
ತುಮಕೂರು: ವಿವಿಧ ಅವಘಡದಿಂದಾಗಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ವೈದ್ಯಕೀಯ ತಪಾಸಣೆಯನ್ನು ಸಿದ್ಧಗಂಗಾ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಎಪಿಡಿ ಹಾಗೂ ಅರೇಕಲ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 12 ಕ್ಕೂ ಹೆಚ್ಚು ರೋಗಿಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿ ಮಾರ್ಗದರ್ಶನ ನೀಡಲಾಯಿತು.
ಎಸ್ ಎಂಸಿಆರ್ ಐ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಶಿಬಿರದಲ್ಲಿ ತಪಾಸಣೆಗೆ ಒಳಗಾದ ಅನೇಕ ರೋಗಿಗಳ ಬಾಳಿನಲ್ಲಿ ಮತ್ತೆ ಮಂದಹಾಸ ಮೂಡಿರುವುದು ಮರುಜೀವನ ನಡೆಸುವ ಶಕ್ತಿ ಬಂದಿರುವುದು ನಮ್ಮ ಸೇವೆಗೆ ಸಾರ್ಥಕಥೆ ತಂದಿದೆ ಎಂದರು.
ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನ ಮೂರ್ತಿ ಮಾತನಾಡಿ ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಉಚಿತ ಸೇವೆ ನಿರಂತರವಾಗಿದ್ದು ಪ್ರಧಾನಮಂತ್ರಿ ಜನೌಷಧ ಕೂಡ ಔಷಧ ಖರ್ಚುಗಳನ್ನು ಕಡಿಮೆ ಮಾಡಿವೆ ಸಾರ್ವಜನಿಕರು ನಮ್ಮ ಸೇವೆ ಉಪಯೋಗಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಎಪಿಡಿ ಸಂಸ್ಥೆಯ ತೇಜಸ್,ಶ್ವೇತ, ಕೀಲುಮೂಳೆ ತಜ್ಞರಾದ ಡಾ.ದುಶ್ಯಂತ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.