಗಳು
  • ನಂದಾದೇವಿ ರಾಷ್ಟ್ರೀಯ ಉದ್ಯಾನವನ
  • ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ

ಇವೆಲ್ಲವು ಭಾರತದಲ್ಲಿರುವ ಪ್ರಮುಖ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಈ ಸುಂದರ ತಾಣಗಳಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *