Headlines

ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?

ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?

ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?

ಭಾರತದಲ್ಲಿ ಐಫೋನ್ ಮಾರಾಟ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ತನ್ನ ಸ್ಟೋರ್ ವಿಸ್ತರಿಸಲು ಮುಂದಾಗಿದೆ. ಸದ್ಯ ಭಾರತದ ಯಾವ ನಗರದಲ್ಲಿ ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ.

ಭಾರತದಲ್ಲಿ ಐಫೋನ್ ಬೇಡಿಕೆ ಹೆಚ್ಚಾಗಿದೆ. ಬಹುತೇಕರು ಇದೀಗ ಐಫೋನ್ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು ಐಫೋನ್ ಬಳಕೆದಾರರು ತಮ್ಮ ಫೋನ್ ಅಪ್‌ಗ್ರೇಡ್ ಮಾಡಲು ಬಯಸುತ್ತಿದ್ದಾರೆ. ಇದರ ಪರಿಣಾಮ ಇದೀಗ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆಗೊಳ್ಳುತ್ತಿದೆ.

2025ರ ಕೊನೆಯಲ್ಲಿ ಇಂಡಿಯಾದಲ್ಲಿ ಹೊಸ ಆಪಲ್ ಸ್ಟೋರ್‌ಗಳು ತೆರೆಯುತ್ತೇವೆ ಎಂದು ಸಿಇಒ ಟಿಮ್ ಕುಕ್ ಹೇಳಿದ್ದಾರೆ. ಮುಂಬೈನ ಬಿಕೆಸಿ ಸ್ಟೋರ್ ಮತ್ತು ದೆಹಲಿಯ ಸಾಕೇತ್ ಸ್ಟೋರ್ ಈಗಾಗಲೇ ಸೂಪರ್ ಹಿಟ್. ಆಗಿವೆ.

ಮುಂಬೈ ಹಾಗೂ ದೆಹಲಿಯಲ್ಲಿ ಈಗಾಗಲೇ ಎರಡು ಆ್ಯಪಲ್ ಸ್ಟೋರ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಭಾರತದ ಇತರ ಪ್ರಮುಖ ನಗರಗಳಲ್ಲಿ ಆ್ಯಪಲ್ ಸ್ಟೋರ್ ತೆರಯಲು ಆ್ಯಪಲ್ ಮುಂದಾಗಿದೆ. ಯಾವೆಲ್ಲಾ ನಗರದಲ್ಲಿ ಆ್ಯಪಲ್ ತನ್ನ ಸ್ಟೋರ್ ತೆರೆಯಲಿದೆ ಅನ್ನೋ ಕುತೂಹಲ ಇದೀಗ ಹೆಚ್ಚಾಗಿದೆ.

ಮೂಲಗಳ ಪ್ರಕಾರ ಮುಂಬೈನಲ್ಲಿ ಮತ್ತೊಂದು ಆ್ಯಪಲ್ ಸ್ಟೋರ್ ಆರಂಭಗೊಳ್ಳಲಿದೆ.  ವಿಶೇಷ ಅಂದರೆ ಈ ಬಾರಿ ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲೂ ಹೊಸ ಆ್ಯಪಲ್ ಸ್ಟೋರ್ ಆರಂಭಗೊಳ್ಳಲಿದೆ ಎಂದು ಮೂಲಗಳು ಹೇಳುತ್ತಿದೆ. ಪುಣೆಯ ಕೋಪ ಮಾಲ್, ನೋಯ್ಡಾದ ಡಿಎಲ್‌ಎಫ್ ಮಾಲ್ – ಇವು ಹೊಸ ಆಪಲ್ ಸ್ಟೋರ್‌ಗಳ ಸಂಭಾವ್ಯ ಸ್ಥಳ ಎಂದು ಹೇಳಲಾಗುತ್ತಿದೆ.

ಹೊಸ ಸ್ಟೋರ್‌ಗಳಿಗೆ ಆಪಲ್ ಈಗಾಗಲೇ ನೇಮಕಾತಿ ಶುರು ಮಾಡಿದೆ ಅಂತ ಮನಿಕಂಟ್ರೋಲ್ ವರದಿ ಮಾಡಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಹೊರತುಪಡಿಸಿದರೆ ಇತರ ನಗರಗಳಲ್ಲಿ ಸ್ಟೋರ್ ತೆರೆಯವ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇಂಡಿಯಾದಲ್ಲಿ ಐಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಈ ಹೊಸ ಸ್ಟೋರ್‌ಗಳಲ್ಲಿ ಆಪಲ್‌ನ ಐಫೋನ್‌ಗಳು, ಐಪ್ಯಾಡ್‌ಗಳು, ಮ್ಯಾಕ್‌ಗಳು, ಆಪಲ್ ವಾಚ್‌ಗಳು ಎಲ್ಲವೂ ಇರಲಿದೆ. ಅಧೀಕೃತ ಆ್ಯಪಲ್ ಫೋನ್ ಹಾಗೂ ಆ್ಯಕ್ಸೆಸರಿ ಲಭ್ಯವಾಗಲಿದೆ.

ಇಂಡಿಯಾ ಜೊತೆಗೆ ಗಲ್ಫ್ ದೇಶಗಳಲ್ಲೂ ಹೊಸ ಸ್ಟೋರ್‌ಗಳನ್ನು ತೆರೆಯೋ ಪ್ಲ್ಯಾನ್ ಆಪಲ್‌ಗೆ ಇದೆ ಅಂತ ವರದಿಗಳು ಹೇಳ್ತಿವೆ. ಜಪಾನ್‌ನ ಒಸಾಕಾದಲ್ಲಿ ಆಪಲ್ ಒಂದು ಹೊಸ ಸ್ಟೋರ್ ತೆರೆದಿದೆ.

Source link

Leave a Reply

Your email address will not be published. Required fields are marked *