Headlines

Amruthadhaare Serial: ಒಂಟಿಯಾಗಿರೋ ಮಲ್ಲಿ ಲೈಫ್​ಗೆ ಹೊಸ ಎಂಟ್ರಿ? ಯಾರೀತ?

Amruthadhaare Serial: ಒಂಟಿಯಾಗಿರೋ ಮಲ್ಲಿ ಲೈಫ್​ಗೆ ಹೊಸ ಎಂಟ್ರಿ? ಯಾರೀತ?

ಸದ್ಯ ಸುಧಾ ಮತ್ತು ಸೃಜನ್​ ಮದುವೆ ಮುಗಿದಿದೆ. ಈಗೇನಿದ್ದರೂ ಮಲ್ಲಿಯ ಲೈಫ್​ ಸರಿಯಾಗಬೇಕಿದೆ. ಆದ್ದರಿಂದ ಹೊಸ ಎಂಟ್ರಿ ಆಗ್ತಿದೆ. ಯಾರೀತ? ಮಲ್ಲಿಗೆ ಮತ್ತೊಂದು ಮದ್ವೆಯಾಗತ್ತಾ?

ಸದ್ಯ ಅಮೃತಧಾರೆಯಲ್ಲಿ ಮಗುವಿನ ನಾಮಕರಣದ ವಿಶೇಷ ಎಪಿಸೋಡ್​ ಮುಗಿದಿವೆ. ಮಗುವಿಗೆ ಆಕಾಶ್​ ಎಂದು ಹೆಸರು ಇಟ್ಟಾಗಿದೆ. ಭೂಮಿಯ ಮಗ ಆಕಾಶ್​ ಎನ್ನುವ ಅರ್ಥದಲ್ಲಿ ಈ ಹೆಸರು ಇಡಲಾಗಿದೆ. ಆದರೆ ಇನ್ನೊಂದು ಮಗುವಿಗಾಗಿ ಶೋಧ ಕಾರ್ಯವನ್ನು ಗೌತಮ್​ ಮತ್ತು ಆನಂದ್ ಮುಂದುವರೆಸಿದ್ದಾರೆ. ಈ ವಿಷಯ ಭೂಮಿಕಾಗೆ ತಿಳಿಸಿ ಅವರ ಲೈಫ್​ ಬರ್ಬಾದ್​ ಮಾಡುವ ಯೋಚನೆಯಲ್ಲಿದ್ದಾಳೆ ಶಕುಂತಲಾ. ನಾಮಕರಣದ ದಿನ ಮನೆಗೆ ಜೈದೇವ ನಾಚಿಕೆ ಬಿಟ್ಟು ಬಂದಿದ್ದಾನೆ.

ಆದರೆ ಅವನ ಪ್ಲ್ಯಾನೇ ಬೇರೆ ಇದೆ. ಭೂಮಿಕಾ ಆತನನ್ನು ಒಳಗೆ ಬಿಡುವುದು ಬೇಡ ಎಂದಿದ್ದರೂ ಎಮೋಷನಲ್​ ಬ್ಲ್ಯಾಕ್​ಮೇಲ್​​ ಮಾಡಿ ಶಕುಂತಲಾ ಆತ ಒಳಗೆ ಬರುವ ಹಾಗೆ ಮಾಡಿದ್ದಾಳೆ. ಆತ ಮಗುವನ್ನು ಎತ್ತಿಕೊಳ್ಳುವುದನ್ನು ನೋಡಿ ಭೂಮಿಕಾ ಮತ್ತು ಗೌತಮ್​ ಉರಿದು ಬಿದ್ದಿದ್ದಾರೆ.

ಇದು ಒಂದೆಡೆಯಾದರೆ, ಅತ್ತ ಸುಧಾಳ ಮದುವೆಯಾಗಿದೆ. ಪತಿ ಸೃಜನ್​ ಜೊತೆ ಅವಳು ತುಂಬಾ ಸಂತೋಷವಾಗಿದ್ದಾಳೆ. ಮಗುವಿನ ನಾಮಕರಣದ ದಿನ ಮನೆಗೆ ಬಂದ ಮಹಿಳೆಯರು, ಮಲ್ಲಿಯ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ.

ಅಸಲಿಗೆ ಇದು ಶಕುಂತಲಾ ಪ್ಲ್ಯಾನೇ ಆಗಿತ್ತು. ಮಲ್ಲಿಗೆ ನೋವಾದರೆ, ಭೂಮಿಕಾ ಮತ್ತು ಗೌತಮ್​ಗೂ ನೋವಾಗುತ್ತದೆ ಎನ್ನುವುದು ಒಂದಾದರೆ, ಮಲ್ಲಿ ಈಗ ಕೋಟ್ಯಧೀಶ್ವರೆ ಆಗಿರುವ ಕಾರಣ, ಆಕೆಯ ಆಸ್ತಿಯನ್ನೂ ಕಬಳಿಸಲು ಜೈದೇವನನ್ನು ಮತ್ತೆ ಮಲ್ಲಿಯ ಜೊತೆ ಸೇರಿಸುವ ಹುನ್ನಾರ ಅವಳದ್ದು.

ಅದೇ ಕಾರಣಕ್ಕೆ ಅಕ್ಕ-ಪಕ್ಕದ ಮಹಿಳೆಯರನ್ನು ಕರೆಸಿದ್ದಳು. ಅದರಂತೆ ಅವರು ಕೂಡ ಮಲ್ಲಿಗೆ ಚುಚ್ಚು ಮಾತು ಆಡಿದ್ದರು. ಆದರೆ ಭೂಮಿ ಟೀಚರ್ ಸುಮ್ನೆ ಇರ್ತಾಳಾ? ಆಡುವವರ ಬಾಯಿಗೆ ಹೇಗೆ ಬೀಗ ಹಾಕಬೇಕು ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತು. ಮೂದಲಿಸಿದವರನ್ನು ತರಾಟೆಗೆ ತೆಗೆದುಕೊಂಡ ಭೂಮಿಕಾ, ಅವರನ್ನು ಮನೆಯಿಂದ ಹೊರಕ್ಕೆ ಕಳಿಸಿದಳು. ಏನೋ ಪ್ಲ್ಯಾನ್​ ಮಾಡಿಕೊಂಡಿದ್ದ ಶಕುಂತಲಾಗೂ ಮುಖಭಂಗ ಆದಂತಾಯಿತು.

ಇನ್ನು ಭೂಮಿಕಾ ಈ ವಿಷಯದಿಂದ ವಿಚಲಿತಳಾಗಿ, ಮಲ್ಲಿಯ ಲೈಫ್​ ಸೆಟಲ್​ ಮಾಡುವ ಯೋಚನೆಯಲ್ಲಿದ್ದಾಳೆ. ಗೌತಮ್ ಜೊತೆ ಈ ವಿಷಯವಾಗಿ ಮಾತನಾಡಿದ್ದಾಳೆ. ಮಲ್ಲಿಯ ಬದುಕನ್ನು ಸರಿ ಮಾಡುವುದಾಗಿ ಇಬ್ಬರೂ ಮಾತನಾಡಿದ್ದಾರೆ.

ಆಕೆಯ ಲೈಫ್​ ಸರಿಯಾಗಬೇಕು ಎಂದರೆ, ಹೊಸಬರ ಎಂಟ್ರಿ ಆಗಲೇಬೇಕು. ಕೊ*ಲೆಗೆಡುವ ಜೈದೇವ ಮತ್ತು ಅವಳು ಒಂದಾಗುವಂತೆ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಆತನಿಗೆ ಇದಾಗಲೇ ಮದುವೆಯಾಗಿದೆ.

ಇದನ್ನು ನೋಡಿದರೆ, ಅವಳ ಲೈಫ್​ನಲ್ಲಿ ಹೊಸ ಎಂಟ್ರಿ ಆಗುವುದು ಪಕ್ಕಾ ಆಗಿದೆ. ಇದೀಗ ಹೊಸ ಎಂಟ್ರಿ ಯಾರು ಎನ್ನುವ ಕುತೂಹಲ ವೀಕ್ಷಕರದ್ದು. ಮತ್ತೊಂದು ರೋಲ್​ಗೆ ಯಾವ ನಟ ಬರುತ್ತಾನೆ ಎಂದು ಕಾಯುತ್ತಿದ್ದಾರೆ ವೀಕ್ಷಕರು. ಮಲ್ಲಿಗೆ ಇನ್ನೊಂದು ಮದುವೆ ಮಾಡಬೇಕು, ಜೈದೇವ ಮತ್ತು ಶಕುಂತಲಾ ಅದನ್ನು ನೋಡಿ ಹೊಟ್ಟೆ ಉರಿದುಕೊಂಡು ಸಾಯಬೇಕು. ದಿಯಾಳ ಹಿಂದೆ ಹೋದ ಜೈದೇವ ಬೀದಿ ಪಾಲಾಗಬೇಕು ಎನ್ನುವುದು ವೀಕ್ಷಕರ ಮಹದಾಸೆ. ಆದರೆ ಸೀರಿಯಲ್​ ಯಾವ ಟರ್ನ್​ ತೆಗೆದುಕೊಳ್ಳುತ್ತದೆ ನೋಡಬೇಕಿದೆ.

Source link

Leave a Reply

Your email address will not be published. Required fields are marked *