Headlines

ಅಭಿಮಾನಿಗಳ ಹಣ ದೋಚಿದ್ರಾ ಪವನ್‌ ಕಲ್ಯಾಣ್‌? ಹರಿಹರ ವೀರಮಲ್ಲು ವಿರುದ್ಧ ಪ್ರಕಾಶ್‌ ರಾಜ್‌ ವಾಗ್ದಾಳಿ

ಅಭಿಮಾನಿಗಳ ಹಣ ದೋಚಿದ್ರಾ ಪವನ್‌ ಕಲ್ಯಾಣ್‌? ಹರಿಹರ ವೀರಮಲ್ಲು ವಿರುದ್ಧ ಪ್ರಕಾಶ್‌ ರಾಜ್‌ ವಾಗ್ದಾಳಿ



ಅಭಿಮಾನಿಗಳ ಹಣ ದೋಚಿದ್ರಾ ಪವನ್‌ ಕಲ್ಯಾಣ್‌? ಹರಿಹರ ವೀರಮಲ್ಲು ವಿರುದ್ಧ ಪ್ರಕಾಶ್‌ ರಾಜ್‌ ವಾಗ್ದಾಳಿ

ಈ ಸಂದರ್ಭದಲ್ಲಿ ಮಹೇಶ್‌ ಬಾಬು, ಎನ್‌ಟಿಆರ್‌ ಪ್ರಸ್ತಾಪ ಮಾಡಿ, ‘ಒಂದು ಕಾರ್ಯಕ್ರಮದಲ್ಲಿ ಎನ್‌ಟಿಆರ್‌, ಮಹೇಶ್‌ ಬಾಬು ವೇದಿಕೆ ಮೇಲೆ ‘ನಾವು ಫ್ರೆಂಡ್ಸ್‌, ನೀವು ಜಗಳ ಮಾಡ್ಬೇಡಿ’ ಅಂದ್ರು. ಆದರೆ ನೀವು ಏನು (ಪವನ್‌ ಕಲ್ಯಾಣ್‌) ಹೇಳ್ತಿದ್ದೀರಿ. ತಿರುಗಿ ಹೊಡೆಯಿರಿ ಅಂತಾರಾ? ಅಭಿಮಾನದಿಂದ ಪ್ರೀತಿಸ್ತಿದ್ರೆ ಅವರನ್ನ ನೀವು ಸೈನಿಕರು ಅಂತ ಅಂದುಕೊಂಡಿದ್ದೀರಾ? ಇದು ದೊಡ್ಡ ಅಸಂಬದ್ಧ. ಆದರೆ ಜನ ಮೂರ್ಖರಲ್ಲ. ಪ್ರಧಾನಿ ಮೋದಿ ಬಯೋಪಿಕ್‌ ಮಾಡಿದ್ರೆ, ಆ ಚಿತ್ರವನ್ನ ನೂರು ಜನ ಕೂಡ ನೋಡಲಿಲ್ಲ. ಈ ಪ್ರಚಾರದ ಸಿನಿಮಾಗಳನ್ನ ಜನ ನೋಡಲ್ಲ. ನಿಮ್ಮ ಅಭಿಮಾನಿಗಳೇ ಉಗುಳ್ತಿದ್ದಾರೆ. ನೀವು ಏನೋ ಪ್ರಯೋಗ ಮಾಡಿದ್ರೆ ಅದು ವಿಫಲವಾದ್ರೆ ಬೇಸರ ಪಡಬಹುದು, ಆದರೆ ಇದು ನಿಮ್ಮ ಸೋಮಾರಿತನದಿಂದ, ಅಹಂಕಾರದಿಂದ ಐದು ವರ್ಷ ಆಗಿದೆ. ಮೊದಲು ಒಬ್ಬ ನಿರ್ದೇಶಕ ಅಂದುಕೊಂಡಿದ್ರಿ. ಆಮೇಲೆ ಇನ್ನೊಬ್ಬ ನಿರ್ದೇಶಕನನ್ನ ಕರ್ಕೊಂಡು ಬಂದ್ರಿ. ಆ ನಿರ್ದೇಶಕ ಅಂದುಕೊಂಡ ಕಥೆಯನ್ನ ಅಂದುಕೊಂಡ ರೀತಿಯಲ್ಲಿ ತೆಗೆಯೋ ಸ್ವಾತಂತ್ರ್ಯ ಕೊಟ್ಟಿದ್ದೀರಾ ನೀವು. ಸಿನಿಮಾ ಬೇರೆ, ರಾಜಕೀಯ ಬೇರೆ. ನೀವು ಪ್ರಸಿದ್ಧಿ ಪಡೆದಿದ್ದೇ ಮನರಂಜನೆಯಿಂದ, ಅಂಥದ್ರಲ್ಲಿ ಇನ್ನೊಂದನ್ನ ಬಲವಂತವಾಗಿ ತುರುಕೋದು ಎಷ್ಟರ ಮಟ್ಟಿಗೆ ಸರಿ. ನಾನು ಹೊರಗೆ ರಾಜಕೀಯ ಮಾತಾಡ್ತೀನಿ. ಆದರೆ ನನ್ನ ಸಿನಿಮಾಗಳಲ್ಲಿ ರಾಜಕೀಯ ಮಾತಾಡಲ್ಲ, ಅದು ಬೇರೆ ಆಟ. ಎರಡನ್ನೂ ಸೇರಿಸಲ್ಲ. ಇಂಥವರಿಗೆ ಜನ ಉತ್ತರ ಕೊಡ್ತಾರೆ. ಆದರೆ ಪ್ರಶ್ನಿಸುವ ಧ್ವನಿಗಳು ಇರಬೇಕು’ ಅಂತ ಹೇಳಿದ್ದಾರೆ ಪ್ರಕಾಶ್‌ ರಾಜ್‌. ಇನ್ನು ಪ್ರಶ್ನ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯಗಳನ್ನ ತಿಳಿಸಿದ್ದಾರೆ ಪ್ರಕಾಶ್‌ ರಾಜ್‌. ಪ್ರಸ್ತುತ ಅವರ ಹೇಳಿಕೆಗಳು ವೈರಲ್‌ ಆಗುತ್ತಿವೆ.



Source link

Leave a Reply

Your email address will not be published. Required fields are marked *