ಸೆಲೆಬ್ರಿಟಿ ಸ್ಟೈಲಿಸ್ಟ್ ತೇಜಸ್ವಿನಿ ಅಂಜನ್ ಕುಮಾರ್ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳಿಗೆ ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಬಹಳ ಸರಳವಾಗಿ ಈ ಮದುವೆ ನಡೆದಿದೆ. ಮದುವೆ ಫೋಟೋ, ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದು, ಅವರು ಈ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ.

“ನನ್ನ ಜೀವನದ ಈ ಹಂತವನ್ನು ಸ್ವೀಕರಿಸುವುದು ಸುಲಭವಲ್ಲ, ನನಗೆ ಈಗ 37 ವರ್ಷ. ಅಷ್ಟೇ ಅಲ್ಲದೆ 15 ವರ್ಷದ ಮಗುವಿನ ತಾಯಿಯಾಗಿದ್ದೇನೆ! ಆದರೆ ಅಲ್ಲಿ ನಾವು, ನಮ್ಮ ಸ್ಥಿತಿ ಎಷ್ಟು ಕಠಿಣ ಆಗಿರುತ್ತದೆ ಎಂದು ಗೊತ್ತಾಯಿತು” ಎಂದು ಅವರು ಹೇಳಿದ್ದಾರೆ.

“ಇಲ್ಲಿ ಎರಡನೇ ಚಾನ್ಸ್ ಅಂದರೆ, ಅದರರ್ಥ ಬೇರೆಯವರಿಗೆ ಎರಡನೇ ಅವಕಾಶ ನೀಡುವುದು ಎಂದಲ್ಲ, ಬದಲಿಗೆ ನಾನು ನನ್ನನ್ನು ಪ್ರೀತಿಸಲು ಮತ್ತು ಪ್ರೀತಿಯನ್ನು ನಂಬಲು ನನಗೆ ಎರಡನೇ ಅವಕಾಶವನ್ನು ನೀಡುತ್ತಿದ್ದೇನೆ ಎಂದರ್ಥ” ಎಂದು ತೇಜಸ್ವಿನಿ ಹೇಳಿದ್ದಾರೆ.

“ಮನ್ನು ನನ್ನ ಪಕ್ಕದಲ್ಲಿ ಇಲ್ಲದಿದ್ದರೆ ಮತ್ತು ಈ ಅದ್ಭುತ ಮನುಷ್ಯನ ಜೊತೆ ನನ್ನನ್ನು ಮದುವೆ ಮಾಡದಿದ್ದರೆ ನನ್ನ ಜೀವನವು ಏನೂ ಆಗಿರಲಿಲ್ಲ” ಎಂದು ತೇಜಸ್ವಿನಿ ಹೇಳಿದ್ದಾರೆ.

ಅಂದಹಾಗೆ ತೇಜಸ್ವಿನಿ ಅವರು ಅಭಿಷೇಕ್ ನಗರ್ಕರ್ ಅವರನ್ನು ಮದುವೆಯಾಗಿದ್ದಾರೆ. ನಟ, ಗಾಯಕನಾಗಿ ಅಭಿಷೇಕ್ ಗುರುತಿಸಿಕೊಂಡಿದ್ದಾರೆ. ಈ ಜೋಡಿಗೆ ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ.

Source link
37ನೇ ವಯಸ್ಸಿಗೆ 15 ವರ್ಷದ ಮಗನ ಮುಂದೆ ಮದುವೆ ಆಗೋದು ಸುಲಭ ಇರಲಿಲ್ಲ: ಕನ್ನಡ ಸೆಲೆಬ್ರಿಟಿ ಕಾಸ್ಟ್ಯೂಮ್ ಡಿಸೈನರ್!