Headlines

ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್​ನಲ್ಲಿ ಶುಭಾಂಶು ಶುಕ್ಲಾ ಯಶಸ್ವೀ ಡಾಕಿಂಗ್, ಅಪ್ಪ-ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪ

ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್​ನಲ್ಲಿ ಶುಭಾಂಶು ಶುಕ್ಲಾ ಯಶಸ್ವೀ ಡಾಕಿಂಗ್, ಅಪ್ಪ-ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪ


ಲಖನೌ, ಜೂನ್ 26: ಆ್ಯಕ್ಸಿಯಮ್-4 ಮಿಶನ್ ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಮತ್ತು ಅವರೊಂದಿಗೆ ಇತರ ಮೂವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ಕ್ರ್ಯೂ ಡ್ರಾಗನ್ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಶನ್ (ಐಎಸ್ಎಸ್) (International Space Station ) ತಲುಪಿದ್ದು, ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಹಾರಿದ ಎರಡನೇ ಭಾರತೀಯ ಮತ್ತು ಐಎಸ್ಎಸ್ ತಲುಪಿದ ಮೊಟ್ಟ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಭಾರತೀಯ ಕಾಲಮಾನದ ಪ್ರಕಾರ ಸಾಯಂಕಾಲ 4:03 ಗಂಟೆಗೆ ಸ್ಪೇಸ್ ಎಕ್ಸ್ ಡ್ರಾಗನ್ ಐಎಸ್​ಎಸ್ ನಲ್ಲಿ ಡಾಕ್ ಆಗಿದೆ. ನೌಕೆ ಡಾಕ್ ಆದ ಕೂಡಲೇ ಗಗನಯಾತ್ರಿಗಳು ಸ್ಪೇಸ್ ಸ್ಟೇಶನ್ ಒಳಗಡೆ ಪ್ರವೇಶಿಸುವುದಿಲ್ಲ ಎಂದು ಮಾಹಿತಿಯೊಂದು ಹೇಳುತ್ತದೆ. ಶುಕ್ಲಾ ಅವರೊಂದಿಗೆ ಅಮೆರಿಕದ ಪೆಗ್ಗಿ ವ್ಹಿಟ್ಸನ್, ಪೊಲೆಂಡ್​ನ ಸ್ಲೋವಾಜ್ ಉಜಾನ್​ಸ್ಕಿ ಮತ್ತು ಹಂಗರಿಯ ಟೈಬರ್ ಕಾಪು ಗಗನಯಾತ್ರಿಗಳಾಗಿದ್ದಾರೆ.

ಇದನ್ನೂ ಓದಿ:  ಶುಭಾಂಶು ಶುಕ್ಲಾ 1.4 ಶತಕೋಟಿ ಭಾರತೀಯರ ಭರವಸೆ ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದಾರೆ; ಆಕ್ಸಿಯಮ್ -4 ಉಡಾವಣೆಗೆ ಮೋದಿ ಶ್ಲಾಘನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *