Breaking ದೆಹಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ | Hong Kong Delhi Air India Flight Catches Fire Soon After Landing At Igi Airport

Breaking ದೆಹಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನಕ್ಕೆ ಹೊತ್ತಿಕೊಂಡ ಬೆಂಕಿ | Hong Kong Delhi Air India Flight Catches Fire Soon After Landing At Igi Airport



ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಲ್ಯಾಂಡ್ ಆಗುತ್ತಿದ್ದಂತೆ ದಿಡೀರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನವದೆಹಲಿ (ಜು.22) ಏರ್ ಇಂಡಿಯಾ ಎ171 ವಿಮಾನ ದುರಂತದ ಬಳಿಕ ಎಲ್ಲಾ ವಿಮಾನಗಳ ತಪಾಸಣೆಗೆ ನಾಗರೀಕರ ವಿಮಾಯಾನ ಸಚಿವಾಲಯ ಆದೇಶ ನೀಡಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಖಡಕ್ ವಾರ್ನಿಂಗ್ ನೀಡಿದೆ. ವಿಮಾಯಾನದ ಮಹಾ ದುರಂತದ ಕೆಲವೇ ದಿನಗಳ ಬಳಿಕ ಇದೀಗ ಮತ್ತೊಂದು ಏರ್ ಇಂಡಿಯಾ ವಿಮಾನ ಆತಂಕದ ಪರಿಸ್ಥಿತಿ ಎದುರಿಸಿದೆ. ಹಾಂಕಾಂಗ್‌ನಿಂದ ಹೊರಟ ವಿಮಾನ ದೆಹಲಿಯಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ದಿಡೀರ್ ಬೆಂಕಿ ವಿಮಾನ ಆವರಿಸಿಕೊಂಡಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಈ ಘಟನೆ ನಡೆದಿದೆ. ಅದೃಷ್ಠವಶಾತ್ ವಿಮಾನದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಏರ್ ಇಂಡಿಯಾ 315 ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

ಏರ್ ಇಂಡಿಯಾ ( Air India catches Fire) ವಿಮಾನ 315 ಹಾಂಕಾಂಗ್‌ನಿಂದ ಪ್ರಯಾಣಿಕರ ಹೊತ್ತು ದಹೆಲಿಯತ್ತ ಸಾಗಿತ್ತು. ಹಾರಾದ ವೇಳೆ ಯಾವುದೇ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ಆದರೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ

ದೆಹಲಿಯಲ್ಲಿ ವಿಮಾನ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ರನ್‌ವೇಯಲ್ಲಿ ವೇಗವಾಗಿ ಸಾಗಿದ ವಿಮಾನ ನಿಧಾನವಾಗಿ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಮ್ಮ ತಮ್ಮ ಬ್ಯಾಗ್ ಹಿಡಿದು ಇನ್ನೇನು ಇಳಿಯಬೇಕು ಅನ್ನುವಷ್ಟರಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ಅಲರ್ಟ್ ನೀಡಲಾಗಿದೆ. ತಕ್ಷಣವೇ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.ಆದರೆ ಎಪಿಯು ಯುನಿಟ್ ಆಟೋಮ್ಯಾಟಿಕ್ ಆಗಿ ಸ್ಥಗಿತಗೊಂಡಿದೆ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಬೆಂಕಿ ಕಾಣಿಸಿಕೊಂಡಿರುವ ಕುರಿತು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಎಲ್ಲಾ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಮುಂದಿನ ತನಿಖೆ ನಡೆಯಲಿದೆ ಎಂದಿದೆ.

ಏನಿದು ಏಪಿಯು ?

ಆಕ್ಸಿಲರಿ ಪವರ್ ಯೂನಿಟ್ ಅಥವಾ ಎಪಿಯು. ಏರ್ ಇಂಡಿಯಾ 315 ವಿಮಾನದ ಏಪಿಯು ಯುನಿಟ್‌‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಮುಖ್ಯ ಪವರ್ ಯೂನಿಟ್ ಅಲ್ಲ. ವಿಮಾನದಲ್ಲಿ ಏಸಿ, ಲೈಟ್, ಎಂಜಿನ್ ಸ್ಟಾರ್ಟ್ ಆಗಲು ಪವರ್ ನೀಡುತ್ತದೆ. ಈ ಯುನಿಟ್ ಹೆಚ್ಚು ಬಿಸಿಯಾಗಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ವಿಮಾನದ ಡಿಸೈನ್ ಪ್ರಕಾರ ಎಸಿಯು ವಿಮಾನ ಪಾರ್ಕ್ ಆಗುತ್ತಿದ್ದಂತೆ ಆಫ್ ಆಗಲಿದೆ. ಹೀಗಾಗಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಸಿಯು ಆಫ್ ಆಗಿದೆ.

 



Source link

Leave a Reply

Your email address will not be published. Required fields are marked *