ಅಶ್ಲೀಲ ಮೆಸೇಜ್ ಕಳಿಸಿದ್ದ 4 ದರ್ಶನ್ ಫ್ಯಾನ್ಸ್ ಅರೆಸ್ಟ್.. ರಮ್ಯಾ ಕೊಟ್ಟ ದೂರು ಕೆಲಸ ಮಾಡ್ತಿದೆ! | Darshan 4 Fans Arrested In Different Locations From Actress Ramya Complaint

ಅಶ್ಲೀಲ ಮೆಸೇಜ್ ಕಳಿಸಿದ್ದ 4 ದರ್ಶನ್ ಫ್ಯಾನ್ಸ್ ಅರೆಸ್ಟ್.. ರಮ್ಯಾ ಕೊಟ್ಟ ದೂರು ಕೆಲಸ ಮಾಡ್ತಿದೆ! | Darshan 4 Fans Arrested In Different Locations From Actress Ramya Complaint



ಅಶ್ಲೀಲ ಮೆಸೇಜ್ ಕಳಿಸಿದ್ದ 4 ದರ್ಶನ್ ಫ್ಯಾನ್ಸ್ ಅರೆಸ್ಟ್.. ರಮ್ಯಾ ಕೊಟ್ಟ ದೂರು ಕೆಲಸ ಮಾಡ್ತಿದೆ! | Darshan 4 Fans Arrested In Different Locations From Actress Ramya Complaint

ನಟಿ ರಮ್ಯಾ ಅವರು ತಮಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಮೆಸೇಜ್ ಕಳಿಸಿದವರ ವಿರುದ್ಧ ದೂರು ದಾಖಲಾದ ಬೆನ್ನಲ್ಲೆ ಮೊನ್ನೆ 3 ಜನರ ಬಂಧನ ಆಗಿತ್ತು. ಈಗ ಮತ್ತೆ ನಾಲ್ಕು ಜನರ ಬಂಧನ ಆಗಿದ್ದು ಅವರ ಫೋಟೋ ಕೂಡ ವೈರಲ್ ಆಗಿದೆ. ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟೂ 12 ಜನರ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಟ್ರೆಂಡಿಂಗ್ ಸುದ್ದಿ ಅಂದ್ರೆ ಅದು ನಟಿ ರಮ್ಯಾ (Ramya) ಹಾಗೂ ದರ್ಶನ್ ಫ್ಯಾನ್ಸ್ (D Boss Fans) ನಡುವೆ ನಡೆಯುತ್ತಿರುವ ಗಲಾಟೆ. ನಟ ದರ್ಶನ್‌ ಕೇಸ್‌ ಸಂಬಂಧ, ಸುಪ್ರೀಂ ಕೋರ್ಟ್ ಚರ್ಚೆ ಉಲ್ಲೇಖಿಸಿ ನಟಿ ರಮ್ಯಾ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ನಟ ದರ್ಶನ್ ಫ್ಯಾನ್ಸ್ ಕೆರಳಿಸಿದೆ. ಅದಕ್ಕೆ ರಿಯಾಕ್ಟ್ ಮಾಡುವ ಭರದಲ್ಲಿ ಅವರು ಡಿ ಬಾಸ್ ಫ್ಯಾನ್ಸ್ ಎನ್ನಲಾಗಿರುವ ಕೆಲವರು ನಟಿ ರಮ್ಯಾ ಅವರಿಗೆ ಫೇಕ್ ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ. ಆ ಬಗ್ಗೆ ರಮ್ಯಾ ಅವರು ಕಮೀಷನರ್ ಬಳಿಯೇ ಹೋಗಿ ದೂರು ನೀಡಿದ್ದಾರೆ. ಈಗ ಆ ಕೇಸ್ ವಿಚಾರಣೆ ಅಂಗವಾಗಿ ಮತ್ತೆ 4 ಜನರ ಬಂಧನವಾಗಿದೆ.

ನಟಿ ರಮ್ಯಾ ಅವರು ತಮಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಮೆಸೇಜ್ ಕಳಿಸಿದವರ ವಿರುದ್ಧ ದೂರು ದಾಖಲಾದ ಬೆನ್ನಲ್ಲೆ ಮೊನ್ನೆ 3 ಜನರ ಬಂಧನ ಆಗಿತ್ತು. ಈಗ ಮತ್ತೆ ನಾಲ್ಕು ಜನರ ಬಂಧನ ಆಗಿದ್ದು ಅವರ ಫೋಟೋ ಕೂಡ ವೈರಲ್ ಆಗಿದೆ. ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟೂ 12 ಜನರ ಮಾಹಿತಿಯನ್ನು ಇನ್ಸ್ಟಾಗ್ರಾಂ ಸಂಸ್ಥೆ ನೀಡಿದೆ. ಈಗ ಅವರಲ್ಲಿ ನಾಲ್ಕು ಜನರ ಬಂಧನ ಆಗಿದೆ. ಇನ್ನುಳಿದ 8 ಜನರಲ್ಲಿ ಹಲವರು ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಕೆಲವು ಆರೋಪಿಗಳು ತಮ್ಮ ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಆರೋಪಿಗಳಲ್ಲಿ ಕಡೂರು ನಿವಾಸಿ ಆರೋಪಿ ರಾಜೇಶ್ ಅತೀ ಹೆಚ್ಚು ಅಶ್ಲೀಲ ಮೆಸೇಜ್ ಮಾಡಿದ್ದಾರೆ. ತನ್ನದೇ ಖಾಸಗಿ ಅಂಗಾಂಗಗಳನ್ನು ಫೋಟೊ ವಿಡಿಯೋ ಮಾಡಿ ರಮ್ಯಾಗೆ ಕಳಿಸಿ ಹಿಂಸೆ ನೀಡಿದ್ದ. ಆಶ್ಲೀಲ ವಿಡಿಯೋ ಮತ್ತು ಫೋಟೊ ಕಳಿಸಿದ್ದ ರಾಜೇಶ್. ಸದ್ಯ ಆರೋಪಿ ರಾಜೇಶ್ನನ್ನು ಬಂಧನ ಮಾಡಿ, ಆತನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ರಾಜೇಶ್, ನಟ ದರ್ಶನ್ ಮತ್ತು ಧನ್ವೀರ್ ಅಭಿಮಾನಿ ಆಗಿದ್ದಾನೆ ಎನ್ನಲಾಗಿದೆ.

ಇನ್ನುಳಿದಂತೆ, ಓಬಣ್ಣ ಟಿ, ಭುವನ್ ಗೌಡ, ಗಂಗಾಧರ್ ಅರೆಸ್ಟ್ ಆಗಿದ್ದಾರೆ. ಸದ್ಯ ಈ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ 30 ಜನರ ಮೇಲೆ ದೂರು ದಾಖಲಾಗಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಈ ಕೇಸ್ ದಿನದಿನಕ್ಕೂ ಜಟಿಲತೆ ಪಡೆದುಕೊಳ್ಳುತ್ತಿದೆ. ರಮ್ಯಾ ಪರವಾಗಿ ಹಲವರು ಬ್ಯಾಟ್ ಬೀಸುತ್ತಿದ್ದರೆ ಕೆಲವೊಬ್ಬರು ಈ ಪ್ರಕರಣದ ಬಗ್ಗೆ ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ. ಮುಂದೆ ಇದು ಎಲ್ಲಿಗೆ ತಲುಪುತ್ತೋ ಏನೋ!



Source link

Leave a Reply

Your email address will not be published. Required fields are marked *