ದರ್ಶನ್ ಫ್ಯಾನ್ಸ್ & ರಮ್ಯಾ ವಿವಾದಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷರ ರಿಯಾಕ್ಷನ್.. ಮಿಸ್ ಮಾಡದೇ ನೋಡಿ..! | Kfc President Narasimhulu Talk On Darshan Fans And Ramya Social Medaia War

ದರ್ಶನ್ ಫ್ಯಾನ್ಸ್ & ರಮ್ಯಾ ವಿವಾದಕ್ಕೆ ಫಿಲ್ಮ್ ಚೇಂಬರ್ ಅಧ್ಯಕ್ಷರ ರಿಯಾಕ್ಷನ್.. ಮಿಸ್ ಮಾಡದೇ ನೋಡಿ..! | Kfc President Narasimhulu Talk On Darshan Fans And Ramya Social Medaia War



ಅಭಿಮಾನಿಗಳು ಇವತ್ತಿಂದಲ್ಲ.. ಅಣ್ಣಾವ್ರ ಕಾಲದಿಂದಲೂ ಇದ್ದಾರೆ.. ಅಭಿಮಾನಿಗಳು ಇಲ್ಲದೇ ನಟರು ಇಲ್ಲ.. ಫ್ಯಾನ್‌ಗಳು ರಮ್ಯಾ ವಿರುದ್ಧ ಕಾಮೆಂಟ್ ಮಾಡಿದ್ದಾರೆ ಅನ್ನೋದಕ್ಕೆ ಪ್ರೂಫ್ ಇಲ್ಲ.. ಅವ್ರು ಯಾರೋ ಕಿಡಿಗೇಡಿಗಳು ಇರಬಹುದು..

ದರ್ಶನ್ ಫ್ಯಾನ್ಸ್ (Darshan Thoogudeepa) ಹಾಗೂ ನಟಿ ರಮ್ಯಾ (Ramya) ನಡುವಿನ ಸೋಷಿಯಲ್ ಮೀಡಿಯಾ ವಾರ್ ತಾರಕಕ್ಕೇರಿದ್ದು ಗೊತ್ತೇ ಇದೆ. ದರ್ಶನ್ ಕೇಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಈ ಸಮಯದಲ್ಲಿ ಸೋಷಿಯಲ್ ಮೀಡಿಯಾಲ್ಲಿ ನಟಿ ರಮ್ಯಾಗೆ ಮಾಡಿರೋ ಪೋಸ್ಟ್ ಡಿ ಬಾಸ್ ಫ್ಯಾನ್ಸ್ ಕೆರಳಿಸಿದೆ. ಇದರಿಂದ ರೊಚ್ಚಿಗೆದ್ದಿರುವ ನಟ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ಕೆಟ್ಟ ಪದಪ್ರಯೋಗಗಳ ಮೂಲಕ ಕಾಮೆಂಟ್ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ನಟಿ ರಮ್ಯಾ ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ನಟಿ ರಮ್ಯಾ ವಿರುದ್ಧ ವಿಜಯಲಕ್ಷ್ಮೀ ಅವರು ಕೂಡ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಇದೀಗ ಈ ವಿಷಯದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭ, ಕರ್ನಾಟಕ ಫಿಲಂ ಚೇಂಬರ್ ಎಂಟ್ರ ಕೊಟ್ಟಿದೆ. ಅಂದರೆ, ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಈ ವಿಷಯಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ. ‘ಇಂಡಸ್ಟ್ರಿ ಮುಳುಗಿ ಹೋಗುತ್ತೆ ಅನ್ನೋ ಭಯ ಇತ್ತು..ಇವಾಗ ಎಕ್ಕ, ಜೂನಿಯರ್, ಸು ಪ್ರಮ್ ಸೋ ಸಿನಿಮಾಗಳು ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ.. ಇದು ಖುಷಿ ವಿಚಾರ.. ಪ್ಯಾನ್ ಇಂಡಿಯಾ ಸಿನಿಮಾಗಿಂತ ದೊಡ್ಡ ಯಶಸ್ಸು ಸಿಕ್ಕಿದೆ. ಈ ಮಧ್ಯೆ ದರ್ಶನ್ ಫ್ಯಾನ್ಸ್ – ರಮ್ಯಾ ಗಲಾಟೆ ಸುದ್ದಿ ಹರಿದಾಡ್ತಿದೆ..

ಅಭಿಮಾನಿಗಳು ಇವತ್ತಿಂದಲ್ಲ.. ಅಣ್ಣಾವ್ರ ಕಾಲದಿಂದಲೂ ಇದ್ದಾರೆ.. ಅಭಿಮಾನಿಗಳು ಇಲ್ಲದೇ ನಟರು ಇಲ್ಲ.. ಫ್ಯಾನ್‌ಗಳು ರಮ್ಯಾ ವಿರುದ್ಧ ಕಾಮೆಂಟ್ ಮಾಡಿದ್ದಾರೆ ಅನ್ನೋದಕ್ಕೆ ಪ್ರೂಫ್ ಇಲ್ಲ.. ಅವ್ರು ಯಾರೋ ಕಿಡಿಗೇಡಿಗಳು ಇರಬಹುದು.. ಒಳ್ಳೆಯ ಫ್ಯಾನ್ಸ್ ಯಾರೂ ಈ ರೀತಿಯ ಕೆಲಸ ಮಾಡಲ್ಲ.. ಫ್ಯಾನ್ಸ್‌ಗಳು ಅಂತ ಹೇಳಿಕೊಳ್ಳೋ ಕೆಲವು ಜನ ಇಂಥವ್ರು ಇರ್ತಾರೆ‌… ಅವ್ರ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ.. ದರ್ಶನ್ ಕೇಸ್ ಸುಪ್ರಿಂಕೋರ್ಟ್‌ನಲ್ಲಿದೆ. ಆ ಬಗ್ಗೆ ಈಗ ಏನೂ ಮಾತಾಡೋದು ಬೇಡ..’ ಎಂದಿದ್ದಾರೆ.

ರಮ್ಯಾ ಮಾತ್ರವಲ್ಲ, ನಟ ಪ್ರಥಮ್ ಕೂಡ ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿದ್ದು, ಈ ಸಂಬಂಧ

ನಟಿ ರಮ್ಯಾ ಪರವಾಗಿ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ದರ್ಶನ್ ಪತ್ನಿ ವಿಜಯಲಕ್ಮೀ (Vijayalakshmi) ಅವರು ‘ಪ್ರಕರಣ ನ್ಯಾಯಾಲದಲ್ಲಿರುವಾಗ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದು ಸರಿಯಲ್ಲ. ಕೇಸ್ ಕಾನೂನು ರೀತಿಯಲ್ಲಿ ಬೆಳವಣಿಗೆ ಆಗುತ್ತಿರುವಾಗ ರಮ್ಯಾ ಏಕಪಕ್ಷೀಯ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡುವುದು ಸರಿಯಲ್ಲ. ಆ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಅಗತ್ಯವಾದರೂ ಏನಿತ್ತು?

ಕಾನೂನಿಗೆ ಸಂಬಂಧಪಟ್ಟ ವಿಷಯದಲ್ಲಿ, ರಮ್ಯಾ ಹಾಕಿರುವ ಪೋಸ್ಟ್ ಹೈಕೋರ್ಟ್ ನಿರ್ಧಾರವನ್ನು ಟೀಕಿಸಿದಂತೆ ಆಗುವುದಿಲ್ಲವೇ? ನಟಿ ರಮ್ಯಾ ಪೋಸ್ಟ್ ಮಾಡುವ ಅಗತ್ಯವೇ ಇರಲಿಲ್ಲ. ಹೀಗಾಗಿ ವಿಜಯಲಕ್ಷ್ಮೀ ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟಿ ರಮ್ಯಾ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ವಿಜಯಲಕ್ಷ್ಮೀ ಮುಂದಾಗಿದ್ದಾರೆ’ ಎನ್ನಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ನಟಿ ರಮ್ಯಾ ಪೋಸ್ಟ್ ಮಾಡಿದ್ದೇ ತಪ್ಪು. ಆ ತಪ್ಪಿಗೆ ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದು ಮತ್ತೊಂದು ತಪ್ಪು. ಇದೀಗ ತಪ್ಪಿಗೆ ತಪ್ಪು ಸೇರಿ ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ಮಧ್ಯೆ ಪೋಸ್ಟ್ ವಾರ್ ಶುರುವಾಗಿದೆ.

ಇದೀಗ, ಅಚ್ಚರಿ ಬೆಳವಣಿಗೆ ನಡೆದಿದ್ದು, ನಟ ದರ್ಶನ್ ಫ್ಯಾನ್ಸ್ ಪೇಜ್‌ನಲ್ಲಿ ‘ಯಾವುದೇ ವಿವಾದಕ್ಕೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಸ್ವತಃ ದರ್ಶನ್ ಅಭಿಮಾನಿಗಳೇ ಮನವಿ ಮಾಡಿದ್ದಾರೆ. ‘ಡಿ ಫ್ಯಾನ್ಸ್’ ಆಫೀಶಿಯಲ್ ಪೇಜ್‌ನಲ್ಲಿ ಮನವಿ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ‘ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ತೊಂದರೆ ಮಾಡ್ಬೇಡಿ.. ಯಾವುದಕ್ಕೂ ತಲೆ ಕೆಡಿಸ್ಕೊಳ್ಳಬೇಡಿ’ ಅಂತ ಪೋಸ್ಟ್ ಮಾಡಲಾಗಿದೆ. ಅಭಿಮಾನಿಗಳ ಆಕ್ರೋಶದಿಂದ ದರ್ಶನ್ ಬೇಲ್‌ ಪಡೆಯಲು ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಈ ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ, ಅತ್ತ ನಟ ದರ್ಶನ್ ಕೇಸ್ ನ್ಯಾಯಾಲಯದಲ್ಲಿ ಅದೂ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದರೆ, ಇತ್ತ ನಟಿ ರಮ್ಯಾ ಮಾಡಿರೋ ಪೋಸ್ಟ್ ನಟ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಅದಕ್ಕೆ ರಿಯಾಕ್ಟ್ ಮಾಡುವ ಭರದಲ್ಲಿ ದರ್ಶನ್ ಫ್ಯಾನ್ಸ್ ನಟಿ ರಮ್ಯಾ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿ ಈಗ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತಿದೆ. ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಎಂಟ್ರಿ ಕೊಟ್ಟಿದ್ದು ಇದೀಗ ಈ ಸಮಸ್ಯೆ ಎಲ್ಲಿಗೆ ತಲುಪಬಹುದು ಎಂಬ ತೀವ್ರ ಕುತೂಹಲಕ್ಕೆ ಮನೆಮಾಡಿದೆ. ಈ ಸೋಷಿಯಲ್ ಮೀಡಿಯಾ ವಾರ್ ಮುಂದೆ ಕಾನೂನು ಸಮರಕ್ಕೆ ದಾರಿ ಮಾಡಿಕೊಡಲಿರುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.



Source link

Leave a Reply

Your email address will not be published. Required fields are marked *