ಹನ್ಸಿಕಾ ಮೋಟ್ವಾನಿ (ಹನ್ಸಿಕಾ) ಹಾಗೂ ಸೋಹೈಲ್ ಕತುರಿಯಾ ಅವರು ಅದ್ದೂರಿಯಾಗಿ ವಿವಾಹ ಆಗಿದ್ದೇನೋ ನಿಜ. ಆದರೆ, ಕೇವಲ ನಾಲ್ಕೇ ವರ್ಷಕ್ಕೆ ಇವರು ಬೇರೆ ಆದರು. ಡಿವೋರ್ಸ್ ಪಡೆಯುವುದಕ್ಕೂ ಇವರು ಮೊದಲೇ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು ಎಂದು ಹೇಳಲಾಗಿದೆ. ಈಗ ವಿಚ್ಛೇದನದ ಬಗ್ಗೆ ಹನ್ಸಿಕಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಡಿವೋರ್ಸ್‌ಗೆ ಸೋಹೈಲ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಯಾವುದೇ ಸೆಲೆಬ್ರಿಟಿ ವಿಚ್ಛೇದನವಾದರೂ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಇದು ಹಾಗೆಯೇ ಆಗಿದೆ. ಹನ್ಸಿಕಾ ಹಾಗೂ ಸೋಹೈಲ್ ಡಿವೋರ್ಸ್ ವಿಷಯದಲ್ಲಿ ಹಲವು ವದಂತಿಗಳು ಹುಟ್ಟಿಕೊಂಡವು. ಆದರೆ, ಇಷ್ಟು ದಿನ ಅವರು ಈ ಬಗ್ಗೆ ಮಾತನಾಡಲಿಲ್ಲ. ಕೊನೆಗೂ ಈ ಬಗ್ಗೆ ಅವರು ಮೌನ ಮುರಿದಿದ್ದಾರೆ.
‘ಜನರು ಕ್ಲಿಕ್‌ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅದು ಅವರಿಗೆ ಸಿಕ್ಕಿತು. ನನಗೆ ಇದೆಲ್ಲ ಮುಖ್ಯ ಎಂದು ಅನಿಸಲಿಲ್ಲ. ಹೀಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಯಾರಿಗಾದರೂ ಗೊತ್ತಿಲ್ಲದೆ ತಪ್ಪಾದ ರೈಲನ್ನು ಏರಿದರೆ, ಅದರಲ್ಲಿ ಪ್ರಯಾಣ ಮಾಡಿ ಕೊರಗ, ರೈಲಿನಿಂದ ಇಳಿಯುವುದು ಉತ್ತಮ’ ಎಂದು ಅವರು ಹೇಳಿದರು. ‘ನನಗೆ ನನ್ನ ಕುಟುಂಬದಿಂದ ಅಪಾರ ಬೆಂಬಲ ಸಿಕ್ಕಿದೆ. ನನಗೆ ಡಿವೋರ್ಸ್ ಬಗ್ಗೆ ಯಾವುದೇ ವಿಷಯವಿಲ್ಲ. ನಾನು ಖುಷಿಯಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
ವಿಚ್ಛೇದನಕ್ಕೆ ತಾಯಿ ಮತ್ತು ಸಹೋದರಿ ಹೇಗೆ ಪ್ರತಿಕ್ರಿಯಿಸಿದರು ಎಂದು ಕೇಳಿದ್ದಕ್ಕೆ ಹನ್ಸಿಕಾ ನೇರ ಉತ್ತರ ನೀಡಿದ್ದಾರೆ. ‘ನಾನು ಅನುಭವಿಸಿದ ಕಷ್ಟಗಳನ್ನು ಕುಟುಂಬದವರು ನೋಡಿದ್ದರು. ಸರಿ ಹೊಂದುತ್ತಿಲ್ಲ ಎಂದರೆ ಹೊರಬರುವಂತೆ ಸೂಚಿಸಿದರು. ನಾನು ಸದಾ ಖುಷಿಯಿಂದ ಇರುವ ವ್ತಕ್ತಿ. ಹೀಗಾಗಿ, ಈ ರೀತಿಯ ಕಷ್ಟ ಅನುಭವಿಸುವುದು ಭಯವಾಗುತ್ತದೆ. ನನ್ನ ಹಾಗೂ ಸೋಹೈಲ್ ಮಧ್ಯೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ತಿಳಿಯದಿರುವುದೇ ಉತ್ತಮ’ ಎಂದು ಹನ್ಸಿಕಾ ಹೇಳಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಹೇಗಿದೆ ಹನ್ಸಿಕಾ ಸ್ಥಿತಿ? ಹೊಸ ಪೋಸ್ಟ್ ಹಾಕಿದ ನಟಿ
ಹನ್ಸಿಕಾ ಹಾಗೂ ಸೋಹೈಲ್ 2022ರ ಡಿಸೆಂಬರ್ 4 ರಂದು ವಿವಾಹ ಆದರು. ಇತ್ತೀಚೆಗೆ ಇವರು ಬೇರೆ ಆಗಿದ್ದಾರೆ. ಸದ್ಯಕ್ಕೆ ಹನ್ಸಿಕಾಗೆ ಮದುವೆ ಆಗುವ ಆಲೋಚನೆ ಇಲ್ಲ. ಮುಂದೆ ವಿಧಿ ಹೇಗೆ ಕರೆದುಕೊಂಡು ಹೋಗಿದ್ದಾರೆಯೋ ಹಾಗೆ ಹೋಗುವ ಆಲೋಚನೆಯಲ್ಲಿ ಅವರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.