Headlines

23 ಲಕ್ಷ ರೂ ಅಡ್ವಾನ್ಸ್, ₹2.3 ಲಕ್ಷ ತಿಂಗಳ ಬಾಡಿಗೆ, ಬೆಂಗಳೂರು ಮನೆ ಮಾಲೀಕನ ವಿರುದ್ಧ ಆಕ್ರೋಶ | Man Question Bengaluru Greediest Landlord After Rs 23 Lakh Deposit For House

23 ಲಕ್ಷ ರೂ ಅಡ್ವಾನ್ಸ್, ₹2.3 ಲಕ್ಷ ತಿಂಗಳ ಬಾಡಿಗೆ, ಬೆಂಗಳೂರು ಮನೆ ಮಾಲೀಕನ ವಿರುದ್ಧ ಆಕ್ರೋಶ | Man Question Bengaluru Greediest Landlord After Rs 23 Lakh Deposit For House



ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ. ಬಾಡಿಗೆ, ಡೆಪಾಸಿಟ್ ಮೊತ್ತ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ. ಮನೆ ಹುಡುಕುತ್ತಿದ್ದ ವ್ಯಕ್ತಿ ಬಾಡಿಗೆ – ಡೆಪಾಸಿಟ್ ನೋಡಿ ದಂಗಾಗಿದ್ದಾರೆ. ವಿಶ್ವದಲ್ಲೇ ಅತೀ ದುರಾಸೆ ಮಾಲೀಕರು ಇರುವುದು ಬೆಂಗಳೂರಿನಲ್ಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು (ಜು.21) ಬೆಂಗಳೂರು ನಗರದಲ್ಲಿ ಮನೆ ಹುಡುಕುವುದು, ಮನೆ ಬಾಡಿಗೆ ಪಡೆಯುವುದು ಅತ್ಯಂತ ಸವಾಲಿನ ಕೆಲಸ. ಒಂದು ನಮ್ಮ ಬೇಕಾದ ರೀತಿಯಲ್ಲಿ ಮನೆ ಸಿಗಲ್ಲ, ಸಿಕ್ಕಿದರೆ ಕೈಗೆಟುಕಲ್ಲ. ಬೆಂಗಳೂರ ಬಾಡಿಗೆ ಕುರಿತು ಹಲವು ಬಾರಿ ಆಕ್ರೋಶಗಳು ವ್ಯಕ್ತವಾಗಿದೆ. ಇದೀಗ ಕೆನಡಾ ಪ್ರಜೆ ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕುತ್ತಿದ್ದಾರೆ. ಈ ಕೆನಡಾ ಪ್ರಜೆಗೆ ಬೆಂಗಳೂರು ಮಾಲೀಕನ ಡಿಮ್ಯಾಂಡ್ ನೋಡಿ ದಂಗಾಗಿದ್ದಾರೆ. 2.3 ಲಕ್ಷ ರೂಪಾಯಿ ತಿಂಗಳ ಬಾಡಿಗೆ, ಬರೋಬ್ಬರಿ 23 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ. ಈ ಬೇಡಿಕೆ ನೋಡಿದ ಕೆನಡಾ ಪ್ರಜೆ, ವಿಶ್ವದ ಯಾವುದೇ ಇತರ ನಗರದಲ್ಲಿ ಇಲ್ಲದ ದುಬಾರಿ ಬೆಲೆ ಬೆಂಗಳೂರಿನಲ್ಲಿದೆ. ಬೆಂಗಳೂರಿನ ಮಾಲೀಕರು ಅತ್ಯಂತ ದುರಾಸೆ ಮನೆ ಮಾಲೀಕರು ಎಂದು ಕೆನಡಾ ಪ್ರಜೆ ಹೇಳಿದ್ದಾರೆ.

23 ಲಕ್ಷ ರೂಪಾಯಿ ಡೆಪಾಸಿಟ್

ಕೆನಡಾ ಕಂಟೆಟ್ ಕ್ರಿಯೇಟರ್ ಸೆಲೆಬ್ ಫ್ರೈಸನ್ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿ, ಆನ್‌ಲೈನ್ ಮೂಲಕ ಬಾಡಿಗೆ ಮನೆ ತಡಕಾಡಿದ್ದಾರೆ. ಈ ವೇಳೆ ಕಣ್ಣಿಗೆ ಬಿದ್ದ ಮನೆ ಮಾಲೀಕನ ಜಾಹೀರಾತು ಅಚ್ಚರಿಗೆ ಕಾರಣವಾಗಿದೆ. ಕಾರಣ ಒಂದು ತಿಂಗಳಿಗೆ 2.3 ಲಕ್ಷ ರೂಪಾಯಿ ಬಾಡಿಗೆ, 23 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ. 4 ಬೆಡ್ ರೂಂ ಮನೆಗೆ ಇಷ್ಟೊಂದು ಮೊತ್ತ ಸೆಕ್ಯೂರಿಟಿ ಡೆಪಾಸಿಟ್ ಯಾಕೆ ಎಂದು ಕೆನಡಾ ಪ್ರಜೆ ಪ್ರಶ್ನಿಸಿದ್ದಾರೆ.

 

Scroll to load tweet…

 

ವಿಶ್ವದ ಯಾವುದೇ ನಗರದಲ್ಲಿಲ್ಲದ ನಿಯಮ ಬೆಂಗಳೂರಲ್ಲಿದೆ

ಸೆಲೆಬೆ ಫ್ರೈಸನ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಪ್ರಮುಖಾಗಿ ಹೇಳಿದ ವಿಚಾರ, ಬೆಂಗಳೂರಿನಲ್ಲಿ ಮನೆ ಬಾಡಿಗೆ ನೀಡುವ ಮಾಲೀಕರು ವಿಶ್ವದಲ್ಲೇ ಅತ್ಯಂತ ದುರಾಸೆಯ ವ್ಯಕ್ತಿಗಳು ಎಂದಿದ್ದಾರೆ. 2.3 ಲಕ್ಷ ರೂಪಾಯಿ ತಿಂಗಳ ಬಾಡಿಗೆ ಹಾಗೂ ಸೆಕ್ಯೂರಿಟಿ ಡೆಪಾಸಿಟ್ 12 ತಿಂಗಳ ಬಾಡಿಗೆ ಕೇಳಿದ್ದಾರೆ. ಇದು ಯಾವ ನಿಮಯ? ವಿಶ್ವದ ಯಾವುದೇ ನಗರದಲ್ಲಿ ಇಲ್ಲದ ನಿಯಮ ಇಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಇತರ ನಗರದಲ್ಲಿ ಡೆಪಾಸಿಟ್ ಮೊತ್ತ ಪಡೆಯುವ ನಿಯಮ ಕುರಿತು ವಿವರಣೆ ನೀಡಿದ್ದರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮನೆ ಬಾಡಿಗೆ ಪಡೆಯಲು ಒಂದು ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು. ಇನ್ನು ಟೊರೆಂಟೋ ನಗರದಲ್ಲಿ 1 ತಿಂಗಳ ಬಾಡಿಗೆ ಮೊತ್ತವನ್ನ ಡೆಪಾಸಿಟ್ ರೂಪದಲ್ಲಿ ನೀಡಿದರೆ ಸಾಕು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 2 ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು. ದುಬೈನಲ್ಲಿ ವಾರ್ಷಿಕ ಬಾಡಿಗೆ ಮೊತ್ತದ ಶೇಕಡಾ 5 ರಿಂದ 10 ರಷ್ಟು ಮೊತ್ತ ಸೆಕ್ಯೂರಿಟಿ ಡೆಪಾಸಿಟ್ ರೂಪದಲ್ಲಿ ನೀಡಬೇಕು. ಲಂಡನ್ನಲ್ಲಿ 5 ರಿಂದ 6 ವಾರದ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು. ಆದರೆ ಬೆಂಗಳೂರಿನಲ್ಲಿ 10 ತಿಂಗಳ ಬಾಡಿಗೆ ಮೊತ್ತವನ್ನು ಡೆಪಾಸಿಟ್ ರೂಪದಲ್ಲಿ ನೀಡಬೇಕು ಎಂದು ಕೆನಡಾ ಪ್ರಜೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

4ಬಿಹೆಚ್‌ಕೆ ಮನೆಗೆ ಬೆಂಗಳೂರಲ್ಲಿ ಎಷ್ಟಿದೆ ಬಾಡಿಗೆ?

4 ಬೆಡ್ ರೂಂ ಹೊಂದಿಗೆ ಮನಗ ಬೆಂಗಳೂರಲ್ಲಿ ಬಾಡಿಗೆ ಎಷ್ಟಿದೆ? ಅನ್ನೋ ಚರ್ಚೆ ಶುರುವಾಗಿದೆ. ಇಲ್ಲಿ ಹೇಳಿರುವ ಮನೆ 4 ಬೆಡ್ ರೂಂ ಹೊಂದಿದೆ. ಇನ್ನು ಫರ್ನಿಶ್ ಆಗಿದೆ. ಬೆನ್ನಿಗಾನ ಹಳ್ಳಿಯಲ್ಲಿರುವ ಈ ಮನೆ 4,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಎಲ್ಲಾ ಸೌಲಭ್ಯ, ಮನೆ ಐಷಾರಾಮಿತನ ಲೆಕ್ಕ ಹಾಕಿದರೂ ತಿಂಗಳ ಬಾಡಿಗೆ 1 ಲಕ್ಷ ರೂಪಾಯಿ ದಾಟುವುದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *