
ಆದರೆ ಅದೇ ಇನ್ನೊಂದೆಡೆ ಮಲ್ಲಿಯ ಸ್ಟೋರಿ ಸಕತ್ ಇಂಟರೆಸ್ಟಿಂಗ್ ಆಗಿದೆ. ಭೂಮಿಕಾ ಮಗುವಿನ ನಾಮಕರಣದ ದಿನ ಮನೆಗೆ ಬಂದ ಮಹಿಳೆಯರು, ಮಲ್ಲಿಯ ಬಗ್ಗೆ ಚುಚ್ಚು ಮಾತುಗಳನ್ನಾಡಿದ್ದಾರೆ. ಅಸಲಿಗೆ ಇದು ಶಕುಂತಲಾ ಪ್ಲ್ಯಾನೇ ಆಗಿತ್ತು. ಮಲ್ಲಿಗೆ ನೋವಾದರೆ, ಭೂಮಿಕಾ ಮತ್ತು ಗೌತಮ್ಗೂ ನೋವಾಗುತ್ತದೆ ಎನ್ನುವುದು ಒಂದಾದರೆ, ಮಲ್ಲಿ ಈಗ ಕೋಟ್ಯಧೀಶ್ವರೆ ಆಗಿರುವ ಕಾರಣ, ಆಕೆಯ ಆಸ್ತಿಯನ್ನೂ ಕಬಳಿಸಲು ಜೈದೇವನನ್ನು ಮತ್ತೆ ಮಲ್ಲಿಯ ಜೊತೆ ಸೇರಿಸುವ ಹುನ್ನಾರ ಅವಳದ್ದು.