
ಬಿಗ್ಬಾಸ್ ಖ್ಯಾತಿಯ, ರ್ಯಾಪರ್ ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ (ಕು)ಖ್ಯಾತಿ ಹೆಚ್ಚಿಸಿಕೊಂಡಿರೋ ನಟಿ ನಿವೇದಿತಾ ಗೌಡ, ಕುತೂಹಲ ಎನ್ನುವಂತೆ ಪದೇ ಪದೇ ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಒಂದು ಮಾತು ಹೇಳಿದ್ರೆ ಸಾಕು, ರೀಲ್ಸ್ಗಾಗಿಯೇ ದೊಡ್ಡ ಜಾಗವನ್ನು ಅರೇಂಜ್ ಮಾಡಿಸುವ ತಾಕತ್ತು ಇದ್ದರೂ ಬಾತ್ರೂಮ್ನಲ್ಲಿಯೇ ನಟಿ ರೀಲ್ಸ್ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿ ಹೋಗಿದೆ.