Headlines

ಗುಡ್​ನ್ಯೂಸಾ ಕೇಳಿದ್ದಕ್ಕೆ ಉರಿದುಬಿದ್ದಿದ್ದ ನಟಿ ಪರಿಣಿತಿ ಚೋಪ್ರಾ ಕೊನೆಗೂ ಕೊಟ್ಟೇ ಬಿಟ್ರು ಸುದ್ದಿ! ಅಪ್ಪ ಆಗ್ತಿರೋ ಸಂಸದ? | Is Parineeti Chopra Pregnant Husband Raghav Chadha Says Will Give Good News Suc

ಗುಡ್​ನ್ಯೂಸಾ ಕೇಳಿದ್ದಕ್ಕೆ ಉರಿದುಬಿದ್ದಿದ್ದ ನಟಿ ಪರಿಣಿತಿ ಚೋಪ್ರಾ ಕೊನೆಗೂ ಕೊಟ್ಟೇ ಬಿಟ್ರು ಸುದ್ದಿ! ಅಪ್ಪ ಆಗ್ತಿರೋ ಸಂಸದ? | Is Parineeti Chopra Pregnant Husband Raghav Chadha Says Will Give Good News Suc



ಗುಡ್​ನ್ಯೂಸಾ ಕೇಳಿದ್ದಕ್ಕೆ ಉರಿದುಬಿದ್ದಿದ್ದ ನಟಿ ಪರಿಣಿತಿ ಚೋಪ್ರಾ ಕೊನೆಗೂ ಕೊಟ್ಟೇ ಬಿಟ್ರು ಸುದ್ದಿ! ಅಪ್ಪ ಆಗ್ತಿರೋ ಸಂಸದ? | Is Parineeti Chopra Pregnant Husband Raghav Chadha Says Will Give Good News Suc

ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಶೀಘ್ರದಲ್ಲಿಯೇ ಅಪ್ಪ-ಅಮ್ಮ ಆಗ್ತಿದ್ದಾರಾ? ಈ ಬಗ್ಗೆ ರಾಘವ್​ ಹೇಳಿದ್ದೇನು? 

ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. 2023ರ ಸೆಪ್ಟೆಂಬರ್​ನಲ್ಲಿ ನಟಿ ಆಮ್​ ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕೈಹಿಡಿದಿದ್ದಾರೆ. ಮದುವೆಯಾಗಿ ಒಂದೂವರೆ ವರ್ಷವಾದರೂ, ಗುಡ್​ನ್ಯೂಸ್​ ಇಲ್ವಾ ಎಂದು ನೆಟ್ಟಿಗರು ಪದೇ ಪದೇ ಅವರನ್ನು ಪ್ರಶ್ನೆ ಮಾಡುತ್ತಿದ್ದರು. ಇದೀಗ ಕೊನೆಗೂ ನಟಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ದಿ ಕಪಿಲ್​ ಶರ್ಮಾ ಷೋನಲ್ಲಿ ಮಗುವಿನ ವಿಷಯ ಬಂದಾಗ, ಶೀಘ್ರದಲ್ಲಿಯೇ ಗುಡ್​ನ್ಯೂಸ್​ ಕೊಡುತ್ತೇವೆ ಎಂದು ರಾಘವ್​ ಚಡ್ಡಾ ಹೇಳಿದರು. ಆ ಟೈಮ್​ನಲ್ಲಿ ಹೇಳುತ್ತೇವೆ ಎನ್ನುವ ಮೂಲಕ ತಾವು ಶೀಘ್ರದಲ್ಲಿಯೇ ಅಪ್ಪ ಆಗ್ತಿರೋ ಬಗ್ಗೆ ಹಿಂಟ್​ ಕೊಟ್ಟರು.

ಅಷ್ಟಕ್ಕೂ, ಕಳೆದ ವರ್ಷ ನಟಿ ಲೂಸ್​ ಡ್ರೆಸ್​ ಧರಿಸಿ ಕಾಣಿಸಿಕೊಂಡಿದ್ದರು. ಆಗ ಅವರ ಹೊಟ್ಟೆ ಮುಂದೆ ಬಂದಂತೆ ಕಾಣಿಸುತ್ತಿತ್ತು. ಆಗ ನಟಿ ಗರ್ಭಿಣಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಉಂಟಾಗಿತ್ತು. ಇದೇ ರೀತಿ ದೀಪಿಕಾ ಪಡುಕೋಣೆಗೂ ಮದುವೆಯಾದ ಕೆಲ ತಿಂಗಳಿನಲ್ಲಿಯೇ ಸುದ್ದಿಯಾಗಿದ್ದನ್ನು ಹಾಗೂ ತಮ್ಮ ಬಗ್ಗೆ ಹರಿದಾಡಿದ್ದ ಸುದ್ದಿಯ ಬಗ್ಗೆ ನೊಂದು ನಟಿ ಹೇಳಿದ್ದ ಮಾತುಗಳು ಪುನಃ ವೈರಲ್​ ಆಗುತ್ತಿವೆ. ತಾವು ಧರಿಸಿರುವ ಸಡಿಲವಾಗಿರುವ ಬಟ್ಟೆ ಎನ್ನುವ ಹಿನ್ನೆಲೆಯಲ್ಲಿ ನಟಿಯರು ಜನರ ಬಾಯಲ್ಲಿ ಗರ್ಭಿಣಿ ಯಾವಾಗ ಆಗುತ್ತಾರೆ ಎಂಬ ಬಗ್ಗೆ ಮಾರ್ಮಿಕವಾಗಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ತಾವು ಗರ್ಭಿಣಿ ಎಂಬ ಸುದ್ದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಗರ್ಭಿಣಿ ಸುದ್ದಿ ಹರಡುವವರಿಗೆ ಪರೋಕ್ಷವಾಗಿ ಈ ಮೂಲಕ ಚುಚ್ಚಿದ್ದರು. ಅವರು ಹೇಳಿದ್ದೇನೆಂದರೆ, ನಟಿಯರು ಗರ್ಭಿಣಿ ಯಾವಾಗ ಆಗುತ್ತಾರೆ ಎಂದರೆ, ಕಫ್ತಾನ್​ ಉಡುಗೆ ತೊಟ್ಟಾಗ, ಸಡಿಲವಾಗಿರುವ ಷರ್ಟ್​ ತೊಟ್ಟಾಗ ಮತ್ತು ಕಂಫಿ ಇಂಡಿಯನ್​ ಕುರ್ತಾ ಧರಿಸಿದಾಗ ಎಂದಿದ್ದರು. ಈ ಮೂಲಕ ಸುಖಾಸುಮ್ಮನೇ ಸುದ್ದಿ ಹರಡುವವರ ಬಗ್ಗೆ ಗರಂ ಆಗಿದ್ದರು.

ಸಾಮಾನ್ಯವಾಗಿ ನಟ-ನಟಿಯರ ಬಗ್ಗೆ ರೂಮರ್ಸ್​ ಸದಾ ಹರಡುತ್ತಲೇ ಇರುತ್ತದೆ. ಅವರ ಸಂಬಂಧ, ರಿಲೇಷನ್​, ಲಿವ್​ ಇನ್​ ರಿಲೇಷನ್​, ಡೇಟಿಂಗ್​ ಇವೆಲ್ಲವೂ ಸದಾ ಚಾಲ್ತಿಯಲ್ಲಿ ಇರುವ ವಿಷಯಗಳೇ. ಅದರಲ್ಲಿಯೂ ನಟ-ನಟಿಯರು ಯಾರದ್ದಾದರು ಜೊತೆ ಎಂಗೇಜ್​ ಆಗಿದ್ದಾರೆ ಎಂದಾಗ ಅವರ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಮದುವೆಯಾಗಿ ಬಿಟ್ಟರೆ, ಅವರನ್ನೇ ಹಿಂಬಾಲಿಸುವ ಪಾಪರಾಜಿಗಳ ಸಂಖ್ಯೆ ಕಡಿಮೆ ಏನಿಲ್ಲ. ಅವರು ಯಾವಾಗ ಗರ್ಭಿಣಿಯಾಗುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತದೆ. ಇದು ಕೇವಲ ನಟ-ನಟಿಯರ ವಿಷಯವಲ್ಲದೇ ಮದುವೆಯಾದ ಮೇಲೆ ಬಹುತೇಕ ಮಹಿಳೆಯರಿಗೆ ಇದೇ ಪ್ರಶ್ನೆ ಕೇಳುವುದು ಸಹಜವಾದರೂ ನಟಿಯರ ಮೇಲೆ ದೊಡ್ಡ ಕಣ್ಣು ಇರುವ ಕಾರಣ, ಇವರು ಯಾವಾಗ ಗರ್ಭ ಧರಿಸುತ್ತಾರೆ, ಅದರ ಬಗ್ಗೆ ತಾವೇ ಮೊದಲು ವಿಷಯ ತಿಳಿಸಬೇಕು ಎಂದು ಬಹುತೇಕ ಮಂದಿ ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಮದುವೆಯಾದ ಕೆಲವೇ ತಿಂಗಳಿನಲ್ಲಿಯೇ ಮಗುವಾಗುವ ಸಂಪ್ರದಾಯವೂ ಇರುವ ಕಾರಣ, ನಟಿಯರ ಮೇಲೆ ವಿಶೇಷ ದೃಷ್ಟಿ ಇಡಲಾಗುತ್ತದೆ.

ಕೆಲ ತಿಂಗಳ ಹಿಂದೆ ನಟಿ ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. ಇದೇ ಕಾರಣಕ್ಕೆ ನಟಿ ಗರ್ಭಿಣಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗಿದೆ.

 



Source link

Leave a Reply

Your email address will not be published. Required fields are marked *