Anchor Anushree: ಮದ್ವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನು: ಎಲ್ಲರೆದುರೇ I Love You ಹೇಳಿ ನಾಚಿ ನೀರಾದ ನಟಿ!

Anchor Anushree: ಮದ್ವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನು:  ಎಲ್ಲರೆದುರೇ I Love You ಹೇಳಿ ನಾಚಿ ನೀರಾದ ನಟಿ!

Anchor Anushree: ಮದ್ವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನು:  ಎಲ್ಲರೆದುರೇ I Love You ಹೇಳಿ ನಾಚಿ ನೀರಾದ ನಟಿ!

ಆ್ಯಂಕರ್​ ಅನುಶ್ರೀ ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡ್ತಿದ್ದರೂ ಇದುವರೆಗೆ ಅವರು ಈ ಬಗ್ಗೆ ಹೇಳಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅವರು ಮಹಾನಟಿ ವೇದಿಕೆ ಮೇಲೆ ಭಾವಿ ಪತಿಗೆ ಪ್ರಪೋಸ್​ ಮಾಡಿದ್ದಾರೆ. ಇಲ್ಲಿದೆ ವಿಡಿಯೋ…

ಈಗ ಎಲ್ಲೆಲ್ಲೂ ಆ್ಯಂಕರ್​ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಿದೆ. ಇದುವರೆಗೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನಿಜವೇ ಆಗಿದ್ದಲ್ಲಿ, ಸದ್ಯ ಆ್ಯಂಕರ್​ ಅನುಶ್ರೀ ಅವರು ಸದ್ಯ ಮದುವೆಯ ಮೂಡ್​ನಲ್ಲಿ ಇದ್ದಾರೆ. ಅಷ್ಟಕ್ಕೂ ಆ್ಯಂಕರ್​ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು.

ಅನುಶ್ರೀ ಅವರು ತಲೆ ಕೆಡಿಸಿಕೊಳ್ಳದಷ್ಟು ಹೆಚ್ಚು ತಲೆ ಕೆಡಿಸಿಕೊಂಡಿದ್ದರು ಅವರ ಫ್ಯಾನ್ಸ್​. ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು ನಟಿ. ಕಾರ್ಯಕ್ರಮವೊಂದರಲ್ಲಿ ನಟಿ ಮಲೈಕಾ ವಸುಪಾಲ್​ ಅವರು ನಿಮ್ಮ ಗಂಡ ಹೇಗಿರಬೇಕು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದ್ದಾಗ, ಅನುಶ್ರೀ ಅವರು, ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು.

ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದರು. ಈ ವರ್ಷ ‘ಅನುಪತಿ’ ಬಂದೇ ಬರ್ತಾನೆ ಎಂದೂ ಹೇಳಿದ್ದರು. ಅದೇ ರೀತಿ ಅನುಶ್ರೀ ಅವರ ಮದುವೆ ಆಗಸ್ಟ್​ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್​ ಆಗಿದೆ.

ಆದರೆ, ಅನುಶ್ರೀ ಅವರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ವಿಸಿಟ್​ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಗೊತ್ತಿದ್ದೇ ಅನುಶ್ರೀ ಅವರು ಇದೀಗ ಡಾ.ರಾಜ್​ಕುಮಾರ್​ ಅವರ ಪೋಸ್ಟ್​ ಒಂದನ್ನು ಹಾಕಿದ್ದಾರೆ. ಅದರಲ್ಲಿ, ಡಾ.ರಾಜ್​ಕುಮಾರ್​ ಅವರು ಸಿನಿಮಾದ ಡೈಲಾಗ್​ ಒಂದಿದೆ. ಹಿನ್ನೆಲೆಯಲ್ಲಿ ನಟಿ ಅಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು.

ಆಗ ರಾಜ್​ ಅವರು, ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಅನುಶ್ರೀ ಹೀಗೆ ಹೇಳಿದ್ದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ.

ಆದರೆ ಮಹಾನಟಿ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಅನುಶ್ರೀ ಅವರು ಭಾವಿ ಪತಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್​ ಮಾಡಿದ್ದಾರೆ. ರಮೇಶ್​ ಅವರು ತಮ್ಮ ಪತ್ನಿಯ ಬಗ್ಗೆ ಗುಣಗಾನ ಮಾಡಿದರು. ನನ್ನ ಲೈಫ್​ನಲ್ಲಿ ಸಿಕ್ಕ ಅತಿ ದೊಡ್ಡ ಲಾಟರಿ ಎಂದರೆ ಅರ್ಚನಾ ಎಂದು I Love You ಎಂದರು.

ಬಳಿಕ ತರುಣ್​ ಸುಧೀರ್​ ಮತ್ತು ನಿಶ್ವಿಕಾ ನಾಯ್ಡು ಅವರು, ಅನುಶ್ರೀ ಅವರಿಗೆ ನೀವು ಪ್ರಪೋಸ್​ ಮಾಡಿದ್ರೆ ಹೇಗೆ ಮಾಡಬಹುದು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದರು. ಅನುಶ್ರೀ ನಾಚುತ್ತಲೇ ಬೇಡ ಬೇಡ ಎಂದರು. ಆದರೆ ಅಲ್ಲಿಗೆ ಅರ್ಧಚಂದ್ರನನ್ನು ವೇದಿಕೆ ಮೇಲೆ ಧರೆಗೆ ಇಳಿಸಲಾಯಿತು. ಆಗ ನೀವು ಪ್ರಪೋಸ್​ ಮಾಡಿ ಎಂದು ತರುಣ್​ ಸುಧೀರ್​ ಹೇಳಿದರು.

ಆಗ ಅನುಶ್ರೀ ಅವರು ನಾಚುತ್ತಲೇ ಇದುವರೆಗೆ ನನ್ನ ಜೀವನದಲ್ಲಿ ಅರ್ಧಚಂದ್ರ ಇತ್ತು. ಪೂರ್ಣಚಂದ್ರನಾಗಿ ಬೇಗ ಬಾ ಐ ಲವ್​ ಯು ಎಂದರು. ಇವರು ಮದುವೆಯಾಗುವ ಹುಡುಗನ ಹೆಸರು ರೋಷನ್​ ಎಂದು ಹೇಳಲಾಗುತ್ತಿದ್ದರೂ, ಇದೀಗ ಭಾವಿ ಪತಿಯ ಹೆಸರು ಪೂರ್ಣಚಂದ್ರ ಇರಬಹುದೇ ಎನ್ನುವ ಚರ್ಚೆ ಕೂಡ ಶುರುವಾಗಿದೆ.

ಒಟ್ಟಿನಲ್ಲಿ ನೇರವಾಗಿ ಏನನ್ನೂ ಹೇಳದ ಆ್ಯಂಕರ್​ ಅನುಶ್ರೀ ಅವರು, ಮದುವೆಯ ದಿನವೇ ಬಹಿರಂಗಪಡಿಸುವ ಉದ್ದೇಶದಲ್ಲಿ ಇದ್ದಂತಿದೆ. ಆಗಸ್ಟ್​ 18ಕ್ಕೆ ಮದುವೆ ಎಂದು ಹೇಳಲಾಗುತ್ತಿದ್ದರೂ, ಇದು ನಿಜ ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
View this post on Instagram
A post shared by Zee Kannada (@zeekannada)

Source link

Leave a Reply

Your email address will not be published. Required fields are marked *