ಗಂಡನ ಜೊತೆ ಜಗಳ, 5 ವರ್ಷದ ಮಗಳನ್ನ ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ | Bengaluru Mother Kills Daughter Attempts Suicide Marital Dispute San

ಗಂಡನ ಜೊತೆ ಜಗಳ, 5 ವರ್ಷದ ಮಗಳನ್ನ ಕೊಂದು, ಆತ್ಮಹತ್ಯೆಗೆ ಯತ್ನಿಸಿದ ತಾಯಿ | Bengaluru Mother Kills Daughter Attempts Suicide Marital Dispute San



ನೆಲಮಂಗಲದಲ್ಲಿ ಗಂಡ ಹೆಂಡತಿ ಜಗಳದಲ್ಲಿ ಮಗು ಬಲಿಯಾಗಿದೆ. ಕುಡಿತದ ದಾಸನಾಗಿದ್ದ ಗಂಡನ ಕಿರುಕುಳಕ್ಕೆ ಬೇಸತ್ತು ಮಗಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರು (ಜು.24): ಗಂಡ ಹೆಂಡತಿ ಜಗಳದಲ್ಲಿ ಬಾಳಿ ಬದುಕಬೇಕಾಗಿದ್ದ ಮಗು ದಾರಣವಾಗಿ ಸಾವು ಕಂಡಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಗಂಡನೊಂದಿಗಿನ ಪ್ರತಿದಿನದ ಜಗಳಕ್ಕೆ ಬೇಸತ್ತು ಮಗಳನ್ನೂ ಕೊಂದು ತಾಯಿ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

28 ವರ್ಷದ ಮಹಾಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ತನ್ನ 5 ವರ್ಷದ ಮಗಳು ಸಿರಿಯನ್ನು ಆತ್ಮಹತ್ಯೆ ಪ್ರಯತ್ನ ಮಾಡಿಕೊಳ್ಳುವ ಮುನ್ನ ಸಾಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 8 ವರ್ಷದ ಹಿಂದೆ ಜಯರಾಮ್‌ ಎನ್ನುವ ವ್ಯಕ್ತಿಯನ್ನು ಮಹಾಲಕ್ಷ್ಮೀ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಎರಡು ವರ್ಷದಿಂದ ಜಯರಾಮ್‌ ಯಾವುದೇ ಕೆಲಸವಿಲ್ಲದೆ ಕೇವಲ ಕುಡಿತದ ದಾಸನಾಗಿದ್ದ. ಕೆಲಸಕ್ಕೆ ಹೋಗದೆ ಮನೆಯಲ್ಲಿ ಪತಿ ಜಯರಾಮ್‌ ಮನೆಯಲ್ಲಿಯೇ ಇರುತ್ತಿದ್ದ.

ಇದರಿಂದಾಗಿ ಮನೆಯಲ್ಲಿ ಆಗಾಗ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಬುಧವಾರ ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿದ್ದು, ರೂಮ್‌ಗೆ ಹೋಗಿ ಮಹಾಲಕ್ಷ್ಮೀ ಬಾಗಿಲು ಹಾಕಿಕೊಂಡಿದ್ದಳು. ಸಿಟ್ಟಿನಿಂದ ಮಗುವಿನ ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.

ಬೆಂಗಳೂರು ಉತ್ತರ ತಾಲೂಕಿನ ಕೆಜಿ.ಲಕ್ಕೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಾಲಕ್ಷ್ಮೀ ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ, ಮನೆಯವರು ಡೋರ್ ಒಡೆದು ಒಳಹೊಕ್ಕಿದ್ದಾರೆ. ಸ್ಥಳೀಯರಿಂದ ತಾಯಿ ಮಹಾಲಕ್ಷ್ಮಿ ರಕ್ಷಣೆ ಮಾಡಲಾಗಿದ್ದು,ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ ಪಿ ಡಾ.ವೆಂಕಟೇಶ್ ಪ್ರಸನ್ನ, ಸಿಪಿಐ ಮುರಳಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಪತಿ ಜಯರಾಮ್ ನನ್ನ ವಶಕ್ಕೆ ಪಡೆದು ಪೊಲೀಸರ ವಿಚಾರಣೆ ಮಾಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 



Source link

Leave a Reply

Your email address will not be published. Required fields are marked *