
ಚಂದ್ರ ಕನ್ಯಾ ರಾಶಿಗೆ ಪ್ರವೇಶಿಸುವುದು ಕನ್ಯಾ ರಾಶಿಯವರಿಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ಕನ್ಯಾ ರಾಶಿಯವರ ಕೌಟುಂಬಿಕ ಜೀವನ ಸುಖ, ಶಾಂತಿಯಿಂದ ಕೂಡಿರುತ್ತದೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗಿ, ವೃತ್ತಿಯಲ್ಲಿ ಸ್ಥಿರತೆ ಸಿಗುವ ಸಾಧ್ಯತೆ ಇದೆ. ಕೆಲವು ತಿಂಗಳುಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುತ್ತದೆ. ಬಹಳ ದಿನಗಳ ನಂತರ ಲಾಭ ಕಾಣುತ್ತಾರೆ.