Headlines

ಮಲ್ಯ, ಚೋಕ್ಸಿ ಪ್ರಕರಣದಿಂದ ಎಚ್ಚೆತ್ತ ಇಡಿ, ಅನಿಲ್‌ ಅಂಬಾನಿಗೆ ಲುಕ್‌ಔಟ್‌ ನೋಟಿಸ್‌! | Ed Issues Lookout Notice Against Anil Ambani San

ಮಲ್ಯ, ಚೋಕ್ಸಿ ಪ್ರಕರಣದಿಂದ ಎಚ್ಚೆತ್ತ ಇಡಿ, ಅನಿಲ್‌ ಅಂಬಾನಿಗೆ ಲುಕ್‌ಔಟ್‌ ನೋಟಿಸ್‌! | Ed Issues Lookout Notice Against Anil Ambani San



ಮಲ್ಯ, ಚೋಕ್ಸಿ ಪ್ರಕರಣದಿಂದ ಎಚ್ಚೆತ್ತ ಇಡಿ, ಅನಿಲ್‌ ಅಂಬಾನಿಗೆ ಲುಕ್‌ಔಟ್‌ ನೋಟಿಸ್‌! | Ed Issues Lookout Notice Against Anil Ambani San

ರಿಲಯನ್ಸ್ ಗ್ರೂಪ್‌ನ ಅನಿಲ್ ಅಂಬಾನಿಗೆ 17,000 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ದಿನವೇ ಲುಕ್‌ಔಟ್‌ ನೋಟಿಸ್‌ ಜಾರಿಯಾಗಿದೆ. ಇಡಿ ದಾಳಿ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಮುಂಬೈ (ಆ.1): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ 17 ಸಾವಿರ ಕೋಟಿ ಸಾಲ ವಂಚನೆ ಪ್ರಕರಣದಲ್ಲಿ ರಿಲಯನ್ಸ್‌ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖೇಶ್‌ ಅಂಬಾನಿ ತಮ್ಮ ಅನಿಲ್‌ ಅಂಬಾನಿಗೆ ಜಾರಿ ನಿರ್ದೇಶನಾಲಯ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ.ವಿಜಯ್‌ ಮಲ್ಯ, ಮೇಹುಲ್‌ ಚೋಕ್ಸಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಾರಿ ನಿರ್ದೇಶನಾಲಯ ಅನಿಲ್‌ ಅಂಬಾನಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ ದಿನವೇ, ತನಿಖಾಧಿಕಾರಿಯ ಅನುಮತಿ ಇಲ್ಲದೆ ವಿದೇಶಕ್ಕೆ ಪ್ರಯಾಣ ಮಾಡುವಂತಿಲ್ಲ ಎನ್ನುವ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ.

ಕಳೆದ ವಾರ, ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಹಲವಾರು ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. 17,000 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ಸೆಬಿ ತನ್ನ ತನಿಖಾ ವರದಿಯನ್ನು ಇಡಿ ಜೊತೆ ಹಂಚಿಕೊಂಡಿದೆ.

ಈ ಕುರಿತಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಅಂಬಾನಿ ಅವರನ್ನು ಜಾರಿ ನಿರ್ದೇಶನಾಲಯ (ED) ಶುಕ್ರವಾರ ವಿಚಾರಣೆಗೆ ಒಳಪಡಿಸಲಿದೆ. 17,000 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿಗೆ ಇಡಿ ಸಮನ್ಸ್ ಕಳುಹಿಸಿತ್ತು. ಆಗಸ್ಟ್ 5 ರಂದು ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ಅವರನ್ನು ಕೇಳಲಾಗಿದೆ. ಕಳೆದ ವಾರ, ಇಡಿ ರಿಲಯನ್ಸ್ ಗ್ರೂಪ್‌ಗೆ ಸಂಬಂಧಿಸಿದ ಮುಂಬೈನಲ್ಲಿ ಸುಮಾರು 35 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.

 



Source link

Leave a Reply

Your email address will not be published. Required fields are marked *