Headlines

ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳಿಸೋರಿಗೆ ಚಪ್ಪಲೀಲಿ ಹೊಡಿಬೇಕು..: ನಟ ಲೂಸ್ ಮಾದ ಯೋಗೇಶ್! | Actor Loose Mada Yogesh Talks On Ramya And Darshan Fans Social Media War

ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳಿಸೋರಿಗೆ ಚಪ್ಪಲೀಲಿ ಹೊಡಿಬೇಕು..: ನಟ ಲೂಸ್ ಮಾದ ಯೋಗೇಶ್! | Actor Loose Mada Yogesh Talks On Ramya And Darshan Fans Social Media War



ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳಿಸೋರಿಗೆ ಚಪ್ಪಲೀಲಿ ಹೊಡಿಬೇಕು..: ನಟ ಲೂಸ್ ಮಾದ ಯೋಗೇಶ್! | Actor Loose Mada Yogesh Talks On Ramya And Darshan Fans Social Media War

‘ಅವರಿಗೆ ಜ್ಞಾನನೇ ಇಲ್ಲ..ಸ್ಟಾರ್ ವಾರ್ ಎಲ್ಲಾ ಕಡೆ ಕಾಮನ್.. ಆದರೆ ಪರ್ಸನಲ್ ಆಗಿ ಟಾರ್ಗೆಟ್ ಮಾಡಲಾಗ್ತಿದೆ. ರಮ್ಯಾ ಅವರು ಕಂಪ್ಲೀಟ್ ಕೊಟ್ಟಿದ್ದು ಒಳ್ಳೆಯದು. ದರ್ಶನ್ ಅವರು ಮುಂದೆ ಬಂದು ಫ್ಯಾನ್ಸ್ ಗೆ ಹೀಗೆ ಮಾಡ್ಬೇಡಿ ಅಂದ್ರೆ ಒಳ್ಳೆಯದು…

ಸದ್ಯ ನಟಿ ರಮ್ಯಾ (Ramya) ಹಾಗೂ ದರ್ಶನ್ ಫ್ಯಾನ್ಸ್ (Darshan Fans) ಸೋಷಿಯಲ್ ಮೀಡಿಯಾ ವಾರ್‌ಗೆ ಇದೀಗ ನಟ ಲೂಸ್‌ ಮಾದ ಯೋಗೇಶ್ (Actor Loose Mada Yogesh ) ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಮಾತನ್ನಾಡಿರುವ ನಟ ಯೋಗಿ ‘ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸೋರನ್ನು ಕರೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡಿಬೇಕು’ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಕೆಟ್ಟ ಸಂದೇಶ ಕಳಿಸೋರ ಬಗ್ಗೆ ನಟ ಯೋಗಿ ಕೋಪಗೊಂಡಿದ್ದಾರೆ.

ಈ ಬಗ್ಗೆ ಹೇಳಿರುವ ನಟ ಯೋಗಿ ‘ಅವರಿಗೆ ಜ್ಞಾನನೇ ಇಲ್ಲ..ಸ್ಟಾರ್ ವಾರ್ ಎಲ್ಲಾ ಕಡೆ ಕಾಮನ್.. ಆದರೆ ಪರ್ಸನಲ್ ಆಗಿ ಟಾರ್ಗೆಟ್ ಮಾಡಲಾಗ್ತಿದೆ. ರಮ್ಯಾ ಅವರು ಕಂಪ್ಲೀಟ್ ಕೊಟ್ಟಿದ್ದು ಒಳ್ಳೆಯದು. ದರ್ಶನ್ ಅವರು ಮುಂದೆ ಬಂದು ಫ್ಯಾನ್ಸ್ ಗೆ ಹೀಗೆ ಮಾಡ್ಬೇಡಿ ಅಂದ್ರೆ ಒಳ್ಳೆಯದು. ಇಂಥದ್ದನೆಲ್ಲಾ ನಟ ದರ್ಶನ್ ಅವರು ಹೇಳಿ ಮಾಡಿಸೋ ವ್ಯಕ್ತಿ ಅಲ್ಲ… ಮುಖ ಕಾಣ್ದಿರೋ ಅಕೌಂಟ್ ನಲ್ಲಿ ಈ ಥರ ಬೇವರ್ಸಿ ಕೆಲಸ ಮಾಡೋವರಿಗೆ ಏನ್ ಹೇಳೋದು? ನನಗೂ ಹೀಗೆ ಆಗಿತ್ತು , ಇಂಡಸ್ಟ್ರಿಗೆ ಕಾಲಿಟ್ಟ ಹೊಸದರಲ್ಲಿ. ಯಾರೋ ಒಬ್ರು ನನಗೆ ಬ್ಲೇಡ್ ಹಾಕ್ಬಿಟ್ಟಿದ್ರು..’ ಎಂದು ನಟ ಯೋಗೇಶ್ ಹೇಳಿದ್ದಾರೆ.

ಸದ್ಯ ಟ್ರೆಂಡಿಂಗ್‌ನಲ್ಲಿರೋ ಸುದ್ದಿ ಅಂದ್ರೆ ಅದು ನಟಿ ರಮ್ಯಾ (Ramya) ಹಾಗೂ ನಟ ದರ್ಶನ್ (Darshan Thoogudeepa) ಫ್ಯಾನ್ಸ್ ಗಲಾಟೆ. ನಟಿ ರಮ್ಯಾ ಅವರು ‘ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ‘ಭಾರತದ ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಆಶಾಕಿರಣ ಮೂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ’ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು. ಅದರಿಂದ ರೊಚ್ಚಿಗೆದ್ದ ನಟ ದರ್ಶನ್ ಫ್ಯಾನ್ಸ್, ‘ಡಿ ಬಾಸ್ ಫ್ಯಾನ್ಸ್‌’ ಹೆಸರಿನ ಕೆಲವು ಫೇಕ್ ಅಕೌಂಟ್‌ಗಳಿಂದ ನಟಿ ರಮ್ಯಾಗೆ ಬೈದು ಕೆಟ್ಟ ಅಂದರೆ ಅಶ್ಲೀಲ ಮೆಸೇಜ್ ಮಾಡಿದ್ದರು.

ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಅವರು ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್‌ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ದರ್ಶನ್ ಪತ್ನಿ ವಿಯಲಕ್ಷ್ಮೀ ಅವರು ನಟಿ ರಮ್ಯಾ ವಿರುದ್ಧ ಸಿಟ್ಟೊಗೆದ್ದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಕನ್ನಡದ ಖ್ಯಾತ ನಿರ್ಮಾಪಕರಾದ ಕೆ ಮಂಜು (K Manju) ಅವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ.. ಹೌದು, ಕೆ ಮಂಜು ಅವರು ದರ್ಶನ್ ಫ್ಯಾನ್ಸ್ ಪರ ಮಾತನಾಡಿಲ್ಲ. ಆದರೆ, ನಟಿ ರಮ್ಯಾ ಮೇಲೆ ಸಣ್ಣ ಆರೋಪ ಮಾಡಿದ್ದಾರೆ. ರಮ್ಯಾ ದರ್ಶನ್ ಫ್ಯಾನ್ಸ್ ಗಲಾಟೆ ಬಗ್ಗೆ ನಿರ್ಮಾಪಕ ಕೆ ಮಂಜು ಹೇಳಿಕೆ ಹೀಗಿದೆ.. ‘ರಮ್ಯಾ ಅವ್ರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಎಲ್ಲದಕ್ಕೂ ಮೊದಲು, ನಟ ದರ್ಶನ್ ಬಗ್ಗೆ ಅವ್ರು ಪೋಸ್ಟ್ ಮಾಡಿದು ತಪ್ಪು.. ರೇಣುಕಾಸ್ವಾಮಿ ಕೇಸ್ ಆದಾಗ ಎಲ್ಲರೂ ಮಾತಾಡಿದ್ದು ಆಗಿದೆ. ಈಗ ಈ ಕೇಸ್ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸದ್ಯ ನ್ಯಾಯಾಲಯದಲ್ಲಿ ಇರುವ ಕೇಸ್ ಬಗ್ಗೆ ಈಗ ಮತ್ತೆ ಮಾತಾಡಬಾರದಿತ್ತು.

ರಮ್ಯಾ ಅವರು ಈಗ ಮೆಸೇಜ್ ಮಾಡಿದ್ದಕ್ಕೆ ಈಗ ಹೀಗೆಲ್ಲಾ ಆಗಿದೆ. ಆದರೆ, ರಮ್ಯಾ ಪೋಸ್ಟ್‌ಗೆ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದು ಕೂಡ ತಪ್ಪು . ಅಭಿಮಾನಿಗಳ ಅತಿರೇಕದ ವರ್ತನೆ ಸರಿ ಅಲ್ಲ. ಯಾವ ಸ್ಟಾರ್ ಆದ್ರೂ ತಮ್ಮ ಅಭಿಮಾನಿಗಳಿಗೆ ಗಲಾಟೆ ಮಾಡಿ ಅಂತ ಹೇಳಲ್ಲ. ರಮ್ಯಾ ಹೇಳಿದ ತಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತಾ? ಹೀಗಂತ ಕನ್ನಡದ ನಿರ್ಮಾಪಕ ಕೆ. ಮಂಜು ಅವರು ರಮ್ಯಾ ಮಾಡಿದ್ದು ಹಾಗೂ ಫ್ಯಾನ್ಸ್ ಮಾಡಿದ್ದು ಎರಡೂ ತಪ್ಪು ಅಂತ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *