Headlines

ಸ್ಯಾಂಡಲ್‌ವುಡ್‌ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ, ಕಂದೀಲು ಸಿನಿಮಾಗೆ ಅವಾರ್ಡ್‌!

ಸ್ಯಾಂಡಲ್‌ವುಡ್‌ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ, ಕಂದೀಲು ಸಿನಿಮಾಗೆ ಅವಾರ್ಡ್‌!

ಸ್ಯಾಂಡಲ್‌ವುಡ್‌ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ, ಕಂದೀಲು ಸಿನಿಮಾಗೆ ಅವಾರ್ಡ್‌!

ನವದೆಹಲಿ (ಆ.1): ಕೇಂದ್ರ ಸರ್ಕಾರ 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಮಾಡಿದ್ದು, ‘ಕಂದೀಲು’ ಅತ್ಯುತ್ತಮ​​ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನ್ಯಾಷನಲ್‌ ಮೀಡಿಯಾ ಸೆಂಟರ್‌ನಲ್ಲಿ ವಿಜೇತರ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಯನ್ನು ಯಶೋಧ ಪ್ರಕಾಶ್‌ ನಿರ್ದೇಶನದ ‘ಕಂದೀಲು – ದಿ ರೇ ಆಫ್​​ ಹೋಪ್​’ ಪಡೆದುಕೊಂಡಿದೆ. ಸ್ವಸ್ತಿಕ್‌ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ಸಿನಿಮಾ ಇದಾಗಿದೆ. ಅಶುತೋಷ್‌ ಗೋವಾರಿಕರ್‌, ಕನ್ನಡದ ನಿರ್ದೇಶಕ ಪಿ.ಶೇಷಾದ್ರಿ ಇದ್ದ ತೀರ್ಪುಗಾರರ ತಂಡ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡಿದೆ.

ಬೆಸ್ಟ್​​ ಸ್ಕ್ರಿಪ್ಟ್​​ (ನಾನ್​ ಫಿಚರ್​ ಫಿಲ್ಮ್ಸ್​) ವಿಭಾಗದಲ್ಲಿ ಮೈಸೂರಿನ ಚಿದಾನಂದ ನಾಯಕ್ ಅವರ ‘ಸನ್​ಫ್ಲವರ್ಸ್​​ ವೇರ್​ ದಿ ಫಸ್ಟ್ ಒನ್ಸ್ ಟು ನೋ’ ಪ್ರಶಸ್ತಿ ಬಾಚಿಕೊಂಡಿದೆ. ಚಿದಾನಂದ ಅವರ ‘ಸನ್​ಫ್ಲವರ್ಸ್​​ ವೇರ್​​ ದಿ ಫಸ್ಟ್ ಒನ್ಸ್ ಟು ನೋ’ (Sunflowers Were The First Ones to Know) ಪ್ರತಿಷ್ಠಿತ ಕೇನ್ಸ್ ಫಿಲ್ಮ್​​ ಫೆಸ್ಟಿವಲ್‌ನಲ್ಲಿ ‘ಲಾ ಸಿನೆಫ್ ಪ್ರಶಸ್ತಿ’ ಜಯಿಸಿತ್ತು. ಈಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಾನ್‌ ಫೀಚರ್‌ ಫಿಲ್ಮ್‌ ವಿಭಾಗದ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಜಯಿಸಿದೆ.

ಸುದ್ದಿ ಅಪ್‌ಡೇಟ್‌ ಆಗುತ್ತಿದೆ.

Source link

Leave a Reply

Your email address will not be published. Required fields are marked *