‘ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ..’ ಟ್ರಂಪ್‌ರ ‘ಡೆಡ್ ಎಕಾನಮಿ’ ಹೇಳಿಕೆಗೆ ಮೋದಿ ತಿರುಗೇಟು! | Pm Modi Reject Trump S Dead Economy India Will Be World S Third Largest Econom

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ಭಾರತ ಸತ್ತ ಆರ್ಥಿಕತೆ’ ಎಂಬ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವದೇಶಿ ಚಳವಳಿಗೆ ಕರೆ ನೀಡಿದ್ದಾರೆ.

ವಾರಣಾಸಿ (ಆ.2): ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ‘ಭಾರತ ಸತ್ತ ಆರ್ಥಿಕತೆ’ ಎಂಬ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ಟ್ರಂಪ್‌ರ 25% ಸುಂಕ ಘೋಷಣೆಗೆ ಇಂದು ವಾರಣಾಸಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ವಿಶ್ವ ಆರ್ಥಿಕತೆಯು ಅನೇಕ ಆತಂಕಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಭಾರತ ತನ್ನ ರೈತರು, ಸಣ್ಣ ಕೈಗಾರಿಕೆಗಳು ಮತ್ತು ಯುವಕರ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ನಮ್ಮ ಸರ್ಕಾರ ದೇಶದ ಹಿತಾಸಕ್ತಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಸ್ವದೇಶಿ ಚಳವಳಿಗೆ ಕರೆ:

ಪ್ರಧಾನಿ ಮೋದಿ ಎಲ್ಲ ಭಾರತೀಯರಿಗೆ ‘ಸ್ವದೇಶಿ’ ಉತ್ಪನ್ನಗಳಿಗೆ ಪ್ರತಿಜ್ಞೆ ಮಾಡುವಂತೆ ಮನವಿ ಮಾಡಿದ್ದಾರೆ. ‘ಜಗತ್ತು ಅಸ್ಥಿರತೆಯ ವಾತಾವರಣವನ್ನು ಎದುರಿಸುತ್ತಿರುವಾಗ, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ನಿರ್ಣಯವು ದೇಶಕ್ಕೆ ನಿಜವಾದ ಸೇವೆಯಾಗಲಿದೆ. ಇದು ಮಹಾತ್ಮ ಗಾಂಧಿಯವರಿಗೆ ಒಂದು ಗೌರವವಾಗಿರುತ್ತದೆ’ ಎಂದರು.

ಟ್ರಂಪ್‌ರ ಟೀಕೆಗೆ ತಿರುಗೇಟು:

ಜುಲೈ 31 ರಂದು ಟ್ರಂಪ್ ಭಾರತದ ಆಮದುಗಳ ಮೇಲೆ 25% ಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಒಂದು ದಿನದ ನಂತರ, ಭಾರತ-ರಷ್ಯಾ ಸಂಬಂಧಗಳನ್ನು ಟೀಕಿಸಿ, ಎರಡೂ ದೇಶಗಳನ್ನು ‘ಸತ್ತ ಆರ್ಥಿಕತೆಗಳು’ ಎಂದು ಟ್ರೂತ್ ಸೋಶಿಯಲ್‌ನಲ್ಲಿ ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಭಾರತದ ಆರ್ಥಿಕ ಪ್ರಗತಿ ಬೆಳವಣಿಗೆ ಏರಿಕೆಯಾಗುತ್ತಿದೆ. ದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ತಮ್ಮ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

Source link

Leave a Reply

Your email address will not be published. Required fields are marked *