
ತುಮಕೂರು:ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯಬೇಕೆಂಬ ಮಹತ್ವದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತಿದ್ದು, ಮುಂದಿನ ವರ್ಷದಿಂದ ಪ್ರತಿವರ್ಷ ೭೫ ಸಾವಿರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೃಜಿಸಲು ಮುಂದಾಗಿದೆ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಡಿಯಲ್ಲಿ ಬರುವ ಸ್ವಾಮಿ ವಿವೇಕಾನಂದ ಇಚಿಟಿಗ್ರೆಟೆಡ್ ರೂರಲ್ ಹೆಲ್ತ್ ಸೆಂಟರ್ , ಶ್ರೀಶಾರದದೇವಿ ಐ ಹಾಸ್ಪಿಟಲ್ ಅಂಡ್ ರಿಸರ್ಚ ಸೆಂಟರ್ ಅವರು, ಇನ್‌ಪೋಸಿಸ್ ಪೌಂಢೆಷನ್ ಮತ್ತು ಎಂ.ಎಸ್.ಮೂರ್ತಿ ಟ್ರಸ್ಟ್ ಬೆಂಗಳೂರು, ಲಯನ್ಸ್ ಕ್ಲಬ್ ಅಡಿಯಲ್ಲಿ ಬರುವ ಡಾ, ಸಿ.ಆರ್, ಚಂದ್ರಶೇಖರ್ ಇನ್ಸಿಟ್ಯೂಟ್ ಅಫ್ ಸ್ಪೀಚ್ ಅಂಡ್ ಹಿಯರಿಂಗ್ ಸಹಯೋಗದಲ್ಲಿ ಆಯೋಜಿಸಿದ್ದ ಐವತ್ತು ಸಾವಿರ ಕಣ್ಣಿನ ಶಸ್ತçಚಿಕಿತ್ಸೆಯ ಸಂಭ್ರಮಾಚರಣೆ,ಕಾರ್ನಿಯ ಯೋಜನೆಯ ವಿಸ್ತರಣೆ ಹಾಗೂ ಅಜಿಂ ಪ್ರೇಮಜಿ ಪೌಂಡೇಷನ್ ಸಹಯೋಗದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿರುವ ವಾಕ್ ಮತ್ತು ಶ್ರವಣ ದೋಷ ಮಕ್ಕಳ ಪತ್ತೆ ಹಚ್ಚುವಿಕೆ ಕಾರ್ಯಕ್ರಮಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಗ್ರಾಮೀಣ ಭಾಗದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಈ ವರ್ಷದ ಬಜೆಟ್‌ನಲ್ಲಿ ೩೭೨೨೭ ಕೋಟಿ ರೂಗಳನ್ನು ಖರ್ಚು ಮಾಡುತಿದ್ದು, ಇದರಲ್ಲಿ ೯೪೬೬ ಕೋಟಿ ರೂಗಳು ಕರ್ನಾಟಕಕ್ಕೆ ದೊರಕಿದ ಎಂದರು.

ಬಿಬಿಎAಪಿ ಸದಸ್ಯನಾಗಿ,ನಗರಾಭಿವೃದ್ದಿ ಮಂತ್ರಿಯಾಗಿ ಕಳೆದೆ ನಲವತ್ತು ವರ್ಷಗಳಿಂದ ರಾಜ್ಯದಲ್ಲಿ ಇನ್ಪೋಸಿಸ್ ಸಂಸ್ಥೆ ಮಾಡಿರುವ ಸೇವೆಯನ್ನು ಕಣ್ಣಾರೆ ಕಂಡಿದ್ದೇನೆ.ಓರ್ವ ಸ್ವಾಮೀಜಿಯಾಗಿ ಜಪಾನಂದ ಜೀ ಅವರು ಪಾವಗಡ ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಮಾಡಿರುವ ಸಮಾಜ ಸೇವೆ ಅದ್ವಿತಿಯವಾಗಿದೆ.ಅವರಿಗೆ ಅಜಿಂ ಪ್ರೇಮಜಿ ಫೌಂಡೇಷನ್ ಸಹಕಾರ ನೀಡಿರುವುದು ಮತ್ತಷ್ಟು ಬಲ ನೀಡಿದೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಸೇವೆಗಳು ದೊರೆಯಬೇಕೆಂಬ ನಿಟ್ಟಿನಲ್ಲಿ ಶ್ರೀಜಪಾನಂದಜಿ ಅವರ ಕೆಲಸ ಮಾಡುತ್ತಿದ್ದು, ಇವರ ಎಲ್ಲಾ ಕಾರ್ಯಗಳಲ್ಲಿ ಭಾರತ ಸರಕಾರ ಜೊತೆಗಿದೆ ಎಂದು ಸಚಿವ ಸೋಮಣ್ಣ ನುಡಿದರು.
ಜನರಿಗೆ ಶುದ್ದ ಕುಡಿಯುವ ನೀರು ನೀಡಬೇಕೆಂಬ ಉದ್ದೇಶದಿಂದಲೇ ಭಾರತ ಸರಕಾರ ಐದು ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡುತ್ತಿದೆ. ಅಂಗವಿಕಲತೆ ಶಾಪ ಎಂಬ ಕಾಲವೊಂದಿತ್ತು.ಆದರೆ ಜಪಾನಂದ ಜೀ ಅವರಂತಹ ಸ್ವಾಮೀಜಿಗಳು ಅದನ್ನು ಹೋಗಲಾಡಿಸಿ, ಕ್ಷಯ,ಕುಷ್ಠ ರೋಗಿಗಳು, ವಾಕ್ ಮತ್ತು ಶ್ರವಣದೋಷವುಳ್ಳ,ಹಾಗೂ ಕಣ್ಣಿನ ದೋಷವುಳ್ಳ ಮಕ್ಕಳಿಗೆ ಸಾವಿರಾರು ಶಸ್ತçಚಿಕಿತ್ಸೆ ನೀಡುವ ಮೂಲಕ ಅವರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.ಅವರ ಮತ್ತಷ್ಟು ಸೇವೆಗಳು ಮುಂದಿನ ದಿನಗಳಲ್ಲಿ ಅಗತ್ಯವಿರುವ ಜನರಿಗೆ ತಲುಪುವಂತಾಗಲಿ ಎಂದರು.

ಇದುವರೆಗೂ ಆಳಿದ ಸರಕಾರಗಳು ಕೇವಲ ಬಾಯಿಂದ ರೈಲು ಬಿಡುತ್ತಿದ್ದರೂ, ನಮ್ಮ ಸರಕಾರ ಹಳ್ಳಿಗಳ ಮೇಲೆ ರೈಲು ಬಿಡಲು ಪ್ರಾರಂಭಿಸಿದೆ. ಶೀಘ್ರದಲ್ಲಿಯೇ ಬೆಂಗಳೂರು ತುಮಕೂರು ನಗರ ನಾಲ್ಕು ಪಥದ ರೈಲ್ವೆ ಲೈನ್ ನಿರ್ಮಾಣ ಪ್ರಾರಂಭ ವಾಗಲಿದೆ.ಅಲ್ಲದೆ ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಲೈನ್ ಕಾರ್ಯ ಹಾಕಲಾಗುತ್ತದೆ. ಚನೈ,ಬಾಂಬೆ ಕಾರಿಡಾರ್ ಸೇರಿದಂತೆ ಹಲವು ಅಭಿವೃದ್ದಿ ಯೋಜನೆಗಳು ಆರಂಭವಾಗಲಿದ್ದು, ಮುಂದಿನ ೧೦ ವರ್ಷಗಳಲ್ಲಿ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದು ಸಚಿವ ವಿ.ಸೋಮಣ್ಣ ನುಡಿದರು.
ಇನ್ಪೋಸಿಸ್ ಫೌಂಡೇಷನ್‌ನ ಉಪಾಧ್ಯಕ್ಷೆ ಮನಿಷಾ ಸಾಬು ಮಾತನಾಡಿ,ಗ್ರಾಮೀಣ ಭಾಗದಲ್ಲಿ ಎಲ್ಲಾ ಅಡೆ ತಡೆಗಳನ್ನು ಮೀರಿ ಐವತ್ತು ಸಾವಿರ ಕಣ್ಣಿನ ಶಸ್ತçಚಿಕಿತ್ಸೆ ನಡೆಸಿರುವುದಕ್ಕೆ ಮೊದಲಿಗೆ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಹೃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷ ನಮ್ಮ ಫೌಂಡೇಷನ್‌ಗೆ ಧನ ಸಹಾಯ ಕೇಳಿ ಐದು ಸಾವಿರ ಅರ್ಜಿಗಳು ಬರುತ್ತೇವೆ. ಆದರೆ ನಮ್ಮ ಹಣ ಸದ್ವಿನಿಯೋಗವಾಗುತ್ತದೆ. ಅಗತ್ಯವಿರುವವರಿಗೆ ಮಾತ್ರ ತಲುಪುತ್ತದೆ ಎಂಬ ನಂಬಿಕೆ ಬಂದ ಪ್ರಾಜೆಕ್ಟ್ಗಳಿಗೆ ಮಾತ್ರ ಅನುಮೋಧನೆ ನೀಡಲಾಗುತ್ತಿದೆ.ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಎಲ್ಲಾ ಪ್ರಾಜೆಕ್ಟ್ಗಳಿಗೂ ನಮ್ಮ ಸಹಯೋಗವಿದೆ. ಅಷ್ಟು ನಂಬಿಕೆಯನ್ನು ಸ್ವಾಮೀಜಿಗಳು ಉಳಿಸಿಕೊಂಡಿದ್ದಾರೆ.ನಾನು ನೀಡಿದ ಅನುದಾನಕ್ಕೆ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನಮಗಿದೆ.ಹಾಗಾಗಿ ಶ್ರೀಜಪಾನಂದಜೀ ಅವರೊಂದಿಗೆ ಕೆಲಸ ಮಾಡುವುದು ಸಂತಸ ತಂದಿದೆ ಎಂದರು.
ಬೆAಗಳೂರು ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್ನ ಮುಖ್ಯಸ್ಥ ವಿ.ವಿ.ಕೃಷ್ಣಾ ರೆಡ್ಡಿ ಮಾತನಾಡಿ,ಮಾನವನಿಗೆ ಬರುವ ಬೇರೆ ರೋಗಗಳಿಗೆ ಹೊಲಿಕೆ ಮಾಡಿದರೆ ವಾಕ್ ಮತ್ತು ಶ್ರವಣ ದೋಷ ಅತ್ಯಂತ ನಿರ್ಲಕ್ಷಕ್ಕೆ ಒಳಗಾಗಿದೆ.ತೀರ ಅಗತ್ಯವಿಲ್ಲ, ಮುಂದೆ ನೋಡೋಣ ಎಂಬ ಮಾತುಗಳೇ ಹೆಚ್ಚು. ಹಾಗಾಗಿ ಲಯನ್ಸ್ ಸಂಸ್ಥೆಯ ಒಂದು ಭಾಗವಾಗಿರುವ ಬೆಂಗಳೂರು ಸ್ವೀಚ್ ಅಂಡ್ ಹಿಯರಿಂಗ್ ಟ್ರಸ್ಟ್ ಇದುವರೆಗೂ ಸುಮಾರು ೪೦ ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಿ,ಅವರಲ್ಲಿ ಅಗತ್ಯವಿರುವ ಒಂದು ಸಾವಿರ ಜನರಿಗೆ ಶ್ರವಣ ಉಪಕರಣಗಳನ್ನು ನೀಡಿದೆ.ಪ್ರತಿವರ್ಷ ವಿವಿಧ ದಾನಿಗಳ ಸಹಕಾರದೊಂದಿಗೆ ಒಂದು ಸಾವಿರ ಮಂದಿಗೆ ಶ್ರವಣ ಪರಿಕರಗಳನ್ನು ವಿತರಿಸಲಾಗುತ್ತಿದೆ.ಅಜೀಂ ಪ್ರೇಮಜೀ ಫೌಂಡೇಷನ್ ಸಹಯೋಗದಲ್ಲಿ ಮುಂದಿನ ಮೂರು ವರ್ಷಗಳ ಕಾಲ ತುಮಕೂರು ಜಿಲ್ಲೆ ಪಾವಗಡ ತಾಲೂಕು ಸುಮಾರು ೨೮೪ ಹಳ್ಳಿಗಳ ೦-೧೫ ವರ್ಷ ಒಳಗಿನ ಎಲ್ಲಾ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ, ಅವರಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳವರನ್ನು ಗುರುತಿಸಿ, ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಇವರ ಸಹಯೋಗದಲ್ಲಿ ಮಾಡಲಾಗುತ್ತಿದೆ.ಮೂರು ವರ್ಷಗಳ ಪ್ರಯೋಗಿಕ ಯೋಜನೆಯ ಸಾಧಕ, ಭಾಧಕಗಳನ್ನು ನೋಡಿಕೊಂಡು ಇಡೀ ರಾಜ್ಯಕ್ಕೆ ವಿಸ್ತುರಿಸುವ ಗುರಿ ಇದೆ.ಇದಕ್ಕಾಗಿ ಅರ್ಜಿಂ ಪ್ರೇಮಜಿ ಸಂಸ್ಥೆಗೆ ಸುಮಾರು ೨.೦೬ ಕೋಟಿ ರೂಗಳನ್ನು ನಮ್ಮ ಸಂಸ್ಥೆಗೆ ನೀಡಿದೆ ಎಂದರು.
ಶಾಸಕರಾದ ಜಿ.ಬಿ.ಜೋತಿಗಣೇಶ್ ಮಾತನಾಡಿ,ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಒಂದು ಪರ್ಯಾಯ ಸರಕಾರದಂತೆ ದಾನಿಗಳ ಸಹಾಯದಿಂದ ಅಗತ್ಯವಿರುವ ಜನರಿಗೆ ಸೇವೆಗಳನ್ನು ಒದಗಿಸುತ್ತಾ ಬಂದಿದೆ, ಸಧೃಡ ಭಾರತ ನಿರ್ಮಾಣಕ್ಕೆ ಶ್ರೀಜಪಾನಂದಜೀ ಅವರು ಕೈಜೋಡಿಸಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಜೀ ಮಾತನಾಡಿ,ದಾನಿಗಳು, ಶ್ರೀಸಿದ್ದಾರ್ಥ, ಸಿದ್ದಗಂಗಾ, ಶ್ರೀದೇವಿ ಮಡಿಕಲ್ ಕಾಲೇಜುಗಳು,ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶ್ರೀಶಾರದದೇವಿ ಕಣ್ಣಿನ ಆಸ್ಪತ್ರೆಯ ಮೂಲಕ ಐವತ್ತು ಸಾವಿರ ಕಣ್ಣಿನ ಶಸ್ತçಚಿಕಿತ್ಸೆ ನಡೆಸಿರುವುದು ಗ್ರಾಮೀಣ ಭಾಗದಲ್ಲಿ ಒಂದು ಮೈಲಿಗಲ್ಲು, ಅಲ್ಲದೆ ಪಾವಗಡ ಮತ್ತು ಸುತ್ತಮುತ್ತಲಿನ ಮಧುಗಿರಿ, ಕೊರಟಗೆರೆ, ಗುಬ್ಬಿ ತಾಲೂಕುಗಳಲ್ಲಿ ಕಿವಿ.ಮೂಗು ಮತ್ತು ಗಂಟಲಿಗೆ ಸಂಬAಧಿಸಿದAತೆ ತಪಾಸಣೆ ಮತ್ತು ಚಿಕಿತ್ಸೆ ಸಹ ನಡೆಯುತ್ತಿದೆ.ಇಂತಹದ್ದೇ ಮತ್ತೊಂದು ಯೋಜನೆಯನ್ನು ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ಇನ್ಸಿಟ್ಯೂಟ್ ಅಫ್ ಸ್ವೀಚ್ ಅಂಡ್ ಹಿಯರಿಂಗ್ ಅವರು ಅಜಿಂ ಪ್ರೇಮಜಿ ಫೌಂಡೇಷನ್ ಸಹಯೋಗದಲ್ಲಿ ಪಾವಗಡ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿರುವ ೦-೧೫ ವರ್ಷದ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ, ಅವರಲ್ಲಿ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೆ ಚಿಕಿತ್ಸೆ ನೀಡುವ ಪ್ರಾಯೋಗಿಕ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ.ನಿಜವಾದ ಭಾರತ ಕಂಡು ಬರುವುದು ದೊಡ್ಡ ನಗರಗಳಲ್ಲಿ ಅಲ್ಲ. ವಾಸ್ತವ ಭಾರತ ಬೇಕೆಂದರೆ ಹಳ್ಳಿಗಳಿಗೆ ಬರಬೇಕು.ಅಲ್ಲಿನ ವಾಸ್ತವವನ್ನು ಕಣ್ಣಾರೆ ಕಂಡಾಗ ಮಾತ್ರ ಭಾರತ ವಿಶ್ವಗುರು ಆಗಿದೆಯೇ,ನಂಬರ್ ಓನ್ ಆಗಿದೆಯೇ ಎಂಬ ಸತ್ಯ ಅರಿವಾಗುತ್ತದೆ.ಇಂದಿಗೂ ಹಳ್ಳಿಗಾಡಿನ ಜನರು ದಯನೀಯ ಸ್ಥಿತಿಯಲ್ಲಿದ್ದಾರೆ.ಹಾಗಾಗಿ ಈ ಯೋಜನೆಯನ್ನು ಅತ್ಯಂತಹ ಯಶಸ್ವಿಯಾಗಿಸಲು ಟೊಂಕಕಟ್ಟಿ ದುಡಿಯುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು,ಪತ್ರಕರ್ತ ಎಸ್.ನಾಗಣ್ಣ, ಡಾ.ಎಸ್.ಆರ್.ಚಂದ್ರಶೇಖರ್ ಇನ್ಸಿಟ್ಯೂಟ್ ಅಫ್ ಸ್ವೀಚ್ ಅಂಡ್ ಹಿಯರಿಂಗ್‌ನ ಕಾರ್ಯದರ್ಶಿ ಸುರೇಶಬಾಬು,ಖಜಾಂಚಿ ವಿ.ಎಸ್.ಶಾಂತಸದನ,ಸಿದ್ದಾರ್ಥ್ ಮೆಡಿಕಲ್ ಕಾಲೇಜಿನ ಡಾ.ಜಿ.ಎನ್.ಪ್ರಭಾಕರ್,ಇಎನ್‌ಟಿ ತಜ್ಞ ಡಾ.ಎಂ.ದೃವಕುಮಾರ್,ಇನ್ಪೋಸಿಸ್‌ನ ವಿದ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು