santhosh balaraj death reason: ‘ಕರಿಯ’ ಸಿನಿಮಾ ನಿರ್ಮಾಪಕನ ಪುತ್ರ, ನಟ ಸಂತೋಷ್‌ ಬಾಲರಾಜ್‌ ನಿಧನ! ಕೊನೆಗೂ ಚಿಕಿತ್ಸೆ ಫಲಕೊಡಲಿಲ್ಲ! | Producer Anekal Balraj Son Santhosh Balaraj Passed Away Due To Jaundice

Anekal Balraj Son Santhosh News: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್‌ ಬಾಲ್‌ರಾಜ್‌ನ ಪುತ್ರ, ನಟ ಸಂತೋಷ್‌ ಬಾಲ್‌ರಾಜ್‌ ಅವರು ನಿಧನರಾಗಿದ್ದಾರೆ. ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಸುನೀಗಿದ್ದಾರೆ. 

ಕನ್ನಡದ ಯುವ ನಟ ಬಾಲರಾಜ್ ನಿಧನರಾಗಿದ್ದಾರೆ. ಹಿರಿಯ ನಿರ್ಮಾಪಕ‌ ಆನೇಕಲ್‌ ಬಾಲರಾಜ್ ಪುತ್ರ ಸಂತೋಷ ಬಾಲರಾಜ್ ಅವರು ಅಸು ನೀಗಿದ್ದಾರೆ. ಸಂತೋಷ್‌ ಅವರಿಗೆ 34 ವರ್ಷ ವಯಸ್ಸಾಗಿತ್ತು. ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕು ಎಂದುಕೊಂಡಿದ್ದ ಸಂತೋಷ್‌ ಅವರು ಚಿಕ್ಕ ವಯಸ್ಸಿಗೆ ಬಾರದೂರಿಗೆ ಪಯಣ ಬೆಳೆಸಿದ್ದಾರೆ.

ಸಂತೋಷ್‌ಗೆ ಏನಾಗಿತ್ತು?

ಕಿರಿಯ ವಯಸ್ಸಿಗೆ ಜಾಂಡೀಸ್ ಕಾಯಿಲೆಯಿಂದ ಬಳಲಿ ಐಸಿಯುನಲ್ಲಿದ್ದರು. ಕೊನೆಗೂ ಸಂತೋಷ್ ಬಾಲರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ?

ʼಕರಿಯಾ-2ʼ, ʼಕೆಂಪʼ, ʼಗಣಪʼ, ʼಬರ್ಕ್ಲಿʼ, ʼಸತ್ಯʼ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರು. ಜಾಂಡೀಸ್ ಕಾಯಿಲೆ ಮೈಗೆಲ್ಲ ಹರಡಿ ಗಂಭೀರ ಸ್ಥಿತಿಯಲ್ಲಿದ್ದರು.

ಕರಿಯ ಸಿನಿಮಾ ನಿರ್ಮಾಪಕನ ಪುತ್ರ!

ಅಪ್ಪ ಅನೇಕಲ್ ಬಾಲರಾಜ್ ದರ್ಶನ್ ಅವರಿಗೆ ʼಕರಿಯʼ ಸಿನಿಮಾ ಮಾಡಿದ್ದರು. ಜೋಗಿ ಪ್ರೇಮ್‌ ಹಾಗೂ ನಟ ದರ್ಶನ್‌ ತೂಗುದೀಪ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಈ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. 2022ರಲ್ಲಿ ರಸ್ತೆ ಅಪಘಾತದಲ್ಲಿ ಆನೇಕಲ್‌ ಬಾಲರಾಜ್‌ ಅವರು ನಿಧನರಾಗಿದ್ದರು. ಸಂತೋಷ್ ಬಾಲರಾಜ್‌ಗೆ ಮದುವೆ ಆಗಿರಲಿಲ್ಲ, ತಾಯಿ ಜೊತೆಗಿದ್ದರು. ಜಾಂಡೀಸ್‌ ಎಂದು ಅವರು ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Source link

Leave a Reply

Your email address will not be published. Required fields are marked *