ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಿ: ದಿನಕ್ಕೆ 1-2 ಗಂಟೆಗಿಂತ ಹೆಚ್ಚು ಸ್ಕ್ರೀನ್ ಟೈಮ್ ಬೇಡ. ಫೋನ್ ಅಥವಾ ಟ್ಯಾಬ್ಲೆಟ್ ಕೊಡೋದು ಒಂದು ರಿವಾರ್ಡ್ ಅಲ್ಲ, ಒಂದು ನಿರ್ಬಂಧ ಅಂತ ತಿಳ್ಕೊಳ್ಳಿ.
ಬೇರೆ ಆಕ್ಟಿವಿಟಿಗಳಿಗೆ ಪ್ರೋತ್ಸಾಹ ಕೊಡಿ: ಪುಸ್ತಕ ಓದೋದು, ಆಟ ಆಡೋದು, ಕಲೆ ಕಲಿಯೋದು ಈ ತರ ಗುಣಮಟ್ಟದ ಕೆಲಸಗಳಲ್ಲಿ ಮಕ್ಕಳನ್ನ ತೊಡಗಿಸಿ.
ರಾತ್ರಿ ಫೋನ್ ಬಳಕೆ ಬೇಡ: ಮಲಗುವ ಮುನ್ನ ಫೋನ್ ಬಳಸಿದ್ರೆ ನಿದ್ರೆ ಬರಲ್ಲ, ಮೆದುಳಿಗೆ ವಿಶ್ರಾಂತಿ ಸಿಗಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಏನ್ ನೋಡ್ತಾರೆ ಗಮನಿಸಿ: ಮಕ್ಕಳು ಯಾವ ಆ್ಯಪ್ ಬಳಸ್ತಾರೆ, ಏನು ನೋಡ್ತಾರೆ ಅಂತ ಪರೋಕ್ಷವಾಗಿ ಗಮನಿಸಿ.
ನೀವು ಒಳ್ಳೆ ಮಾದರಿಯಾಗಿರಿ: ಪೇರೆಂಟ್ಸ್ ಜಾಸ್ತಿ ಫೋನ್ ಬಳಸಿದ್ರೆ ಮಕ್ಕಳು ಕೂಡ ಅದನ್ನೇ ಮಾಡ್ತಾರೆ. ಹಾಗಾಗಿ ಮಕ್ಕಳ ಮುಂದೆ ಫೋನ್ ಬಳಕೆ ಕಡಿಮೆ ಮಾಡಿ.