
ತುಮಕೂರು ನಗರ ಮಂಡಿಪೇಟೆಯಲ್ಲಿರುವ ಶ್ರೀ ಮಾರಿಯಮ್ಮ ದೇವಿಯ 62 ನೇ ರ‍್ಷದ ಜಾತ್ರಾ ಮಹೋತ್ಸವನ್ನು ಜುಲೈ 29 ರಿಂದ 31 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಸ್ಲಂ ಸಮಿತಿ, ಮಾರಿಯಮ್ಮ ಯುವಕರ ಸಂಘ ಮತ್ತು ಯುವ ಭೀಮ ಪಡೆಯ ಪದಾಧಿಕಾರಿಗಳು ಹಾಗೂ ಮಾರಿಯಮ್ಮ ನಗರದ ಹಿರಿಯ ಮುಖಂಡರುಗಳು ತಿಳಿಸಿದ್ದಾರೆ
ಇಂದು ಮಾರಿಯಮ್ಮ ನಗರದ ಸಂಘದ ಕಛೇರಿಯಲ್ಲಿ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಗಳನ್ನು ಸ್ಲಂ ಜನಾಂದೋಲನ ರ‍್ನಾಟಕ ರಾಜ್ಯ ಸಂಚಾಲಕರಾದ ಎ,ನರಸಿಂಹಮರ‍್ತಿ ಬಿಡುಗಡೆ ಗೊಳಿಸಿ ಮಾತನಾಡಿದರು
ತುಮಕೂರು ನಗರದಲ್ಲಿ ಶ್ರಮಿಕರೇ ಹೆಚ್ಚು ವಾಸಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ರ‍್ಕಾರಗಳಿಂದ ಸ್ಮರ‍್ಟಸಿಟಿ ಯೋಜನೆ ಅಡಿಯಲ್ಲಿ ವಸತಿ ಸಮುಚ್ಚಯ ಪಡೆದಿರುವ ಮಾರಿಯಮ್ಮ ನಗರದಲ್ಲಿ ಅದ್ದೂರಿಯಾಗಿ ಈ ಬಾರಿ ಶ್ರೀ ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಜುಲೈ 29 ರ ಮಂಗಳವಾರ ಶ್ರೀ ಆದಿಶಕ್ತಿ ಮಾರಿಯಮ್ಮ ದೇವಿಯ ಕರಗ ವನ್ನು ತುಮಕೂರು ಅಮಾನಿಕೆರೆ ಯಿಂದ ಪ್ರಾರಂಬಿಸಿ ಮಂಡಿ ಪೇಟೆಯ ಮೂಲ ದೇವಸ್ಥಾದಲ್ಲಿ ಅಂಬಲಿ ಸೇವೆಯನ್ನು ನೆರವೇರಿಸಲಾಗುವುದು.

ದಿನಾಂಕ: 30.07.2025 ರಂದು ಶ್ರೀ ಮಾರಿಯಮ್ಮ ದೇವಿಯ ಮೆರವಣಿಗೆಯನ್ನು ಡಾ|| ಜಿ.ಪರಮೇಶ್ವರ್, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ವಿ.ಸೋಮಣ್ಣ ಕೇಂದ್ರ ರೈಲ್ವೇ ಖಾತೆ ಸಚಿವರ ಘನ ಉಪಸ್ತಿತಿಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳಾದ, ಶ್ರೀಮತಿ ಶುಭಕಲ್ಯಾಣ್ ರವರು ಉದ್ಘಾಟನೆ ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಬಿ.ವಿ.ಅಶ್ವಿಜಾ, ಮುಖಂಡರಾದ ಎಂ.ಪಿ ಮಹೇಶ್, ಎನ್.ಗೋವಿಂದರಾಜ್, ಲಕ್ಷ್ಮೀನರಸಿಂಹರಾಜು, ಜಿಯಾಉಲ್ಲಾ, ವಿನಯ್ ಜೈನ್, ದಿಪೀಕಾ , ಜಯರಾಮ್, ಡಿ.ವೈ.ಎಸ್.ಪಿ ಚಂದ್ರಶೇಖರ್, ನಗರ ಠಾಣೆಯ ಪಿ.ಐ ಅವಿನಾಶ್ ಆಗಮಿಸಲಿದ್ದಾರೆ.
ಮೆರವಣಿಗೆಯಲ್ಲಿ ಕಲಾ ತಂಡಗಳಾದ ತಮಿಳು ನಾಡಿನ ಆದಿಮೂಲಂ ಪೊಂಬೆ ವಾದ್ಯಾ, ಬೆಂಗಳೂರಿನ ಹೆಸರಾಂತ ತಮಟೆ ವಾದ್ಯದ ಸುಂದರ್ ತಂಡ, ವೇಲೂರು ಕಾಳಿಕಾದೇವಿಯ ನೃತ್ಯ, ತುಮಕೂರಿನ ವೀರಾಂಜಿನಯ್ಯ, ಕೀಲು ಕುದುರೆಯ ಚಂದ್ರಶೇಖರ್ ತಂಡ ಬಾಗವಹಿಸಲಿವೆ ಎಂದರು ಈ ಸಂರ‍್ಬದಲ್ಲಿ ಮಾರಿಯಮ್ಮ ಯುವಕರ ಸಂಘದ ಪದಾಧಿಕಾರಿಗಳಾದ ಕಣ್ಣನ್, ಮಾದವ, ಕೃಷ್ಣ, ಮಾರಿ, ರಾಜಾ, ಮತ್ತು ಸ್ಲಂ ಸಮಿತಿಯ ಪದಾಧಿಕಾರಿಗಳಾದ ತಿರುಮಲಯ್ಯ, ಕೃಷ್ಣಮರ‍್ತಿ ಹಾಗೂ ಯುವ ಭೀಮಪಡೆಯ ಪದಾದಿಕಾರಿಗಳು ಪಾಲ್ಗೊಂಡಿದ್ದರು.