Headlines

ಕೆಪಿಎಂಇ ಉಲ್ಲಂಘೆನೆ, ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌! | Bengaluru Fir Against Five Hospitals For Kpme Violation San

ಕೆಪಿಎಂಇ ಉಲ್ಲಂಘೆನೆ, ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌! | Bengaluru Fir Against Five Hospitals For Kpme Violation San



ಬೆಂಗಳೂರಿನಲ್ಲಿ ಕೆಪಿಎಂಇ ಕಾಯ್ದೆ ಉಲ್ಲಂಘಿಸಿದ 14 ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಐದು ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಡಿಸಿ ಜಗದೀಶ್ ಆದೇಶಿಸಿದ್ದಾರೆ. ಒಟ್ಟು ₹6.15 ಲಕ್ಷ ದಂಡ ವಿಧಿಸಲಾಗಿದೆ.

ಬೆಂಗಳೂರು (ಜು.24): ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿದೆ. ಕೆಪಿಎಂಇ ಕಾನೂನು ಉಲ್ಲಂಘಿಸುವ ಸಂಸ್ಥೆಗಳ ಮೇಲೆ ಡಿಸಿ ಜಗದೀಶ್ ಕ್ರಮ ಕೈಗೊಂಡಿದ್ದು, ಐದು ಪ್ರಮುಖ ಆಸ್ಪತ್ರೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದಾರೆ. ಖಾಸಗಿ ಕ್ಲಿನಿಕ್, ಆಸ್ಪತ್ರೆ , ನರ್ಸಿಂಗ್ ಹೋಂ, ಲ್ಯಾಬ್ಗಳಿಗೆ ಪರವಾನಿಗೆ ಕಡ್ಡಾಯ. ಆದರೂ, ನಿಯಮ ಉಲ್ಲಂಘಿಸಿ ಸೇವೆ ಸಲ್ಲಿಸುತ್ತಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳು ವಿರುದ್ಧ ದಂಡ ಶಿಕ್ಷೆ ಹಾಗೂ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರಿನಲ್ಲಿ 14 ವೈದ್ಯಕೀಯ ಸಂಸ್ಥೆಗಳಿಗೆ ಡಿಸಿ ಜಿ ಜಗದೀಶ್ ದಂಡ ವಿಧಿಸಿದ್ದಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ (ಕೆಪಿಎಂಇ) ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 5 ವೈದ್ಯಕೀಯ ಸಂಸ್ಥೆಗಳ ವಿರುದ್ದ ಎಫ್ಐಆರ್‌ ದಾಖಲು ಮಾಡಲು ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಆದೇಶಿಸಲಾಗಿದೆ.

ಕಾನೂನು ಉಲ್ಲಂಘಿಸಿದ ಅಂದ್ರಹಳ್ಳಿ ಮಾರುತಿ ಕ್ಲಿನಿಕ್ ಗೆ 50 ಸಾವಿರ ದಂಡ, ಶಾರದ ಕ್ಲಿನಿಕ್ ಗೆ 25 ಸಾವಿರ, ಹುಸೈನ್ ಪಾಲಿ ಕ್ಲಿನಿಕ್‌ಗೆ 50 ಸಾವಿರ, ಶ್ರೀನಿವಾಸ್ ಆಸ್ಪತ್ರೆಗೆ 75 ಸಾವಿರ , ನಾಗಶೆಟ್ಟಿಹಳ್ಳಿ ಸ್ನೇಹ ಕ್ಲಿನಿಕ್ ಗೆ 25 ಸಾವಿರ ದಂಡ ವಿಧಿಸಲಾಗಿದೆ. 14 ವೈದ್ಯಕೀಯ ಸಂಸ್ಥೆಗಳಿಗೆ ಒಟ್ಟಾರೆಯಾಗಿ 6 ಲಕ್ಷ 15 ಸಾವಿರ ದಂಡ ಹಾಕಲಾಗಿದೆ.

ಬುಧವಾರ ನಡೆದ ಸಭೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು 58 ಪ್ರಕರಣಗಳ ಬಗ್ಗೆ ವಿವರ ನೀಡಿದರು. ಇವುಗಳಲ್ಲಿ ನಿಯಮ ಉಲ್ಲಂಘಿಸಿದ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಪುನರ್ವಸತಿ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲಾಗಿದೆ.

ಉಲ್ಲಂಘನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ದಲ್ಲಿರುವ ಸನ್‌ರೈಸ್ ಮಲ್ಟಿಸ್ಪೆಷಾಲಿಟಿ ಕಮಲಾನಗರದಲ್ಲಿರುವ ಸರ್ವಶಕ್ತಿ ಸಲಹಾ ಕೇಂದ್ರ, ಸಿ.ಕೆ. ಪಾಳ್ಯ

ದಲ್ಲಿರುವ ಶೇಷಾದ್ರಿ ಪುರದಲ್ಲಿರುವ ಶ್ರೀ ಶಕ್ತಿ ಹೆಲ್ತ್ ಕೇರ್ ಹಾಗೂ ದೊಡ್ಡಕನ್ನಳ್ಳಿಯಲ್ಲಿರುವ ಹೆಲ್ಡ್‌ ಲೈನ್ ಪಾಲಿ ಕ್ಲಿನಿಕ್‌ ಎಫ್‌ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಯಾವೆಲ್ಲಾ ಕ್ಲಿನಿಕ್‌ಗೆ ದಂಡ!

ತಿಗಳರಪಾಳ್ಯದಲ್ಲಿರುವ ಶಾರದಾ ಕ್ಲಿನಿಕ್ (ಮೌಲ್ಯ ಕ್ಲಿನಿಕ್), ನಾಗಶೆಟ್ಟಿಹಳ್ಳಿಯ ರೈಲ್ವೆ ಗೇಟ್ ಬಳಿಯಿರುವ ಸ್ನೇಹ ಕ್ಲಿನಿಕ್ ಹಾಗೂ ಬಸವೇಶ್ವರ ಲೇಔಟ್‌ನಲ್ಲಿರುವ ಫಸ್ಟ್ ಕೇರ್ ಸೂಪ‌ರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಆ್ಯಂಡ್ ಡಯಾಗೋಸಿಸ್ ಸೆಂಟರ್‌ ತಲಾ ₹25 ಸಾವಿರ ಮತ್ತು ಕನಕಪುರ ಮುಖ್ಯರಸ್ತೆಯಲ್ಲಿರುವ ಗಗನ ಡೆಂಟಲ್ ಕೇ‌ರ್ ಕ್ಲಿನಿಕ್‌ಗೆ 15 ಸಾವಿರ ದಂಡ ವಿಧಿಸಲಾಗಿದೆ.

ಚಿಕ್ಕಬಾಣಾವರ ದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ಗರಿಷ್ಠ ₹75 ಸಾವಿರ ದಂಡ ಹಾಕಲಾಗಿದೆ. ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ ಅಂದ್ರಹಳ್ಳಿಯ ಮಾರುತಿ ಕ್ಲಿನಿಕ್, ಕಲ್ಯಾಣನಗರದ ಎಚ್‌ಎಸ್‌ಬಿಆ‌ರ್ ಲೇಔಟ್‌ನಲ್ಲಿರುವ ಟ್ರೈಲೈಫ್ ಆಸ್ಪತ್ರೆ, ಮಾರುತಿನಗರದಲ್ಲಿರುವ ಹುಸೈನ್ ಪಾಲಿ ಕ್ಲಿನಿಕ್, ಸಿಂಥನ್ ನಗರದ ವಿದ್ಯಾಸಾಗರ ಕ್ರಾಸ್‌ನಲ್ಲಿರುವ ಸುರಕ್ಷಾ ಆಸ್ಪತ್ರೆ, ಪೀಣ್ಯದ ಬಾಲಾಜಿನಗರದಲ್ಲಿರುವ ರೈಟ್ ಟೈಮ್ ಫೌಂಡೇಷನ್, ಕೆಂಗೇರಿ ಯಲ್ಲಿರುವ ಸಹನಾ ಫೌಂಡೇಷನ್ (ಸ್ಟೈಲ್ ಫೌಂಡೇಷನ್) ಪುನರ್ವಸತಿ ಕೇಂದ್ರಕ್ಕೆ ತಲಾ 50 ಸಾವಿರ ದಂಡ ವಿಧಿಸಲಾಗಿದೆ.

ಕಾಮಾಕ್ಷಿಪಾಳ್ಯದಲ್ಲಿರುವ ಸಂಜೀವಿನಿ ಹೆಲ್ತ್ ಸೆಂಟರ್, ಕೋನಪ್ಪನ ಅಗ್ರಹಾರದ ಗೋವಿಂದಶೆಟ್ಟಿ ಪಾಳ್ಯದಲ್ಲಿರುವ ಇನ್ನಿನಿಟಿ ಕ್ಲಿನಿಕ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ಮುನಿಸ್ವಾಮಿ ಲೇಔಟ್‌ನಲ್ಲಿರುವ ಬಾಲಾಜಿಕ್ಲಿನಿಕ್‌ಗೆ ಕೂಡ ತಲಾ 50 ಸಾವಿರ ದಂಡ ಹಾಕಲಾಗಿದೆ. ಒಟ್ಟು 14 ಸಂಸ್ಥೆಗಳಿಗೆ 6.15 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

 



Source link

Leave a Reply

Your email address will not be published. Required fields are marked *