10ನೇ ಕ್ಲಾಸ್ ಓದ್ತಿದ್ದ ಮಗಳ ಪ್ರೇಮಕ್ಕೆ ತಾಯಿಯ ವಿರೋಧ: ಬಾಯ್‌ಫ್ರೆಂಡ್ ಜೊತೆ ಸೇರಿ ಅಮ್ಮನನ್ನೇ ಕೊಂದ ಬಾಲಕಿ | Love Affair Turns Deadly Teenage Girl Kills Mother In Telangana

10ನೇ ಕ್ಲಾಸ್ ಓದ್ತಿದ್ದ ಮಗಳ ಪ್ರೇಮಕ್ಕೆ ತಾಯಿಯ ವಿರೋಧ: ಬಾಯ್‌ಫ್ರೆಂಡ್ ಜೊತೆ ಸೇರಿ ಅಮ್ಮನನ್ನೇ ಕೊಂದ ಬಾಲಕಿ | Love Affair Turns Deadly Teenage Girl Kills Mother In Telangana



ತೆಲಂಗಾಣದಲ್ಲಿ 16 ವರ್ಷದ ಬಾಲಕಿ ತನ್ನ ಪ್ರಿಯಕರ ಮತ್ತು ಸಹೋದರನೊಂದಿಗೆ ಸೇರಿ ತಾಯಿಯನ್ನು ಹತ್ಯೆಗೈದಿದ್ದಾಳೆ.

ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು:16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಹಾಗೂ ಸೋದರನ ಜೊತೆ ಸೇರಿ ತನ್ನ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ತೆಲಂಗಾಣದ ಜೆಡ್ಡಿಮೆಟ್ಲದಲ್ಲಿ ನಡೆದಿದೆ. ತನ್ನ ಪ್ರೇಮ ಸಂಬಂಧ ತಿಳಿದ ತಾಯಿ ಬೈದು ಬುದ್ಧಿ ಹೇಳಿದ್ದಕ್ಕೆ ಆಕ್ರೋಶಗೊಂಡ ಬಾಲಕಿ ಈ ಕೃತ್ಯವೆಸಗಿದ್ದು, ಸ್ಥಳೀಯರಲ್ಲಿ ಈ ಘಟನೆ ಆಘಾತವನ್ನುಂಡು ಮಾಡಿದೆ. ಹೀಗೆ 39 ವರ್ಷದ ತಾಯಿಯನ್ನೇ ಹತ್ಯೆ ಮಾಡಿದ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗೆ ಅಪ್ರಾಪ್ತ ಮಗಳಿಂದಲೇ ಹತ್ಯೆಯಾದ ತಾಯಿಯನ್ನು ಅಂಜಲಿ(39) ಎಂದು ಗುರುತಿಸಲಾಗಿದೆ.

10ನೇ ಕ್ಲಾಸ್‌ ಮೇಲೆ ಪ್ರೀತಿ ಪ್ರೇಮದ ಹಿಂದೆ ಬಿದ್ದಿದ್ದ ಮಗಳಿಗೆ ತಾಯಿ ಬುದ್ಧಿಮಾತು

10ನೇ ತರಗತಿಯಲ್ಲಿ ಓದುತ್ತಿದ್ದ ಮಗಳ ಪ್ರೇಮ ಸಂಬಂಧವನ್ನು ನೋಡಿದ ತಾಯಿ ಅಂಜಲಿ ಮಗಳಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬುದ್ಧಿ ಹೇಳಿ ಬೈದಿದ್ದಾಳೆ. ಇದರಿಂದ ಅಮ್ಮನ ಮೇಲೆ ಕೋಪಗೊಂಡಿದ್ದ ಮಗಳು ಅಮ್ಮನ ಕತೆಯನ್ನೇ ಮುಗಿಸುವ ಪ್ಲಾನ್ ಮಾಡಿದ್ದಾಳೆ. ತನ್ನ ಬಾಯ್‌ಫ್ರೆಂಡ್ 19 ವರ್ಷದ ಪಗಿಲ್ಲಾ ಶಿವ ಜೊತೆ ಅಮ್ಮ ಬೈದಿರುವ ವಿಚಾರವನ್ನು ಹೇಳಿದ್ದಾಳೆ. ಆತ ತಾಯಿಯ ಕೊಲೆ ಮಾಡುವ ಪ್ಲಾನ್ ಹೇಳಿದ್ದಾನೆ ಎಂದು ವರದಿಯಾಗಿದೆ. ಹಾಗೆಯೇ ತನ್ನ 18 ವರ್ಷದ ಸೋದರ ಯಶ್ವಂತ್‌ ಹಾಗೂ ಬಾಯ್‌ಫ್ರೆಂಡ್ ಪಗಿಲ್ಲಾ ಶಿವ ಜೊತೆ ಸೇರಿಕೊಂಡು ತಾಯಿಯ ಕೊಲೆಗೆ ಈ ಅಪ್ರಾಪ್ತ ಬಾಲಕಿ ಸಂಚು ರೂಪಿಸಿದ್ದಾರೆ.

ಹಾಗೆಯೇ ಮೂವರು ಸೇರಿ ಅಂಜಲಿಯ ಕತ್ತು ಹಿಸುಕಿ ಕೊಲೆ ಮಾಡಿ ನಂತರದ ಕಬ್ಬಿಣದ ರಾಡ್‌ಗಳಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಮೆಡ್ಚಾಲ ಜಿಲ್ಲೆಗೆ ಸೇರುವ ಆದರೆ ಹೈದರಾಬಾದ್‌ನ ಉಪನಗರ ವ್ಯಾಪ್ತಿಗೆ ಸೇರುವ ಜೆಡ್ಡಿಮೆಟ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ತನಿಖಾಧಿಕಾರಿಗಳು ಹೇಳಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ. ಹಾಗೂ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ.

ಈ ಕೊಲೆಯ ಹಿಂದಿರುವ ನಿಜವಾದ ಕಾರಣ ಏನು ಎಂಬ ಬಗ್ಗೆ ತಿಳಿಯಲು ಪೊಲೀಸರು ಈ ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *