ಅಮೃತಧಾರೆ ಸೀರಿಯಲ್ ಖ್ಯಾತಿಯ ಗೌತಮ್ ಪಾತ್ರಧಾರಿ, ನಟ ರಾಜೇಶ್ ನಟರಂಗ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್, ಪ್ರಸ್ತುತ ‘ಅಮೃತಧಾರೆ’ಯಲ್ಲಿ ಪತ್ನಿದ ಛಾಯಾ ಸಿಂಗ್ ಜೊತೆ ಹಿಂದೆ ‘ರೌಡಿ ಅಳಿಯ’ ಚಿತ್ರದಲ್ಲಿ ನಟಿಸಿದ್ದರು.

ರಾಜೇಶ್ ನಟರಂಗ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಅಮೃತಧಾರೆಯ ಗೌತಮ್ ದಿವಾನ್ ಎಂದಾಕ್ಷಣ, ಸೀರಿಯಲ್ ಪ್ರಿಯರ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಕಣ್ಣುಗಳು ಅರಳುತ್ತವೆ. ಇದ್ದರೆ ಇಂಥ ಗಂಡ ಇರಬೇಕು ಎಂದು ಎನ್ನಿಸಿಕೊಂಡಿರುವ ಗೌತಮ್ ಪಾತ್ರಧಾರಿಯೇ ರಾಜೇಶ್ ನಟರಂಗ. ಇಂದು ಅರ್ಥಾರ್ ಏಪ್ರಿಲ್ 18 ನಟ ರಾಜೇಶ್ ನಟರಂಗ (Rajesh Nataranga) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಗೂಗಲ್ ದಾಖಲೆಯ ಪ್ರಕಾರ, ರಾಜೇಶ್ ಹುಟ್ಟಿದ್ದು 1977ರಲ್ಲಿ. ಇದರ ಪ್ರಕಾರ ಇಂದು ಅವರು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ರಾಜೇಶ್ ಅವರಿಗೆ ಸದ್ಯ ಸೀರಿಯಲ್ನಲ್ಲಿ ಪತ್ನಿಯಾಗಿರುವವಳು ಭೂಮಿಕಾ ಅರ್ಥಾತ್ ನಟಿ ಛಾಯಾ ಸಿಂಗ್. ಸೀರಿಯಲ್ನಲ್ಲಿ ಇಬ್ಬರು ಮಕ್ಕಳು. ಆದರೆ, ರಿಯಲ್ ಲೈಫ್ನಲ್ಲಿ ಪತ್ನಿ ಚೈತ್ರಾ ಹಾಗೂ ಮಗಳು ಧ್ವನಿ ಇದ್ದಾರೆ. ಮಗಳು ಅವರೂ ಕೂಡಾ ಅದ್ಭುತ ಕಲಾವಿದೆ. ಅಪ್ಪನ ಹಾಗೆ ಮಗಳು ಕೂಡಾ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಬಿಯಾಂಡ್ ದಿ ಕ್ಲೌಡ್ ಎನ್ನುವ ಬಾಲಿವುಡ್ ಚಿತ್ರದಲ್ಲಿ ಬಾಲನಟಿಯಾಗಿ, ಪಾಚುವುಂ ಅದ್ಭುತ ವಿಲಕ್ಕುಂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ ಧ್ವನಿ. ಈಕೆ ಡಿಗ್ರಿ ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಇನ್ನು ರಾಜೇಶ್ ಅವರ ಬಗ್ಗೆ ಕಿರುತೆರೆ, ಹಿರಿತೆರೆ ಪ್ರಿಯರಿಗೆ ತಿಳಿದಿದ್ದೇ. ಅವರು ‘ಸ್ಮಶಾನ’ ಮತ್ತು ‘ಕುರುಕ್ಷೇತ್ರ’ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. ‘ಮಾಯಾಮೃಗ’ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ ‘ಮುಕ್ತ’, ‘ಬದುಕು’, ‘ಶಕ್ತಿ’, ‘ಗುಪ್ತಗಾಮಿನಿ’, ‘ನಾನೂ ನನ್ನ ಕನಸು’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.

ರಾಜೇಶ್ ನಟನೆಯ ಅಮೃತಧಾರೆಯಲ್ಲಿ ಇವರ ಮತ್ತು ಭೂಮಿಕಾ ಜೋಡಿಯನ್ನು ಮೆಚ್ಚಿಕೊಳ್ಳದ ಸೀರಿಯಲ್ ಪ್ರಿಯರೇ ಇಲ್ಲ. ಮಧ್ಯವಯಸ್ಸಿನಲ್ಲಿ ಮದುವೆಯಾದ ಈ ಜೋಡಿಯ ಬಾಂಡಿಂಗ್ ನೋಡಿ ಭಲೆ ಭಲೆ ಎನ್ನುವವರೇ. ಆದರೆ ಈ ಜೋಡಿ ಹಿಂದೊಮ್ಮೆ ಅಣ್ಣ-ತಂಗಿಯಾಗಿ ನಟಿಸಿತ್ತು ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅಂದು ಅಣ್ಣ-ತಂಗಿಯಾಗಿದ್ದ ಈ ಜೋಡಿ ಇಂದು ಪತಿ-ಪತ್ನಿಯಾಗಿದೆ.

2004ರಲ್ಲಿ ಬಿಡುಗಡೆಯಾಗಿದ್ದ ರೌಡಿ ಅಳಿಯ ಚಿತ್ರದಲ್ಲಿ ಶಿವರಾಜ್ ಕುಮಾರ್, ಶರಣ, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ, ರೌಡಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದರು ಗೌತಮ್ ಮತ್ತು ಭೂಮಿಕಾ ಅರ್ಥಾತ್ ರಾಜೇಶ್ ಮತ್ತು ಛಾಯಾ ಸಿಂಗ್! ಇದರಲ್ಲಿ ಛಾಯಾ ಸಿಂಗ್ ಕುಪ್ಪಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಂದು ಅಣ್ಣ-ತಂಗಿಯಾಗಿ ನಟಿಸಿದ್ದವರು ಇಂದು ಗಂಡ- ಹೆಂಡತಿಯಾಗಿ ನಟಿಸುತ್ತಿದ್ದಾರೆ. ಅಲ್ಲಿಯೂ ಇವರಿಬ್ಬರ ಜೋಡಿ ಸಕತ್ ಸೌಂಡ್ ಮಾಡಿದ್ದರೆ, ಈಗಲೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಒಂದೇ ವ್ಯತ್ಯಾಸ ಎಂದರೆ ಆ ಚಿತ್ರದಲ್ಲಿ ಇವರದ್ದು ಸೈಡ್ ರೋಲ್ ಆದರೆ, ಇಲ್ಲಿ ಲೀಡ್ ರೋಲ್ ಅಷ್ಟೇ.

Source link
Amruthadhaare ಗೌತಮ್ ಹುಟ್ಟುಹಬ್ಬ: ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ