Video: ನನ್ನ ಮಗುವನ್ನು ರಸ್ತೆಗೆ ಎಸೆದುಬಿಟ್ರು, ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ

Video: ನನ್ನ ಮಗುವನ್ನು ರಸ್ತೆಗೆ ಎಸೆದುಬಿಟ್ರು, ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ


ಮನಾಲಿ, ಜೂನ್ 25: ಮನಾಲಿಗೆ ಬರಬೇಡಿ ಇಲ್ಲಿನ ಸ್ಥಿತಿ ಪಾಕಿಸ್ತಾನಕ್ಕಿಂತಾ ಕೆಟ್ಟದಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಟ್ರಿಪ್ ಎಂಜಾಯ್ ಮಾಡಲೆಂದು ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಬಂದಿದ್ದ ಹರಿಯಾಣದ ಕುಟುಂಬದ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಸ್ಕೂಟಿ ನಿಲ್ಲಿಸುವ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಕೆಲವರು ಮಹಿಳೆಯನ್ನು ಆಕೆಯ ನಾಲ್ಕು ತಿಂಗಳ ಮಗಳೊಂದಿಗೆ ರಸ್ತೆಗೆ ಎಸೆದು, ಕುಟುಂಬದ ಇತರ ಸದಸ್ಯರನ್ನು ಥಳಿಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹರಿಯಾಣದ ಮಹೇಂದ್ರಗಢದ ಸತ್ನಾಲಿ ಎಂಬ ಪ್ರವಾಸಿ ಪ್ರದೀಪ್ (35) ಅವರ ದೂರಿನ ಮೇರೆಗೆ ಈ ದೂರು ದಾಖಲಾಗಿದೆ. ಜೂನ್ 23 ರಂದು ಎಲ್ಲರೂ ಬಾಡಿಗೆಗೆ ಪಡೆದ ಮೋಟಾರ್ ಸೈಕಲ್‌ನಲ್ಲಿ ವಶಿಷ್ಠಕ್ಕೆ ಹೋಗಿದ್ದರು. ಸಂಜೆ 5 ಗಂಟೆ ಸುಮಾರಿಗೆ ಅವರು ಮಿಷನ್ ರಸ್ತೆ ಮೂಲಕ ಸ್ಕೂಟಿಯಲ್ಲಿ ಹಿಂದಿರುಗುತ್ತಿದ್ದರು.

ಬಾಡಿಗೆ ಪಡೆದಿದ್ದ ಬೈಕ್ ಆಗಿದ್ದರಿಂದ ಹಿಂದಿರುಗಿಸಬೇಕಿತ್ತು. ಪ್ರದೀಪ್ ಸ್ಕೂಟಿ ಓಡಿಸುತ್ತಿದ್ದರೆ ಪತ್ನಿ ಹಿಂದೆ ಮಗುವಿನ ಜತೆ ಕುಳಿತಿದ್ದರು. ಆಗ ಜೀಪೊಂದು ಅಡ್ಡಲಾಗಿ ನಿಂತಿತ್ತು. ಆಗ ಸ್ಕೂಟಿ ಎಲ್ಲಿ ಪಾರ್ಕ್​ ಮಾಡಬೇಕು ಎಂದು ಕೇಳಿದಾಗ ಜಗಳ ಶುರುವಾಗಿತ್ತು. ದೀಪಿಕಾರನ್ನು ಕುತ್ತಿಗೆ ಹಿಡಿದು ಕೆಳಕ್ಕೆ ದಬ್ಬಿ, ಮಗುವನ್ನು ಕೂಡ ರಸ್ತೆಗೆ ಎಸೆದಿದ್ದರು. ಹಾಗಾಗಿ ಈ ದಂಪತಿ ಮನಾಲಿಯಲ್ಲಿ ಸುರಕ್ಷತೆ ಇಲ್ಲ ಯಾರೂ ಬರಬೇಡಿ ಎಂದು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 



Source link

Leave a Reply

Your email address will not be published. Required fields are marked *