ಈ ಚಿಹ್ನೆಗಳು ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನ ಸಮಸ್ಯೆಗಳ ಸಂಕೇತಗಳಾಗಿರಬಹುದು. ಇವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ಅಪಾಯ ತಪ್ಪಿಸಬಹುದು.

ರಾತ್ರಿ ವೇಳೆ ಮೂತ್ರ ವಿಸರ್ಜಿಸಲೆಂದು ಪದೇ ಪದೇ ಎದ್ದೇಳುತ್ತಿದ್ದೀರಾ?, ಹಾಸಿಗೆಯಲ್ಲಿ ಮಲಗಿರುವಾಗ ನಿಮಗೆ ಉಸಿರಾಟದ ತೊಂದರೆಯಾಗುತ್ತಿದೆಯೇ?, ಎದ್ದ ತಕ್ಷಣ ಬಹಳಷ್ಟು ಬೆವರು ಬರುತ್ತಿದೆಯೇ?, ಸರಿಯಾಗಿ ನಿದ್ರೆಯಾಗದ ಕಾರಣ ಹೀಗಾಗುತ್ತಿರಬಹುದು ಎಂದು ನೀವಂದುಕೊಂಡರೆ ಅದು ತಪ್ಪು. ಏಕೆಂದರೆ ಇದು ನಿಮ್ಮ ಹೃದಯ, ಯಕೃತ್ತು ಮತ್ತು ಮೂತ್ರಪಿಂಡದಲ್ಲಿನ ಸಮಸ್ಯೆಯ ಸಂಕೇತವೂ ಆಗಿರಬಹುದು.

ರಾತ್ರಿ ಮಾತ್ರ ಕಂಡುಬರುವ ಈ ಸಂಕೇತಗಳನ್ನು ಜನರು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಇವು ಹೃದಯ ವೈಫಲ್ಯದ ಆರಂಭಿಕ ಸೂಚನೆಗಳಾಗಿರಬಹುದು. ವಾಸ್ತವವಾಗಿ, ಈ ಸಮಸ್ಯೆಗಳು ರಕ್ತ ಅಪಧಮನಿಗಳ ಅಡಚಣೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಮತ್ತು ಯಕೃತ್ತಿನ ಹಾನಿಯಿಂದಲೂ ಉಂಟಾಗಬಹುದು.

ಅಷ್ಟೇ ಅಲ್ಲ, ರಾತ್ರಿ ವೇಳೆ ಮೂತ್ರ ವಿಸರ್ಜಿಸಲೆಂದು ಪದೇ ಪದೇ ಎದ್ದೇಳುತ್ತಿದ್ದರೆ ಅದನ್ನು ನೋಕ್ಟುರಿಯಾ (Nocturia) ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಸಮಸ್ಯೆಯಲ್ಲ, ಆದರೆ ಹೃದಯ ವೈಫಲ್ಯ ಅಥವಾ ಮೂತ್ರಪಿಂಡದ ಕಾಯಿಲೆಯ ಆರಂಭಿಕ ಸಂಕೇತವಾಗಿರಬಹುದು.

ಅಪೋಲೋ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ವಿಕ್ರಮ್ ಬಿ. ಕೊಲ್ಹಾರಿ ಹೇಳುವಂತೆ, ರಾತ್ರಿ ಹಾಸಿಗೆಯ ಮೇಲೆ ಮಲಗಿದಾಗ ದ್ರವವು ರಕ್ತದಲ್ಲಿ ಬೆರೆತು ಮೂತ್ರಪಿಂಡಗಳಿಂದ ಶೋಧಿಸಲ್ಪಡುತ್ತದೆ. ಆಗಾಗ್ಗೆ ಮೂತ್ರ ವಿಸರ್ಜಿಸಬೇಕಾಗುತ್ತದೆ. ಒಂದು ವೇಳೆ ರೋಗಿಗೆ ಮೂತ್ರಪಿಂಡದ ಸಂಬಂಧಿತ ಸಮಸ್ಯೆಗಳಿದ್ದರೆ ಮೂತ್ರಪಿಂಡವು ತನ್ನ ಶೋಧನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ, ಇದರಿಂದಾಗಿ ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿ ಹೆಚ್ಚು ಮೂತ್ರ ವಿಸರ್ಜನೆಯಾಗುತ್ತದೆ. ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ.

ರಾತ್ರಿ ಹೆಚ್ಚು ಮೂತ್ರ ವಿಸರ್ಜಿಸುತ್ತಿದ್ದರೆ ಮತ್ತು ನಿಮ್ಮ ಕಾಲುಗಳಲ್ಲಿ ಊತವಿದ್ದರೆ, ದಣಿವು ಮತ್ತು ಉಸಿರಾಟದ ತೊಂದರೆ ಇದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ರಾತ್ರಿ ಉಸಿರಾಟದ ತೊಂದರೆ ಎಂದರೆ ಶ್ವಾಸಕೋಶದಲ್ಲಿ ದ್ರವದ ಶೇಖರಣೆಯಿಂದಾಗಿ ನಿಮ್ಮ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.

ರಾತ್ರಿ ವೇಳೆ ನೀವು ಹೆಚ್ಚು ಬೆವರುತ್ತಿದ್ದರೆ, ನಿಮ್ಮ ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದರ್ಥ. ಇದು ರಕ್ತನಾಳಗಳಲ್ಲಿ ಅಡಚಣೆಯ ಲಕ್ಷಣವಾಗಿದೆ. ಈ ಸಮಯದಲ್ಲಿ ನಿಮಗೆ ಎದೆ ನೋವು, ಅತಿಯಾದ ಒತ್ತಡ ಮತ್ತು ಬಿಗಿತ ಅನಿಸಿದರೆ, ನಿಮಗೆ ಹೃದಯ ಸಮಸ್ಯೆ ಅಥವಾ ಅಧಿಕ ರಕ್ತದೊತ್ತಡ ಇರಬಹುದು.

Source link
ಮಲಗುವಾಗ ಈ ಲಕ್ಷಣಗಳು ಕಂಡುಬಂದರೆ ಹೃದಯ, ಲಿವರ್, ಕಿಡ್ನಿ ಅಪಾಯದಲ್ಲಿವೆ ಎಂದರ್ಥ!