2 ಕೋಟಿ ಬಜೆಟ್, 11 ಕೋಟಿ ಕಲೆಕ್ಷನ್.. ಕರ್ನಾಟಕದಲ್ಲಿ ಒಡಿಶಾ ಸಿನಿಮಾ ಹವಾ, ಸ್ಯಾಂಡಲ್‌ವುಡ್‌ಗೆ ಶಾಕ್!

2 ಕೋಟಿ ಬಜೆಟ್, 11 ಕೋಟಿ ಕಲೆಕ್ಷನ್.. ಕರ್ನಾಟಕದಲ್ಲಿ ಒಡಿಶಾ ಸಿನಿಮಾ ಹವಾ, ಸ್ಯಾಂಡಲ್‌ವುಡ್‌ಗೆ ಶಾಕ್!

ಒಡಿಶಾ ಸಿನಿಮಾರಂಗದಲ್ಲೇ ಅತ್ಯಧಿಕ ಕಲೆಕ್ಷನ್‌ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಈ ಸಿನಿಮಾದ ಬಜೆಟ್‌ ಕೇವಲ 2 ಕೋಟಿ ರು. ಅಷ್ಟೇ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದು 11 ಕೋಟಿ ರು. ಕಲೆಕ್ಷನ್‌ ಮಾಡಿದೆ.

‘ಬೌ ಬುಟ್ಟು ಭೂತಾ’ ಸದ್ಯ ಬೆಂಗಳೂರಿನಲ್ಲಿ ಸದ್ದು ಮಾಡುತ್ತಿರುವ ಒಡಿಶಾ ಸಿನಿಮಾ. ದಿನೇ ದಿನೇ ಥೇಟರ್‌ಗಳ ಸಂಖ್ಯೆ ವಿಸ್ತರಿಸಿಕೊಳ್ಳುತ್ತ ಕನ್ನಡ ಸಿನಿಮಾಗಳ ಸ್ಕ್ರೀನ್‌ಗಳನ್ನೂ ಕಬಳಿಸಿ ಮುನ್ನುಗ್ಗುತ್ತಿದೆ.

ಒಡಿಶಾ ಸಿನಿಮಾರಂಗದಲ್ಲೇ ಅತ್ಯಧಿಕ ಕಲೆಕ್ಷನ್‌ ಮಾಡಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಈ ಸಿನಿಮಾದ ಬಜೆಟ್‌ ಕೇವಲ 2 ಕೋಟಿ ರು. ಅಷ್ಟೇ. ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇದು 11 ಕೋಟಿ ರು. ಕಲೆಕ್ಷನ್‌ ಮಾಡಿದೆ. ಸದ್ಯ ಬೆಂಗಳೂರಿನ ಹಲವು ಸ್ಕ್ರೀನ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಇದರ ದೆಸೆಯಿಂದ ದಿಗಂತ್‌ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಕ್ಕೆ ಸ್ಕ್ರೀನ್‌ ಸಿಗದೇ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದ್ದೂ ನಡೆದಿದೆ. ಕಡಿಮೆ ಬಜೆಟ್‌ನ ಸಿನಿಮಾಗಳಿಗೆ ಸೀಮಿತವಾಗಿ ಒಡಿಶಾ ಚಿತ್ರರಂಗದಲ್ಲಿ ಸ್ಥಳೀಯ ಸಿನಿಮಾಗಳಿಗಿಂತ ಇತರೆ ಭಾಷೆಗಳ ಸಿನಿಮಾಗಳಿಗೆ ಪ್ರೇಕ್ಷಕರು ಹೆಚ್ಚು.

ಅಲ್ಲಿ ನಮ್ಮ ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾ 15.25 ಕೋಟಿಯಷ್ಟು ಗಳಿಕೆ ಮಾಡಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಇದೀಗ ‘ಬೌ ಬುಟ್ಟು ಭೂತಾ’ ಆ ಗಳಿಕೆಯನ್ನೂ ಹಿಂದಿಕ್ಕುವ ಸೂಚನೆ ಇದೆ.

ತಜ್ಞರ ಪ್ರಕಾರ ಬೆಂಗಳೂರಿನಲ್ಲಿ ಒಡಿಶಾ ಸಿನಿಮಾವೊಂದು ಈ ಮಟ್ಟಿಗೆ ಜನಪ್ರೀತಿ ಗಳಿಸಿರುವುದು ಇದೇ ಮೊದಲು. ಇದು ಕಾಮಿಡಿ ಹಾರರ್‌ ಡ್ರಾಮಾವಾಗಿದ್ದು ಬಾಬೂಶಾನ್‌ ಮೊಹಂತಿ ಮುಖ್ಯಪಾತ್ರದಲ್ಲಿದ್ದಾರೆ.

Source link

Leave a Reply

Your email address will not be published. Required fields are marked *