
ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ಜಪಾನ್ ಮತ್ತು ರಷ್ಯಾ ಕರಾವಳಿಗೆ ಸುನಾಮಿ ಅಪ್ಪಳಿಸಿ, ಭಾರಿ ಹಾನಿ ಉಂಟುಮಾಡಿದೆ.
ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ ನಂತರ ಜಪಾನ್ ಹಾಗೂ ರಷ್ಯಾ ಕರಾವಳಿಗೆ ಅಪ್ಪಳಿಸಿದ ಸುನಾಮಿ
ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ರಷ್ಯಾ ಹಾಗೂ ಜಪಾನ್ ಕರಾವಳಿಗೆ ಸುನಾಮಿ ಅಪ್ಪಳಿಸಿದ್ದು, ಭಾರಿ ಹಾನಿ ಸಂಭವಿಸಿದೆ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಇಂದು ಮುಂಜಾನೆ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಇದಾದ ನಂತರ ಜಪಾನ್ ಮತ್ತು ರಷ್ಯಾದ ಕರಾವಳಿಯಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿವೆ.
ಈ ಭೂಕಂಪನ ಕೇಂದ್ರಬಿಂದು ಹೊಕ್ಕೈಡೊದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿತ್ತು. ಇದರ ಜೊತೆಗ ಅಪ್ಪಳಿಸಿದ ಸುನಾಮಿಯಿಂದ ಬಂದರುಗಳ ರಚನೆಗೆ ಹಾನಿಯಾಗಿದೆ. ಜೊತೆಗೆ ತೀವ್ರವಾದ ಅಲೆಗಳ ಪರಿಣಾಮವಾಗಿ ನಾಲ್ಕು ತಿಮಿಂಗಿಲಗಳು ಜಪಾನಿನ ಕರಾವಳಿಯಲ್ಲಿ ತೀರಕ್ಕೆ ಬದು ಬಿದ್ದಿವೆ ಎಂದು ಅಲ್ಲಿನ ಬಿಎನ್‌ಒ ನ್ಯೂಸ್ ವರದಿ ಮಾಡಿದೆ.