ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್! ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ! | Kalaburagi Girl Dies After Mental Torture By Boyfriend From Dubai Gow

ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್! ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ! | Kalaburagi Girl Dies After Mental Torture By Boyfriend From Dubai Gow


ಅವರಿಬ್ಬರೂ ಒಟ್ಟಿಗೆ ಕಾಲೇಜಿಗೆ ಹೋದವರು.. ಓದುತ್ತಲೇ ಲವ್​ನಲ್ಲಿ ಬಿದ್ದವರು.. 5 ವರ್ಷ ಪ್ರೀತಿ ಮಾಡಿದ್ರು.. ಒಂದು ದಿನ ಹುಡುಗ ಕೆಲಸಕ್ಕೆ ಅಂತ ದುಬೈಗೆ ಹೋದ… ಈಕೆ ತನ್ನೂರಿನಲ್ಲೇ ಒಳಿದುಬಿಟ್ಟಿದ್ದಳು.. ಆದ್ರೂ ಕಾಲಿಂಗೂ ಚಾಟಿಂಗೂ ನಡೆದೇ ಇತ್ತು.. ಆದ್ರೆ ಇದ್ದಕ್ಕಿದ್ದಂತೆ ಆ ಹುಡುಗಿ ಬೇರೊಬ್ಬನ ಜೊತೆಗೆ ಮದುವೆ ಆಗೋದಕ್ಕೆ ರೆಡಿಯಾಗಿಬಿಟ್ಟಳು.. ಲವ್ವರ್​​ ಯಾಕೆ ಹೀಗೆ ಮಾಡಿದೆ ಅಂದ್ರೆ ಆಕೆ ಹೇಳಿದ್ದು ಒಂದೇ ಮಾತು ಬ್ರೇಕ್​ ಅಪ್​ ಅಂತ… ಆದ್ರೆ ಇದೆಲ್ಲಾ ಆಗಿ ಕೆಲವೇ ದಿನಗಳು.. ಆ ಹೆಣ್ಣುಮಗಳು ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಇನ್ನೂ ಬಾಳಿ ಬದುಕಬೇಕಾದ ಹೆಣ್ಣು ಮಗಳು ಆ ಸಾಕ್ಷಿ. ಆ ಪಾಪಿ ಆಕೆಯನ್ನ ಕಾಡಿದಲ್ಲದೇ ಜೀವವನ್ನೂ ತಗೆದುಬಿಟ್ಟಿದ್ದನ್ನೆ. ವಯಸಲ್ಲದ ವಯಸಲ್ಲಿ ಪ್ರೀತಿ ಗೀತಿ ಅಂತ ತಲೆಕೆಡಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠವಾಗಲಿ. ಪ್ರೀತಿಯ ಹೆಸರಲ್ಲಿ ಹೆಣ್ಣುಮಗಳ ಜೀವನ ಹಾಳು ಮಾಡಿದ ಮತ್ತೊಬ್ಬ ಕಿರಾತಕನ ಕಥೆ.

ಆತ ಜಿಮ್​ ಟ್ರೈನರ್​​. ಆಕೆ ಅವನ ಬಳಿ ಬಾಡಿ ಬಿಲ್ಡ್​​ ಮಾಡೋದಕ್ಕೆ ಬಂದಿದ್ಲು. ಆಕೆಗೆ ಈತ ಜಿಮ್​ ಟ್ರೈನ್ನಿಂಗ್​ ಕೊಡೋ ಬದಲು ಲವ್​ ಟ್ರೈನ್ನಿಂಗ್​ ಕೊಟ್ಟಿದ್ದ.. ಅವಳನ್ನ ಬುಟ್ಟಿಗೆ ಹಾಕೊಂಡು ಮಗುವನ್ನೂ ಕರುಣಿಸಿಬಿಟ್ಟ. ಆದ್ರೆ ನಂತರ ಮದುವೆಯಾಗಪ್ಪ ಅಂದ್ರೆ ನನಗಾಗಲೇ ಮದುವೆಯಾಗಿ ಮಗು ಇದೆ ಅಂದಿದ್ದ. ಈಕೆ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟಳು.. ಜೈಲಿಗೆ ಹೋಗಬೇಕಾಗುತ್ತಲ್ಲ ಅಂತ ಕೇಸ್​​ ವಾಪಸ್​​ ತಗೋ ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ.. ಆಕೆ ಕೂಡ ಅವನನ್ನ ನಂಬಿ ಕೇಸ್​​ ವಾಪಸ್​​ ತಗೆದುಕೊಂಡಳು. ಆದ್ರೆ ಆತ ಮನೆಗೆ ಕರೆದೊಯ್ದು ಅವಳನ್ನ ಮುಗಿಸೋ ಪ್ಲಾನ್​ ಮಾಡಿದ್ದ.

ಲಕ್ಷ್ಮಿಯಂತಹ ಮುಗ್ಧ ಹೆಣ್ಣುಮಕ್ಕಳನ್ನೇ ಟಾರ್ಗೆಟ್​​ ಮಾಡಿಕೊಂಡು ಪ್ರೀತಿ ಹೆಸರಲ್ಲಿ ದೋಖ ಮಾಡೋ ಮಂದಿ ತುಂಬಾ ಇದ್ದಾರೆ. ಆದ್ರೆ ಪ್ರೀತಿ ಅನ್ನೋ ಪಾಶಕ್ಕೆ ಬೀಳೋದಕ್ಕೂ ಮೊದಲು ನೀವು ಯಾರನ್ನ ಪ್ರೀತಿ ಮಾಡೋದಕ್ಕೆ ಹೊರಟಿದ್ದೀರಿ ಅನ್ನೋದನ್ನ ತಿಳಿದುಕೊಳ್ಳಿ



Source link

Leave a Reply

Your email address will not be published. Required fields are marked *