Headlines

ದೇಶದಲ್ಲಿ ಗರಿಷ್ಠ ಯುಪಿಐ ವಹಿವಾಟು ನಡೆಸುವ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ದೇಶದಲ್ಲಿ ಗರಿಷ್ಠ ಯುಪಿಐ ವಹಿವಾಟು ನಡೆಸುವ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಜೂನ್ 2025ರ  (UPI Transaction) ವರದಿಯಂತೆ, UPI ವಹಿವಾಟಿನಲ್ಲಿ ಮಹಾರಾಷ್ಟ್ರ (Maharashtra) ಮುಂಚೂಣಿಯಲ್ಲಿದ್ದು, ಕರ್ನಾಟಕ ಮತ್ತು ಉತ್ತರಪ್ರದೇಶಗಳು ನಂತರದ ಸ್ಥಾನದಲ್ಲಿವೆ. ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಕೂಡ ಗಣನೀಯ ಪ್ರಮಾಣದ ವಹಿವಾಟು ದಾಖಲಿಸಿವೆ.

ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank Of India), ದೇಶದಲ್ಲಿ ಯುಪಿಐ (UPI transactions) ಮೂಲಕ ಗರಿಷ್ಠ ವಹಿವಾಟು ನಡೆಸುವ ರಾಜ್ಯಗಳ ಪಟ್ಟಿಯನ್ನು ಪ್ರಕಟಿಸಿದೆ.

ಜೂನ್‌ 2025ರ (June 2025 UPI transactions) ಅನುಸಾರ ದೇಶದಲ್ಲಿ ಯುಪಿಐ ಮೂಲಕ ಗರಿಷ್ಠ ವಹಿವಾಟು ನಡೆಸುವ ರಾಜ್ಯಗಳ ಪಟ್ಟಿ ಇಂತಿದೆ.

ಮಹಾರಾಷ್ಟ್ರ: ದೇಶದ ವಾಣಿಜ್ಯ ರಾಜಧಾನಿ ಮುಂಬೈಅನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಯುಪಿಐ ಮೂಲಕ ಶೇ. 8.80ರಷ್ಟು ವಹಿವಾಟು ನಡೆಯುತ್ತದೆ.

2ನೇ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದ್ದು, ಯುಪಿಐ ಮೂಲಕ ರಾಜ್ಯದಲ್ಲಿ ಶೇ. 5.61ರಷ್ಟು ವಹಿವಾಟು ನಡೆಯುತ್ತದೆ. ಆದರೆ, ಇತ್ತೀಚೆಗೆ ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವ ಕಾರಣ ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಕುಸಿಯಬಹುದು.

ಮೂರನೇ ಸ್ಥಾನದಲ್ಲಿ ಉತ್ತರಪ್ರದೇಶ ರಾಜ್ಯವಿದ್ದು, ಶೇ. 5.15ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತದೆ.

ದಕ್ಷಿಣದ ಮೂರು ರಾಜ್ಯಗಳಾದ ತೆಲಂಗಾಣ (ಶೇ. 4.94), ತಮಿಳುನಾಡು (ಶೇ. 4.37) ಹಾಗೂ ಆಂಧ್ರಪ್ರದೇಶ (ಶೇ. 3.62) ಕ್ರಮವಾಗಿ 4, 5 ಹಾಗೂ 6ನೇ ಸ್ಥಾನದಲ್ಲಿವೆ.

ರಾಜಸ್ಥಾನ (ಶೇ. 2.91), ಬಿಹಾರ (ಶೇ. 2.46), ಮಧ್ಯಪ್ರದೇಶ (ಶೇ. 2.17) ಹಾಗೂ ದೆಹಲಿ (ಶೇ. 2.11) ರೊಂದಿಗೆ ಅಗ್ರ 10 ಸ್ಥಾನಗಳು ಭರ್ತಿಯಾಗಿವೆ. ದೇಶದ ಉಳಿದ ರಾಜ್ಯಗಳಿಂದ ಶೇ. 57.9ರಷ್ಟು ಯುಪಿಐ ವಹಿವಾಟು ದಾಖಲಾಗುತ್ತಿದೆ ಎಂದು ವರದಿ ತಿಳಿಸಿದೆ.

Source link

Leave a Reply

Your email address will not be published. Required fields are marked *