
ತಣ್ಣೀರು ಬಳಸಿ: ಬಿಸಿ ನೀರಿನ ಬದಲು ತಣ್ಣೀರಿನಲ್ಲಿ ಸಿಲ್ಕ್ ಸೀರೆಗಳನ್ನು ತೊಳೆಯುವುದು ಮುಖ್ಯ. ಬಿಸಿ ನೀರಿನಲ್ಲಿ ತೊಳೆದರೆ ಸೀರೆ ಹಾಳಾಗುತ್ತದೆ. ಸೀರೆಯ ಹೊಳಪು ಕಡಿಮೆಯಾಗುವ ಸಾಧ್ಯತೆ ಇದೆ. ತಣ್ಣೀರು ಮೃದುವಾಗಿರುತ್ತದೆ. ಸೀರೆಯ ಬಣ್ಣ ಹೋಗುವುದು, ಹೊಳಪು ಕಡಿಮೆಯಾಗುವುದು ಮುಂತಾದ ಸಮಸ್ಯೆ ಇರುವುದಿಲ್ಲ.
ಮೈಲ್ಡ್ ಸೋಪ್: ಸಿಲ್ಕ್ ಸೀರೆಗಳನ್ನು ಯಾವುದೇ ಸೋಪಿನಿಂದ ತೊಳೆಯಬಾರದು. ಸಿಲ್ಕ್ ಸೀರೆಗಳಿಗೆಂದೇ ತಯಾರಿಸಿದ ಸೋಪುಗಳು ಮಾರ್ಕೆಟ್ ನಲ್ಲಿ ಸಿಗುತ್ತವೆ. ರಫ್ ಸೋಪು ಬಳಸಿದರೆ ಸೀರೆಯ ಸಿಲ್ಕ್ ಹಾಳಾಗುತ್ತದೆ. ಸೀರೆಯ ಬಣ್ಣ ಹೋಗಿ ಕಳೆ ಕಡಿಮೆಯಾಗುತ್ತದೆ. ಸೋಪಿನ ಲೇಬಲ್ ಮೇಲೆ ಯಾವ ಬಟ್ಟೆಗಳಿಗೆ ಬಳಸಬೇಕು ಎಂದು ಬರೆದಿರುತ್ತದೆ. ಅದನ್ನು ಓದಿ ಬಳಸಿ.