Headlines

ಸಿಂದೂರವನ್ನು ಅರ್ಧದಲ್ಲೇ ನಿಲ್ಲಿಸಿದ್ದು ಏಕೆ? ಯಾರೂ ಏಕೆ ರಾಜೀನಾಮೆ ನೀಡಿಲ್ಲ? ಪ್ರಿಯಾಂಕಾ ಗಾಂಧಿ

ಸಿಂದೂರವನ್ನು ಅರ್ಧದಲ್ಲೇ ನಿಲ್ಲಿಸಿದ್ದು ಏಕೆ? ಯಾರೂ ಏಕೆ ರಾಜೀನಾಮೆ ನೀಡಿಲ್ಲ? ಪ್ರಿಯಾಂಕಾ ಗಾಂಧಿ



ಸಿಂದೂರವನ್ನು ಅರ್ಧದಲ್ಲೇ ನಿಲ್ಲಿಸಿದ್ದು ಏಕೆ? ಯಾರೂ ಏಕೆ ರಾಜೀನಾಮೆ ನೀಡಿಲ್ಲ? ಪ್ರಿಯಾಂಕಾ ಗಾಂಧಿ
<p>ನವದೆಹಲಿ: ‘ನಾಯಕನಾದವನು ಕೇವಲ ಪ್ರಶಂಸೆ ಪಡೆಯಲಷ್ಟೇ ಸೀಮಿತವಾಗಬಾರದು, ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ಭಾರತ-ಪಾಕ್‌ಸಮರ ನಿಲ್ಲಿಸಿದ್ದು ತಾನು ಎಂದು ಟ್ರಂಪ್ ಪದೇ ಪದೇ ನೀಡುತ್ತಿರುವ ಹೇಳಿಕೆಯು ಪ್ರಧಾನಿ ಮೋದಿ ಅವರ ಬೇಜವಾಬ್ದಾರಿಗೆ ಸಾಕ್ಷಿ’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಕಿಡಿಕಾರಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಶತ್ರುವು ಸೋಲುವ ಸ್ಥಿತಿಯಲ್ಲಿದ್ದಾಗ ಏಕೆ ಆಪರೇಷನ್ ಸಿಂದೂರ ಅರ್ಧಕ್ಕೇ ನಿಲ್ಲಿಸಲಾಯಿತು? ಈ ರೀತಿ ಗೆಲ್ಲುವ ಯುದ್ಧವನ್ನು ಅರ್ಧಕ್ಕೇ ನಿಲ್ಲಿಸಿದ್ದು ಇದೇ ಮೊದಲು ಅಲ್ಲವೆ’ ಎಂದು ಖಾರವಾಗಿ ಪ್ರಶ್ನಿಸಿದರು.</p><p>ಅಮಿತ್ ಶಾಗೆ ತರಾಟೆ: ‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 2008 ರ ದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಿಗಾಗಿ ಕಣ್ಣೀರಿಟ್ಟಿದ್ದರು’ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಿಯಾಂಕಾ ತಿರುಗೇಟು ನೀಡಿದ್ದು, ‘ಅಮಿತ್ ಶಾ ನನ್ನ ತಾಯಿಯ ಕಣ್ಣೀರನ್ನು ಅಣಕಿಸಿದರು, ನನ್ನ ತಾಯಿಯ ಕಣ್ಣೀರು ಬಂದಿದ್ದು ಅವರ ಪತಿ ಕೇವಲ 44 ವರ್ಷದವರಿದ್ದಾಗ ಭಯೋತ್ಪಾದಕರಿಂದ ಹುತಾತ್ಮರಾಗಿದ್ದಕ್ಕೆ, ಅದಕ್ಕಾಗಿಯೇ ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ 26 ಜನರ ನೋವು ನನಗೆ ಅರ್ಥವಾಗುತ್ತದೆ ಎಂದು ಪ್ರಿಯಾಂಕಾ ಹೇಳಿದರು.</p>



Source link

Leave a Reply

Your email address will not be published. Required fields are marked *