
ಎರ್ರಪ್ಪ ರೆಡ್ಡಿ ವಿರುದ್ಧ ಲಂಚ ಹಾಗೂ ಅಕ್ರಮ ಆಸ್ತಿ ಆರೋಪ
ಎಂಜಿನಿಯರ್ ಎರ್ರಪ್ಪ ರೆಡ್ಡಿ ಇತ್ತೀಚೆಗಷ್ಟೆ ₹10 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಅವರ HRBR ಲೇಔಟ್ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 6.15ರಿಂದಲೇ ದಾಳಿ ಆರಂಭವಾಗಿದೆ. ಲೋಕಾಯುಕ್ತ ಎಸ್‌ಪಿ ಅವರ ನಿವಾಸಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 6ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಸ್ತಿ ದಾಖಲೆಗಳು, ಬ್ಯಾಂಕ್ ಡೀಟೇಲ್ಸ್, ಚಿನ್ನಾಭರಣಗಳು ಮತ್ತು ಇತರ ವಿವರಗಳನ್ನು ಪರಿಶೀಲಿಸುತ್ತಿದೆ.
ಬಾಗ್ಲಿ ಮಾರುತಿ ನಿವಾಸದಿಂದ ಚಿನ್ನಾಭರಣಗಳು ಮತ್ತು ನಗದು ಪತ್ತೆ!
ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಅವರ ನಿವಾಸದಲ್ಲಿಯೂ ತೀವ್ರ ಶೋಧ ನಡೆಯುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಅಲ್ಲಿಂದ ಚಿನ್ನಾಭರಣ, ನಗದು, ಬೆಳ್ಳಿಯ ವಸ್ತುಗಳು, ದುಬಾರಿ ಗಡಿಯಾರಗಳು ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಸಿಕ್ಕಿರುವ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿದ್ದು, ತನಿಖೆ ಇನ್ನೂ ಮುಂದುವರಿದಿದೆ.